ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪರಪ್ಪನ ಅಗ್ರಹಾರ ಜೈಲಿನಲ್ಲಿ ಖೈದಿಗಳ ಮಾರಾಮಾರಿ

|
Google Oneindia Kannada News

Parappana Agrahara Jail
ಬೆಂಗಳೂರು, ಮಾ 20: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ರೌಡಿಗಳು ಮತ್ತೆ ಅಟ್ಟಹಾಸ ಮೆರೆದಿದ್ದಾರೆ. ಕುಖ್ಯಾತ ರೌಡಿ ಲಡ್ಡು ಗ್ಯಾಂಗ್ ಕಡೆಯವರು ಜೈಲಿನೊಳಗೆ ನುಗ್ಗಿ ಇನ್ನೊಬ್ಬ ರೌಡಿ ಇಮ್ರಾನ್ ಸಹಚರನ ಮೇಲೆ ದಾಳಿ ಮಾಡಿ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.

ಜೈಲಿನೊಳಗೆ ನುಗ್ಗಿದ ಲಡ್ಡು ಗ್ಯಾಂಗ್ ಇಮ್ರಾನ್ ಸಹಚರ ಜೂಟರಕಲ್ ಎನ್ನುವವನ ಮೇಲೆ ಮೇಲೆ ದಾಳಿ ಮಾಡಿ ತೀವ್ರ ಹಲ್ಲೆ ನಡೆಸಿದ್ದಾರೆ. ಬ್ಲೇಡ್ ನಿಂದ ಆತನ ಮುಖ, ಎದೆಯ ಮೇಲೆ ಬರೆ ಎಳೆದು ತೀವ್ರವಾಗಿ ಗಾಯಗೊಳಿಸಿದ್ದಾರೆ. ತಕ್ಷಣವೇ ಮಧ್ಯಪ್ರವೇಶಿಸಿದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.

ಕೆಲ ದಿನಗಳ ಹಿಂದೆ ಈ ಎರಡೂ ಗ್ಯಾಂಗ್ ನಡುವೆ ಮಾರಾಮಾರಿ ನಡೆದಿತ್ತು, ಆಗಲೂ ಪೊಲೀಸರು ಅದನ್ನು ತಿಳಿಗೊಳಿಸಿದ್ದರು .

ಕೆಲ ತಿಂಗಳ ಹಿಂದೆ ಅಂದರೆ ಡಿಸೆಂಬರ್ ತಿಂಗಳಲ್ಲಿ ಕೊರಂಗು ಎನ್ನುವ ರೌಡಿ ಪೋಲೀಸ್ ವರಿಷ್ಠಾಧಿಕಾರಿ ಎಸ್ಪಿ ಕೃಷ್ಣಕುಮಾರ್ ಮತ್ತು ಸಿಬ್ಬಂದಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದ.

English summary
Rowdy inmates in Parappana Agrahara Prison Bangalore clash. Friends of rowdy Imran in the cell seriously hurt. It is not for the first time Bangalore jail birds cross swords in Cells.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X