•  

ಆಚಾರ್ಯ ಹಬ್ಬ ವಿಶಿಷ್ಟ ಹೇಗೆ, ವಿದ್ಯಾರ್ಥಿಗಳನ್ನೇ ಕೇಳಿ

ಶುಕ್ರವಾರ, ಫೆಬ್ರವರಿ 24, 2012, 12:11 [IST]
ವಿದ್ಯಾರ್ಥಿಗಳಿಗೆ ಮಾಹಿತಿ ಹಾಗೂ ಮನರಂಜನೆಯ ಮಹಾಪೂರವನ್ನು ಹರಿಸಲು ಆಚಾರ್ಯ ವಿದ್ಯಾಸಂಸ್ಥೆ ಸರ್ವಸಜ್ಜಾಗಿದೆ. ಕ್ವಿಜ್, ಕಂಪ್ಯೂಟರ್ ಗೇಮ್ಸ್, ಪೋಸ್ಟರ್ ಪೇಂಟಿಂಗ್, ಕೊಲಾಜ್, ಫೇಸ್ ಪೇಂಟಿಂಗ್, ಅಣಕು ಪ್ರದರ್ಶನ ಮುಂತಾದವು ಬೆಳಗ್ಗಿನ ಹೊತ್ತು ಮನರಂಜನೆ ನೀಡಲಿದೆ.

ಸಂಜೆ ವೇಳೆಗೆ ನರನಾಡಿಗಳಿಗೆ ರೋಮಾಂಚನ ಉಂಟು ಮಾಡುವ ರಾಕ್ ಶೋ, ಡ್ಯಾನ್ಸ್ ಕಾರ್ಯಕ್ರಮಗಳು ಆಯೋಜನೆಗೊಂಡಿದೆ. ಇದಲ್ಲದೆ, ಟೆಕ್ನೋ -ಕಲ್ಚರ್ ಹಬ್ಬ ಮಾತ್ರವಲ್ಲದೆ ವಿದ್ಯಾರ್ಥಿಗಳನ್ನು ಸೆಳೆಯಲು ರುಚಿಕರ ತಿನಿಸುಗಳ ಆಹಾರ ಮಳಿಗೆಗಳನ್ನು ಸ್ಥಾಪಿಸಲಾಗಿದೆ.

ಆಚಾರ್ಯ ಹಬ್ಬ ಬರೀ ಆಚಾರ್ಯ ಸಂಸ್ಥೆ ಅಷ್ಟೇ ಅಲ್ಲದೆ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಬಹುನೀರಿಕ್ಷೆಯಿಂದ ಕಾಯುವ ಹಬ್ಬವಾಗಿ ರೂಪುಗೊಂಡಿದೆ. ಈ ಬಾರಿ ಹಬ್ಬದಲ್ಲಿ ಸುಮಾರು 15,000ಕ್ಕೂ ಅಧಿಕ ಯುವಕ/ತಿಯರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಸುಮಾರು 60 ಕಾಲೇಜಿನ ವಿದ್ಯಾರ್ಥಿಗಳು ಈ ಮೆಗಾ ಕಾಲೇಜ್ ಹಬ್ಬದಲ್ಲಿ ಉತ್ಸಾಹದಿಂದ ಭಾಗವಹಿಸುತ್ತಿದ್ದಾರೆ.

ವಿಶೇಷವೆಂದರೆ ತಾಂಜಾನಿಯಾ, ಇರಾಕ್, ಭೂತನ್, ಯುಕೆ, ಅಫ್ಘಾನಿಸ್ತಾನ, ದಕ್ಷಿಣ ಕೊರಿಯಾ ಸೇರಿದಂತೆ ವಿವಿಧ ದೇಶಗಳ ಮೂಲದ ವಿದ್ಯಾರ್ಥಿಗಳಿಗೆ ಭಾರತೀಯ ಸಂಸ್ಕೃತಿ, ಕರ್ನಾಟಕದ ಹಿರಿಮೆಯನ್ನು ಸಾರುವ ಉತ್ತಮ ಅವಕಾಶ ನಮಗೆ ಈ ಹಬ್ಬದಿಂದ ಲಭಿಸಿದೆ ಎಂದು ಆಯೋಜಕ ವಿದ್ಯಾರ್ಥಿ ಸಂಘದ ಪ್ರಮುಖ ಸದಸ್ಯರಾದ ಅಮಿತ್-ಹರ್ಷ-ಸುದರ್ಶನ್-ರಾಜಿವ್-ರಶ್ಮಿ-ಶ್ರೀಕಾಂತ್-ರುವಾನ್-ಕಾರ್ತಿಕ್ ಹೆಮ್ಮೆಯಿಂದ ಹೇಳುತ್ತಾರೆ.

ಹಬ್ಬದ ಉದ್ದೇಶ ಏನು?: ವಿವಿಧ ಸಂಸ್ಕೃತಿ ಹಾಗೂ ಪ್ರಾದೇಶಿಕ ಹಿನ್ನೆಲೆಯುಳ್ಳ ವಿದ್ಯಾರ್ಥಿಗಳಿಗೆ ಒಂದು ಉತ್ತಮವಾದ ಸಂವಹನ ವೇದಿಕೆ ಒದಗಿಸುವುದೇ 'ಆಚಾರ್ಯ ಹಬ್ಬ 2012' ದ ಮೂಲ ಉದ್ದೇಶ. ಅಂತಿಮ ವರ್ಷದ ವ್ಯಾಸಂಗದ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಇದಕ್ಕಿಂತ ಉತ್ತಮ ಸಾಂಸ್ಕೃತಿಕ ಹಬ್ಬ ಮತ್ತೆಲ್ಲೂ ಸಿಗದು ಎಂದು ವಿದ್ಯಾರ್ಥಿನಿ ನೀಮಾ ಮೊಸೆಸ್ ಅವರು ಒನ್ ಇಂಡಿಯಾ ಪ್ರತಿನಿಧಿಯೊಂದಿಗೆ ತಮ್ಮ ಸಂತಸವನ್ನು ಹಂಚಿಕೊಂಡರು.

ಬೆಂಗಳೂರಿನ ಅತಿ ದೊಡ್ಡ ಕಾಲೇಜು ಹಬ್ಬದಲ್ಲಿ ಪಾಲ್ಗೊಂಡು ಸಂತಸವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಿ.. ಮಾರ್ಚ್ ಮೊದಲ ವಾರ ನಡೆಯುವ ಮಾಧ್ಯಮ ಕಪ್ ಕ್ರಿಕೆಟ್ ಟೂರ್ನಮೆಂಟ್ ನೋಡಿ ಆನಂದಿಸಿ ಎಂದು ಆಯೋಜಕರು ಕೇಳಿಕೊಂಡಿದ್ದಾರೆ. ಈ ಹಬ್ಬದಲ್ಲಿ ಸಂಗ್ರಹಿತವಾಗುವ ಮೊತ್ತವನ್ನು ವಿದ್ಯಾರ್ಥಿಗಳ ಅಭಿವೃದ್ಧಿ ನಿಧಿಗೆ ಅರ್ಪಿಸಲಾಗುತ್ತಿದೆ.
User Comments
[ ಅಭಿಪ್ರಾಯ ಬರೆಯಿರಿ ]
ಈ ಲೇಖನಕ್ಕೆ ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ.
    Upcoming Matches
SL Vs PAK - 1st Twenty20 Fri 1st Jun Int2020
SL Vs PAK - 2nd Twenty20 Sun 3rd Jun Int2020
ENG Vs WI - 3rd Test at Edgbaston Thu 7th Jun Test
Follow Oneindia Kannada on Twitter
Oneindia Kannada Facebook fan page
Write Comments on this Article