ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜರ್ದಾರಿ ಜಬರ್ದಸ್ತ್ ಊಟದ ಮೆನು ಔಟ್

By Mahesh
|
Google Oneindia Kannada News

ನವದೆಹಲಿ, ಏ.8: ಇಸ್ಲಾಮಾಬಾದಿನಿಂದ ನವದೆಹಲಿಗೆ ಭಾನುವಾರ(ಏ.8)ಬಂದಿಳಿದ ಪಾಕ್ ಅಧ್ಯಕ್ಷ ಜರ್ದಾರಿ ಅವರನ್ನು ಬರಮಾಡಿಕೊಳ್ಳಲು ಹಸಿದ ಹೊಟ್ಟೆಯಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಕಾದು ಕೂತಿದ್ದರು. ಅಂತೂ ಒಂದು ಗಂಟೆ ತಡವಾಗಿ ಬಂದ ಜರ್ದಾರಿ ಹಾಗೂ ಪರಿವಾರಕ್ಕೆ ಭರ್ಜರಿ ಔತಣ ತಯಾರಾಗಿದೆ.

ಪ್ರಧಾನಿ ಮನಮೋಹನ್ ಸಿಂಗ್ ಅವರ 7ಆರ್ ಸಿಆರ್ ನಿವಾಸಲ್ಲಿ ಅಧ್ಯಕ್ಷ ಜರ್ದಾರಿ ಹಾಗೂ ಅವರ 40 ಜನರ ಪರಿವಾರಕ್ಕೆ ಭರ್ಜರಿ ಭೋಜನ ಕೂಟ ನೀಡಲಾಗುತ್ತಿದ್ದು, ಯಾರು ಯಾರು ಪಾಲ್ಗೊಳ್ಳಲಿದ್ದಾರೆ. ಊಟದ ಮೆನು ಏನು ಎಂಬುದು ಬಹಿರಂಗವಾಗಿದೆ.

ಭಾರತದ ವಿವಿಧ ಪ್ರದೇಶದ ರುಚಿಕರ ಖಾದ್ಯಗಳನ್ನು ಆಯ್ಕೆ ಮಾಡಿ ಜರ್ದಾರಿ ಅವರಿಗೆ ನೀಡಲಾಗುತ್ತಿದೆ. ಮೊಸರು ಮಿಶ್ರಿತ ಕಾಶ್ಮೀರ ಗೋಶ್ತಬ ಮಾಂಸದುಂಡೆಗಳ ಸಾರು ಪ್ರಮುಖ ಖಾದ್ಯವಾಗಲಿದೆ.

ಉಳಿದಂತೆ ದೋಸೆ, ಅವಿಯಲ್(ಮಿಶ್ರ ತರಕಾರಿ ಸಹಿತ), ಕರಾವಳಿಯ ಸೀಗಡಿ ಮೀನಿನ ಖಾದ್ಯ ದಕ್ಷಿಣ ಭಾರತದ ಕಡೆಯಿಂದ ಪಾಕ್ ಅಧ್ಯಕ್ಷರ ಹೊಟ್ಟೆಪೂಜೆಗೆ ಸಿದ್ಧವಾಗಿದೆ.

ಮಧ್ಯ ಭಾರತದಿಂದ ಬರ್ರಾ ಕಬಾಬ್, ಉತ್ತರ ಫಿರ್ನಿ ಹಾಗೂ ಬೆಂಗಾಳಿ ಖಾದ್ಯ ಸಂದೇಶ್ ಜರ್ದಾರಿ ಪರಿವಾರದ ಹೊಟ್ಟೆ ತುಂಬಿಸಲಿದೆ.

ಸೋನಿಯಾಜಿ ಮಿಸ್ : ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಭೋಜನ ಕೂಟಕ್ಕೆ ತೆರಳದೆ ತಮ್ಮ ಪ್ರತಿನಿಧಿಯಾಗಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಅವರನ್ನು ಕಳುಹಿಸಿದ್ದಾರೆ. ಸೋನಿಯಾಜಿ ಅವರ ಗೈರು ಹಾಜರಾತಿ ಬಗ್ಗೆ ಹೆಚ್ಚಿನ ವಿವರಗಳು ಲಭ್ಯವಾಗಿಲ್ಲ.

ಉಳಿದಂತೆ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದಲ್ಲಿ ಬಿಜೆಪಿಯ ಎಲ್ ಕೆ ಅಡ್ವಾಣಿ, ಸುಷ್ಮಾ ಸ್ವರಾಜ್ ಸೇರಿದಂತೆ ಇನ್ನೂ ಅನೇಕ ನಾಯಕರು ಸೌಹಾರ್ದ ಭೋಜನ ಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ.

English summary
Mouth-watering Kashmiri delicacy Goshtaba are among a spread of delicacies from various parts of India awaiting Pakistan President Asif Ali Zardari at the lunch with Prime Minister Manmohan Singh here tomorrow.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X