ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ಲೂ ಫಿಲಂ ದಿಕ್ಕುತಪ್ಪಿಸುತ್ತಿರುವ ಓಲೇಕಾರ

By Srinath
|
Google Oneindia Kannada News

karnataka-blue-boys-olekar-opposition-reactes-sharply
ಬೆಂಗಳೂರು, ಮಾ. 5: ವಿಧಾನಸಭೆಯಲ್ಲಿ ಬ್ಲೂ ಫಿಲಂ ವೀಕ್ಷಿಸಿದ ಘಟನೆಗೆ ಸಂಬಂಧಿಸಿದ ಸದನದ ವಿಚಾರಣಾ ಸಮಿತಿ ಸದಸ್ಯ ನೆಹರು ಓಲೇಕಾರ್ ನೀಡಿರುವ ಬಹಿರಂಗ ಹೇಳಿಕೆ ಕುರಿತು ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಪ್ರತಿಪಕ್ಷಗಳು, ಪ್ರಕರಣ ಮುಚ್ಚಿಹಾಕುವ ಹುನ್ನಾರ ನಡೆಯುತ್ತಿದೆ ಎಂದು ಕಿಡಿಕಾರಿವೆ.

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ: 'ವಿಚಾರಣೆ ಎದುರಿಸುತ್ತಿರುವ ಮೂವರು ಮಾಜಿ ಸಚಿವರಲ್ಲದೆ ಇನ್ನೂ ಹಲವು ಶಾಸಕರು ಸದನದಲ್ಲಿ ಬ್ಲೂ ಫಿಲಂ ವೀಕ್ಷಿಸಿರುವ ಬಗ್ಗೆ ಸಿಸಿ ಕ್ಯಾಮರಾ ದಾಖಲೆಗಳಿವೆ ಎಂದು ಓಲೇಕಾರ್ ಭಯಪಡಿಸುತ್ತಿದ್ದಾರೆ. ತನಿಖೆ ಪ್ರಗತಿಯಲ್ಲಿರುವಾಗಲೇ ಸಮಿತಿಯ ಸದಸ್ಯರು ಈ ರೀತಿ ಹೇಳಿಕೆ ನೀಡಿರುವುದು ಸಮಂಜಸವಲ್ಲ. ಜನತೆಯನ್ನು ದಿಕ್ಕುತಪ್ಪಿಸುವ ಉದ್ದೇಶದಿಂದಲೇ ಇಂತಹ ಹೇಳಿಕೆ ನೀಡಲಾಗಿದೆ' ಎಂದು ದೂರಿದರು.

'ಇಡೀ ಪ್ರಕರಣವನ್ನೇ ಮುಚ್ಚಿಹಾಕುವ ಅನುಮಾನ ಕಾಡುತ್ತಿದೆ. ಮಾಜಿ ಸಚಿವರ ರಕ್ಷಣೆಗೆ ಸರ್ಕಾರದ ಕಡೆಯಿಂದ ಪ್ರಯತ್ನ ನಡೆಯುತ್ತಿದೆ. ಅದಕ್ಕಾಗಿಯೇ ಪ್ರಕರಣದ ಗಂಭೀರತೆ ಕುಗ್ಗಿಸವಂತಹ ಹೇಳಿಕೆಗಳು ಬಹಿರಂಗವಾಗಿವೆ' ಎಂದು ಅವರು ಅಸಮಾಧಾನಪಟ್ಟರು.

ವೈ.ಎಸ್.ವಿ.ದತ್ತ: 'ವಿರೋಧ ಪಕ್ಷಗಳ ಶಾಸಕರೂ ಬ್ಲೂ ಫಿಲಂ ವೀಕ್ಷಿಸಿದ್ದಾರೆ ಎಂಬ ಹೇಳಿಕೆ ಮೂಲಕ ಬಿಜೆಪಿ ಶಾಸಕರ ರಕ್ಷಣೆಗೆ ಓಲೇಕಾರ್ ಯತ್ನಿಸಿದ್ದಾರೆ. ನಮ್ಮ ಶಾಸಕರಷ್ಟೇ ಅಲ್ಲ, ನಿಮ್ಮ ಶಾಸಕರೂ ನೋಡಿದ್ದಾರೆ ಎಂದು ವಿರೋಧ ಪಕ್ಷಗಳನ್ನು ಪ್ರಶ್ನಿಸುವ ಧಾಟಿಯಲ್ಲಿ ಅವರು ಮಾತನಾಡಿದ್ದಾರೆ' ಎಂದು ಜೆಡಿಎಸ್ ವಕ್ತಾರ ವೈ.ಎಸ್.ವಿ. ದತ್ತ ಆಕ್ರೋಶ ವ್ಯಕ್ತಪಡಿಸಿದ್ದಾರೆ.

English summary
Opposition leaders have reacted sharply to the Olekar’s revelation. Nehru Olekar, MLA and member of the House committee probing the blue film incident, has said on Sunday that 15-16 legislators other than the three former ministers had watched the controversial clipping in the Assembly.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X