ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಪ್ರಿಲ್‌ನಿಂದ ಅಂಚೆ ಉಳಿತಾಯ ಬಡ್ಡಿದರ ಹೆಚ್ಚಳ

By Srinath
|
Google Oneindia Kannada News

post-office-savings-deposit-interest-increased
ನವದೆಹಲಿ, ಮಾ.26: ಭವಿಷ್ಯ ನಿಧಿ ಹೊಂದಿರುವ ನೌಕರರಿಗೆ ಇತ್ತೀಚೆಗೆ ಬರೆ ಬಿದ್ದಿದೆ. ಪಿಎಫ್ ಬಡ್ಡಿದರವನ್ನು ಕಡತಿಗೊಳಿಸಲಾಗಿದೆ. ಅದೇ ರೀತಿ ಬ್ಯಾಂಕುಗಳಲ್ಲೂ ಠೇವಣಿ ಮೇಲಿನ ಬಡ್ಡಿ ಕುಗ್ಗಿದೆ. ಆದರೆ ಇಲ್ಲಿ ತುಸು ಸಮಾಧಾನದ ಸಂಗತಿಯಿದೆ.

ಏನಪಾ ಅಂದರೆ ಅಂಚೆ ಇಲಾಖೆಯಲ್ಲಿ ವಿವಿಧ ಠೇವಣಿ ಯೋಜನೆಗಳಲ್ಲಿ ಅಷ್ಟೋ ಇಷ್ಟೋ ಉಳಿತಾಯ ಮಾಡುವವರಿಗಾಗಿ ಬಡ್ಡಿ ದರ ಸ್ವಲ್ಪ ಹೆಚ್ಚಿಸಲಾಗಿದೆ. ಅಂದರೆ ಅಂಚೆ ಉಳಿತಾಯ ಖಾತೆ (POSA), ಮಾಸಿಕ ಆದಾಯ ಯೋಜನೆ (MIS), ಸಾರ್ವಜನಿಕ ಭವಿಷ್ಯನಿಧಿ (PPF) ಬಡ್ಡಿದರವು ಎಪ್ರಿಲ್‌ ಒಂದರಿಂದ ಶೇ. 0.25 ಹೆಚ್ಚಲಿದೆ. ಹೊಸ ದರಗಳು ಎಪ್ರಿಲ್‌ ಒಂದರಿಂದ ಅನುಷ್ಠಾನಕ್ಕೆ ಬರಲಿವೆ.

ಅಂಚೆ ಉಳಿತಾಯ ಖಾತೆಗೆ ಶೇ. 3.5ರಷ್ಟಿದ್ದ ಬಡ್ಡಿ ಪ್ರಮಾಣವನ್ನು 2011ರಲ್ಲಿ ಶೇ. 4ಕ್ಕೆ ಏರಿಸಲಾಯಿತು. ಇದೇ ರೀತಿ ಮಾಸಿಕ ಉಳಿತಾಯ ಖಾತೆ ಮತ್ತು ಪಿಪಿಎಫ್ ಬಡ್ಡಿ ದರವನ್ನು ಶೇ. 8.2ರಿಂದ ಶೇ.8.6ಕ್ಕೆ ಹೆಚ್ಚಿಸಲಾಗಿದೆ. PPFನಲ್ಲಿ ತೊಡಗಿಸಬಹುದಾದ ಹಣದ ಮೊತ್ತದ ಮಿತಿಯನ್ನು ರೂ.70,000ದಿಂದ ರೂ.1,00,000ಕ್ಕೆ ಹೆಚ್ಚಿಸಲಾಗಿದೆ.

ಶ್ಯಾಮಲಾ ಗೋಪಿನಾಥ್‌ ಸಮಿತಿಯ ಶಿಫಾರಸುಗಳನ್ವಯ ಬಡ್ಡಿ ದರಗಳನ್ನು ಹೆಚ್ಚಿಸಲಾಗಿದೆ. ಸಣ್ಣ ಉಳಿತಾಯಗಳ ಮೇಲಿನ ಬಡ್ಡಿದರಗಳನ್ನು ಪ್ರತಿವರ್ಷ ಪರಿಷ್ಕರಿಸಬೇಕು ಎಂದೂ ಸಮಿತಿ ಅಭಿಪ್ರಾಯ ವ್ಯಕ್ತಪಡಿಸಿದೆ. ಸಾಮಾನ್ಯ ಜನರಲ್ಲಿ ಅಂಚೆ ಖಾತೆ ಉಳಿತಾಯ ಮಾಡಲು ಉತ್ತೇಜಿಸುವ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ.

English summary
According to a Finance Ministry statement here, while the interest rate on post office savings account (POSA) increased to 4 per cent from 3.5 per cent for the current fiscal, deposits in schemes such as MIS and PPF will fetch attractive returns of 8.2 per cent and 8.6 per cent respectively, as compared to the existing interest rates of 8 per cent. The move to make the small savings schemes more attractive and align them with current market rates is in line with the recommendations of the Shyamala Gopinath Committee.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X