•  

15 ದಿನದಲ್ಲಿ ಹೊಸ ಲೋಕಾಯುಕ್ತ ನೇಮಕ: ಡಿವಿಎಸ್

ಸೋಮವಾರ, ಫೆಬ್ರವರಿ 27, 2012, 10:14 [IST]
DV Sadananda gowda
ಮಂಗಳೂರು, ಫೆ.27: ರಾಜ್ಯದಲ್ಲಿನ ಬಿಕ್ಕಟ್ಟು ಪರಿಹರಿಸುವಲ್ಲಿ ಬಿಜೆಪಿ ಹೈಕಮಾಂಡ್ ಕೈಗೊಂಡ ಕ್ರಮದಿಂದ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಸಂತುಷ್ಟರಾಗಿದ್ದಾರೆ. ಹಲವು ಕಾರಣಗಳಿಂದ ನೆನೆಗುದಿಗೆ ಬಿದ್ದಿರುವ ಹೊಸ ಲೋಕಾಯುಕ್ತ ನೇಮಕಾತಿಗೆ ಮತ್ತೆ ಚಾಲನೆ ನೀಡಿದ್ದಾರೆ.
  Read:  In English 
ಇನ್ನು 15 ದಿನಗಳಲ್ಲಿ ಹೊಸ ಲೋಕಾಯುಕ್ತರ ನೇಮಕಾತಿ ಆಗಲಿದೆ ಎಂದು ಸದಾನಂದಗೌಡ ಹೇಳಿದ್ದಾರೆ. ನೇಮಕಾತಿ ಪ್ರಕ್ರಿಯೆಗೆ ಚಾಲನೆ ದೊರೆತ್ತಿದ್ದು ಸುಪ್ರೀಂಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ವಿಕ್ರಮ್ ಜಿತ್ ಸೇನ್ ಹಾಗೂ ವಿಧಾನಸಭಾ ವಿಪಕ್ಷ ನಾಯಕರಾದ ಸಿದ್ದರಾಮಯ್ಯ ಹಾಗೂ ಮೋಟಮ್ಮ ಅವರ ಸಲಹೆ ಕೇಳಲಾಗಿದೆ.


ನಿಕಟಪೂರ್ವ ಲೋಕಾಯುಕ್ತ ಸಂತೋಷ್ ಹೆಗ್ಡೆ ಅವರು ಹುದ್ದೆ ತ್ಯಜಿಸಿದ ನಂತರ ಕಳೆದ ಐದು ತಿಂಗಳಿನಿಂದ ಹೊಸ ಲೋಕಾಯುಕ್ತರನ್ನು ನೇಮಿಸಲು ಸಾಧ್ಯವಾಗಿಲ್ಲ. ನ್ಯಾ. ಬನ್ನೂರ್ ಮಠ ಅವರ ಹೆಸರನ್ನು ಸರ್ಕಾರ ಸೂಚಿಸಿದ್ದು, ಇದಕ್ಕೆ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಸಮ್ಮತಿಸಿಲ್ಲ.

ರಾಜ್ಯಪಾಲರ ಕ್ರಮದ ವಿರುದ್ಧ ಸುಪ್ರೀಂಕೋರ್ಟ್ ನಲ್ಲಿ ಅರ್ಜಿಸಲ್ಲಿಸಲು ಕೂಡಾ ಕರ್ನಾಟಕ ಬಿಜೆಪಿ ಚಿಂತನೆ ನಡೆಸಿದೆ.

User Comments
[ ಅಭಿಪ್ರಾಯ ಬರೆಯಿರಿ ]
ಈ ಲೇಖನಕ್ಕೆ ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ.
    Upcoming Matches
SL Vs PAK - 2nd Twenty20 Sun 3rd Jun Int2020
ENG Vs WI - 3rd Test at Edgbaston Thu 7th Jun Test
SL Vs PAK - 1st ODI at R Premadasa Stadium Thu 7th Jun ODI
Follow Oneindia Kannada on Twitter
Oneindia Kannada Facebook fan page
Write Comments on this Article