ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೆದ್ದ ಅಖಿಲೇಶ್‌ಗೆ ಶಭಾಸ್‌ಗಿರಿ ನೀಡಿದ ರಾಹುಲ್

By Prasad
|
Google Oneindia Kannada News

Rahul Gandhi compliments Akhilesh, accepts defeat
ನವದೆಹಲಿ, ಮಾ. 6 : ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಅನುಭವಿಸಿದ ಸೋಲಿನ ಸಂಪೂರ್ಣ ಜವಾಬ್ದಾರಿಯನ್ನು ಕಾಂಗ್ರೆಸ್ ಯುವನಾಯಕ ರಾಹುಲ್ ಗಾಂಧಿ ಅವರು ಹೊತ್ತುಕೊಂಡಿದ್ದಾರೆ. ಇಡೀ ಪ್ರಚಾರದ ಜವಾಬ್ದಾರಿಯನ್ನು ನಾನೇ ವಹಿಸಿಕೊಂಡಿದ್ದೆ, ಈಗ ಸೋಲಿನ ಹೊಣೆಯನ್ನೂ ನಾನೇ ಹೊರುತ್ತೇನೆ ಎಂದು ಅವರು ಹೇಳಿದ್ದಾರೆ.

ಉತ್ತರ ಪ್ರದೇಶದಲ್ಲಿ ಮುಲಾಯಂ ಸಿಂಗ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷ ಜಯಭೇರಿ ಬಾರಿಸಿದ್ದು, ಎರಡನೇ ಸ್ಥಾನದಲ್ಲಿ ಬಹುಜನ ಸಮಾಜವಾದಿ ಪಕ್ಷ, ಮೂರನೇ ಸ್ಥಾನದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷವನ್ನು ನಾಲ್ಕನೇ ಸ್ಥಾನಕ್ಕೆ ಉತ್ತರ ಪ್ರದೇಶದ ಜನತೆ ತಳ್ಳಿದ್ದಾರೆ. 403 ಸ್ಥಾನಗಳಲ್ಲಿ 40 ಕ್ಷೇತ್ರಗಳನ್ನು ಮಾತ್ರ ಗೆಲ್ಲುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದೆ.

ತಾಯಿ ಸೋನಿಯಾ ಗಾಂಧಿ ಅವರ ನಿವಾಸ 10 ಜನಪಥ್‌ನಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಈ ಬಾರಿ ಸಮಾಜವಾದಿ ಪಕ್ಷದ ಪರ ಅಲೆ ಎದ್ದಿತ್ತು ಎಂದು ಒಪ್ಪಿಕೊಂಡರು. ಈ ಚುನಾವಣೆ ನನಗೆ ತಕ್ಕ ಪಾಠ ಕಲಿಸಿದೆ ಎಂದು ಹೇಳಿದ ಅವರು, ಸಮಾಜವಾದಿ ಪಕ್ಷದ ಜಯದ ರೂವಾರಿ ಅಖಿಲೇಶ್ ಯಾದವ್ ಅವರನ್ನು ಹೃತ್ಪೂರ್ವಕವಾಗಿ ಅಭಿನಂದಿಸಿದರು.

ಆದರೂ, ಕಳೆದ ಚುನಾವಣೆಗೆ ಹೋಲಿಸಿದರೆ ಈ ಬಾರಿ ಹೆಚ್ಚು ಸ್ಥಾನ ಕಾಂಗ್ರೆಸ್ ಗೆದ್ದಿದೆ. 2007ರಲ್ಲಿ ಕೇವಲ 32 ಸ್ಥಾನಗಳನ್ನು ಮಾತ್ರ ಗೆದ್ದಿತ್ತು. ಸೋತರೂ ಆಶ್ವಾಸನೆ ನೀಡಿದಂತೆ ಉತ್ತರ ಪ್ರದೇಶದಲ್ಲಿ ಉತ್ತಮ ಕಾರ್ಯ ಮುಂದುವರಿಸುವುದಾಗಿ ಅವರು ವಾಗ್ದಾನ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ದಿಗ್ವಿಜಯ್ ಸಿಂಗ್, ರೇಣುಕಾ ಚೌಧರಿ, ರಾಹುಲ್ ಅಕ್ಕ ಪ್ರಿಯಾಂಕಾ ಗಾಂಧಿ ವದ್ರಾ ಹಾಜರಿದ್ದರು. ರಾಹುಲ್ ಮಾತಿನ ನಂತರ ಒಂದು ಬಾರಿ ತಮ್ಮನನ್ನು ಆಲಂಗಿಸಿ ಪ್ರಿಯಾಂಕಾ ಸಾಂತ್ವನ ಮಾಡಿದರು.

English summary
Congress leader Rahul Gandhi has accepted the defeat in Uttar Pradesh assembly election 2012 and congratulated and complimented Akhilesh Yadav, young leader of Samajwadi Party. He said, the election has taught a lesson and would continue for the development of UP.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X