ಬೆಂಗಳೂರು, ಫೆ 25: ಮಾಜಿ ಕ್ರಿಕೆಟ್ ಆಟಗಾರ ಅನಿಲ್ ಕುಂಬ್ಲೆ ಮೇಲೆ ಏಕೆ ಎಫ್ಐಆರ್ ದಾಖಲಿಸಿಲ್ಲವೆಂದು ಭಾರತೀನಗರ ಪೋಲಿಸ್ ಠಾಣೆಯ ಇನ್ ಸ್ಪೆಕ್ಟರನ್ನು ಕರ್ನಾಟಕ ಹೈಕೋರ್ಟ್ ಪ್ರಶ್ನಿಸಿ ಸಮನ್ಸ್ ನೀಡಿದೆ. ಕುಂಬ್ಳೆ ಪತ್ನಿ ಚೇತನಾ ಮಾಜಿ ಗಂಡನಿಗೆ ಹುಟ್ಟಿದ ಮಗುವಿಗೆ ಪಾಸ್ ಪೋರ್ಟ್ ದೊರಕಲು ಮಗುವಿನ ಅಪ್ಪನ ಸ್ಥಾನದಲ್ಲಿ ಕುಂಬ್ಳೆ ಸಹಿಹಾಕಿರುವ ಪ್ರಕರಣಕ್ಕೆ ದೂರು ದಾಖಲಿಸದಿರುವುದಕ್ಕೆ ಕೋರ್ಟ್ ಕಿಡಿಕಾರಿದೆ.
ಕಳೆದ ವರ್ಷ ಡಿಸೆಂಬರ್ 26ರಂದು ನೀಡಿರುವ ದೂರಿಗೆ ಪೊಲೀಸರು ಎಫ್ ಐಆರ್ ದಾಖಲಿಸಿರಲಿಲ್ಲ. ಕುಂಬ್ಳೆ ವಿರುದ್ಧ ದೂರು ದಾಖಲಿಸದ ಪೊಲೀಸರ ಕ್ರಮವನ್ನು ಪ್ರಶ್ನಿಸಿ ಚೇತನಾ ಅವರ ಮಾಜಿ ಪತಿ ಕುಮಾರ್ ಜಾಗಿರ್ದಾರ್ ಕಳೆದ ತಿಂಗಳು ಕೋರ್ಟ್ ನಲ್ಲಿ ದಾವೆ ಹೂಡಿದ್ದರು.
2004ರಲ್ಲಿ ಮಗುವಿನ ಮೇಲಿನ ಹಕ್ಕಿಗಾಗಿ ಚೇತನಾ ಮತ್ತು ಮಾಜಿ ಗಂಡ ಸುಪ್ರಿಂ ಕೋರ್ಟ್ ಮೆಟ್ಟಲೇರಿದ್ದರು. ವಿಚಾರಣೆ ನಡೆಸಿದ ಕೋರ್ಟ್ ಮಗುವಿನ ಮೇಲೆ ಇಬ್ಬರಿಗೂ ಸಮಾನ ಹಕ್ಕಿರುವುದಾಗಿ ತೀರ್ಪು ನೀಡಿತ್ತು. ಆದರೆ ಮಗುವಿನ ತಂದೆ ಹಾಕಬೇಕಿದ್ದ ಪಾಸ್ ಪೋರ್ಟ್ ಸಹಿಯನ್ನು ಕುಂಬ್ಳೆ ಹಾಕಿರುವುದು ಇಷ್ಟೆಲ್ಲಾ ರಾದ್ಧಾಂತಕ್ಕೆ ಕಾರಣವಾಗಿದೆ.