ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಗರಿಕ ಸೇವಾ ಖಾತರಿ ಕಾಯ್ದೆ-ಸಕಾಲ ಜಾರಿ

By Mahesh
|
Google Oneindia Kannada News

Karnataka Guarantee of Services Act
ಬೆಂಗಳೂರು, ಏ.2: 'ಕರ್ನಾಟಕ ನಾಗರಿಕ ಸೇವಾ ಖಾತರಿ ಅಧಿನಿಯಮ -2012' ಅಥವಾ ಸಕಾಲ ಯೋಜನೆ ಏ.2ರಿಂದ ಬೆಂಗಳೂರು ಸೇರಿದಂತೆ ರಾಜ್ಯದ 30 ಜಿಲ್ಲೆಗಳಲ್ಲಿ ಅನುಷ್ಠಾನಕ್ಕೆ ಬರಲಿದೆ.

ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಅವರು ಈ ಮಹತ್ವಾಕಾಂಕ್ಷಿ ಯೋಜನೆಗೆ ಸೋಮವಾರ(ಏ.2) ಚಾಲನೆ ನೀಡಿದರು. ನಾಗರಿಕರಿಗೆ ವಿಳಂಬಯಿಲ್ಲದೆ ಸರ್ಕಾರಿ ಸೇವೆಗಳನ್ನು ಒದಗಿಸುವ ದೃಷ್ಟಿಯಿಂದ ಸರ್ಕಾರ ಯೋಜನೆ ಇದಾಗಿದೆ.

ನಾಗರಿಕರಿಗೆ ವಿವಿಧ ರೀತಿಯ ಸೇವೆಗಳನ್ನು ಪೂರೈಸುವ 11 ಇಲಾಖೆ-ಕಂದಾಯ, ಶಿಕ್ಷಣ, ಆರ್ಥಿಕ ಇಲಾಖೆ, ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಆಹಾರ ಮತ್ತು ನಾಗರಿಕ ಪೂರೈಕೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಸ್ಥಳೀಯ ಸಂಸ್ಥೆಗಳು, ಕಾರ್ಮಿಕ ಇಲಾಖೆ, ಸಾರಿಗೆ ಇಲಾಖೆ ಮತ್ತು ಆರೋಗ್ಯ ಇಲಾಖೆಗಳ ಒಟ್ಟು 151 ಸೇವೆಗಳನ್ನು ಈ ಕಾಯ್ದೆಯ ವ್ಯಾಪ್ತಿಯಲ್ಲಿ ತರಲಾಗಿದೆ.

ಅರ್ಜಿ ಸಲ್ಲಿಸುವುದು ಸುಲಭ: ವಿವಿಧ ಇಲಾಖೆಗಳಲ್ಲಿ ಸೇವೆಯನ್ನು ಪಡೆಯಲು ಬಯಸುವ ನಾಗರಿಕರು ಸಂಬಂಧಿತ ದಾಖಲೆಗಳು ಮತ್ತು ನಿಗದಿಪಡಿಸಿದ ಶುಲ್ಕದೊಂದಿಗೆ ಅರ್ಜಿಯನ್ನು ಸಲ್ಲಿಸಬೇಕು.

ಅರ್ಜಿ ಸಲ್ಲಿಸಿದ ಕೂಡಲೆ ಅವರಿಗೊಂದು ರಸೀದಿ ನೀಡಲಾಗುತ್ತದೆ. ಈ ರಸೀದಿಯಲ್ಲಿ 15 ಅಂಕಿಗಳ ಗುರುತಿನ ಸಂಖ್ಯೆಯೊಂದನ್ನು ಗ್ರಾಹಕರಿಗೆ ನೀಡಲಾಗುತ್ತದೆ. ಅರ್ಜಿ ಸಲ್ಲಿಸಿದ ಕೂಡಲೆ ನಾಗರಿಕರು ರಸೀದಿ ಪಡೆಯುವುದು ಕಡ್ಡಾಯವಾಗಿರುತ್ತದೆ.

ಸೇವೆ ಟ್ರ್ಯಾಕ್ ಮಾಡಿ: ಅರ್ಜಿದಾರರು ತಮ್ಮ ಮೊಬೈಲ್ ಸಂಖ್ಯೆ ನೀಡಿದಲ್ಲಿ ಅವರಿಗೆ ಎಸ್ಎಂಎಸ್ ಮೂಲಕ ಅರ್ಜಿಯ ಪ್ರಗತಿಯ ಕುರಿತು ವರದಿ ದೊರಕುತ್ತದೆ. ಮೊಬೈಲ್ ಇಲ್ಲದಿದ್ದಲ್ಲಿ ಅರ್ಜಿದಾರರು ವೆಬ್ ಸೈಟ್ ಮೂಲಕ ತಮ್ಮ ಅರ್ಜಿಯ ಪ್ರಗತಿಯನ್ನು ಪರಿಶೀಲಿಸಬಹುದಾಗಿದೆ.

ಅಥವಾ ಸಕಾಲ ದ ಕಾಲ್ ಸೆಂಟರ್ ಗೆ ಕರೆಮಾಡಿ ಅರ್ಜಿ ಪ್ರಗತಿ ಬಗ್ಗೆ ವಿವರ ಪಡೆಯಬಹುದು.

ಸಂಪರ್ಕ ವಿಳಾಸ : ದೂರವಾಣಿ ಸಂಖ್ಯೆ 080-44554455 ಗೆ ಕರೆಮಾಡಿ
* ಈ ಕಾಯ್ದೆಯ ವೆಬ್ ವಿಳಾಸ www.sakala.kar.nic.in
* ಇ-ಮೇಲ್ ವಿಳಾಸ [email protected]

ಅಂತರ್ಜಾಲ ಮುಖಾಂತರವೂ ಸಾರ್ವಜನಿಕರು ಈ ಕಾಯ್ದೆಯ ಸೌಲಭ್ಯ ಪಡೆದುಕೊಳ್ಳಬಹುದಾಗಿದೆ.

ಈ ಪ್ರಗತಿ ಪರಿಶೀಲನೆ ಮತ್ತಿತರ ಎಲ್ಲ ಪ್ರಕ್ರಿಯೆಗಳಿಗೂ ಗ್ರಾಹಕರಿಗೆ ಸ್ವೀಕೃತಿಯಲ್ಲಿ ನೀಡಿದ 15 ಅಂಕಿಯ ಗುರುತಿನ ಸಂಖ್ಯೆಯನ್ನೇ ಬಳಸಬೇಕಾಗಿರುತ್ತದೆ.

ಸೇವೆ ವಿಫಲವಾದರೆ ದಂಡ : ಪ್ರತಿದಿನ ಸಾರ್ವಜನಿಕರಿಂದ ಸ್ವೀಕರಿಸಲಾಗುವ ಅರ್ಜಿಗಳ ಮಾಹಿತಿಯನ್ನು ವಿವಿಧ ಇಲಾಖೆಗಳ ಅಧಿಕಾರಿಗಳಿಂದ ಪಡೆಯಲಾಗುವುದು. ಸೇವೆ ನೀಡುವಲ್ಲಿ ಲೋಪವಾದರೆ ಸಂಬಂಧಪಟ್ಟ ಅಧಿಕಾರಿಗಳು ದಂಡ ಪಾವತಿಸಬೇಕಾಗುತ್ತದೆ.

ದಂಡ ವಿವರ: ನಾಗರಿಕರಿಗೆ ಸೇವೆಯನ್ನು ಪೂರೈಸುವುದರಲ್ಲಿ ವಿಳಂಬವಾದರೆ ವಿಳಂಬಿತ ಅವಧಿಯಲ್ಲಿ ಪ್ರತಿದಿನಕ್ಕೆ 20-00 ರು.ನಂತೆ ಗರಿಷ್ಠ 500 ರು.ಗಳ ಮಿತಿಯವರೆಗೆ ಸಂಬಂಧಿತ ಸರ್ಕಾರಿ ನೌಕರರು ಅರ್ಜಿ ಸಲ್ಲಿಸಿದ ಸಾರ್ವಜನಿಕರಿಗೆ ಪರಿಹಾರ ಶುಲ್ಕ ನೀಡಬೇಕಿದೆ.

ಇಲ್ಲಿಯವರೆಗೆ ಈ ಕಾಯ್ದೆಯ ಅಡಿ ಎಲ್ಲಾ ಇಲಾಖೆಗಳಲ್ಲಿಯೂ ಒಟ್ಟಾಗಿ 1,32,304 ಅರ್ಜಿಗಳನ್ನು ಸ್ವೀಕರಿಸಿದ್ದು, ಅವುಗಳಲ್ಲಿ 1,12,439 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. [ಲಾಂಛನ ಸೃಷ್ಟಿಸಿದ ಬಾಲಸ್ವಾಮಿ]

English summary
Karnataka Guarantee of Services to Citizens Act SAKALA launched across the state from today (2 Apr.2012 ). Sakala ensures services are provided in a timely manner over 151 services of 11 government departments. The 11 Departments : health, revenue, education, police, finance, women and child welfare, rural development and panchayat raj, food and civil supplies, labor, transport and Local bodies. Chief Minister Sadananda Gowda ( BJP ) launched the facility in Bangalore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X