•  

ಬೆಂಗಳೂರಿನ ಅತಿದೊಡ್ಡ ಕಾಲೇಜು ಹಬ್ಬಕ್ಕೆ ಚಾಲನೆ

ಶುಕ್ರವಾರ, ಫೆಬ್ರವರಿ 24, 2012, 11:21 [IST]
ಸುಮಾರು 9000 ವಿದ್ಯಾರ್ಥಿಗಳು ವಿಶಿಷ್ಟ ರೀತಿಯಲ್ಲಿ 'ಫ್ಲಾಶ್ ಮಾಬ್ ' ನೃತ್ಯ ಪ್ರದರ್ಶಿಸುವ ಮೂಲಕ ಬಹುನಿರೀಕ್ಷಿತ ಟೆಕ್ನೋ ಸಾಂಸ್ಕೃತಿಕ ಹಬ್ಬ-ಆಚಾರ್ಯ ಹಬ್ಬ 2012ಕ್ಕೆ ವರ್ಣಮಯವಾಗಿ ಚಾಲನೆ ದೊರಕಿದೆ. ಬೆಂಗಳೂರಿನ ಅತಿ ದೊಡ್ಡ 'ಕಾಲೇಜು ಹಬ್ಬ' ಆಚಾರ್ಯ ಇನ್ಸ್ ಸ್ಟಿಟ್ಯೂಟ್ಸ್, ಸೊಲದೇವನಹಳ್ಳಿಯಲ್ಲಿ ಮಾ.15, 16, 17ರಂದು ನಡೆಯಲಿದೆ.

ಆಚಾರ್ಯ ಕ್ಯಾಂಪಸ್ ನ ನಾಗರತ್ನಮ್ಮ ಸ್ಟೇಡಿಯಂನಲ್ಲಿ ಆಚಾರ್ಯ ಸಂಸ್ಥೆಯ ಎಲ್ಲಾ ಪ್ರಾಧ್ಯಾಪಕರು 'ಆಚಾರ್ಯ ಹಬ್ಬ' 2012ರ ಟೀ ಶರ್ಟ್ ಧರಿಸಿ ಉಪಸ್ಥಿತರಿದ್ದರು. ನಿರೂಪಕರು ಕಾರ್ಯಕ್ರಮದ ಬಗ್ಗೆ ಮಾತನಾಡಲು ಮುಂದಾಗುತ್ತಿದ್ದಂತೆ ಎಲ್ಲೆಡೆಯಿಂದ ಸಾಗರೋಪಾದಿಯಲ್ಲಿ ಹರಿದು ಬಂದ ವಿದ್ಯಾರ್ಥಿಗಳ ದಂಡು ನಾಗರತ್ನ ಮೈದಾನಕ್ಕೆ ಇಳಿದು ಕುಣಿಯತೊಡಗಿದರು.

ಮೊದಲಿಗೆ 150+ ವಿದ್ಯಾರ್ಥಿಗಳಿಂದ ಆರಂಭವಾದ ಈ 'ಫ್ಲ್ಯಾಶ್ ಮಾಬ್' ಗೆ ಸಾವಿರಾರು ವಿದ್ಯಾರ್ಥಿಗಳು ಸೇರಿಕೊಂಡರು. 'ಢಿಂಕ ಚಿಕ್ಕ ಢಿಂಕ'..' ಚಿಕ್ಕ.. ಚಮ್ಮಕ್ ಚಲ್ಲೋ..' ಹಾಡುಗಳಿಗೆ ಸಾಮೂಹಿಕ ನೃತ್ಯ ಮಾಡಿದ್ದು ಕಣ್ಮನ ಸೆಳೆಯುವಂತಿತ್ತು. ನೀಲಿ.. ಹಳದಿ ಸೇರಿದಂತೆ ಬಣ್ಣ ಬಣ್ಣದ ಬಲೂನ್ ಗಳನ್ನು ಆಗಸಕ್ಕೆ ಹಾರಿ ಬಿಡಲಾಯಿತು. ಪಟಾಕಿಗಳನ್ನು ಹರ್ಷೋದ್ಘಾರದೊಂದಿಗೆ ಆಚಾರ್ಯ ಹಬ್ಬ 2012ಕ್ಕೆ ಚಾಲನೆ ನೀಡಲಾಯಿತು.

ಆಚಾರ್ಯ ಇನ್ಸ್ ಸ್ಟಿಟ್ಯೂಟ್ ನ 120 ಎಕರೆ ವಿಶಾಲ ಕ್ಯಾಂಪಸ್ ನಲ್ಲಿ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ಒಟ್ಟಿಗೆ ಕಲೆತು ಹಾಡಿ ನಲಿದು ಕುಣಿದಾಡಿದರು. ಎಲ್ಲರ ಮುಖದಲ್ಲೂ ಹಬ್ಬ ಕಳೆಯಿತ್ತು.

ಆಚಾರ್ಯ ಹಬ್ಬದಲ್ಲಿ ನೃತ್ಯ ಸ್ಪರ್ಧೆ, ರಾಕ್ ಬ್ಯಾಂಡ್ ಶೋ, ವಿನೂತನ ಸ್ಟೇಜ್ ಶೋಗಳು, ಫ್ಯಾಷನ್ ಶೋ. ಲೇಸರ್ ಶೋಗಳನ್ನು ಕಾಣಬಹುದಾಗಿದೆ. ಗಣ್ಯಾತಿಗಣ್ಯರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು. ನಟ ನಟಿಯರೂ ಕೂಡಾ ಈ ಹಬ್ಬದಲ್ಲಿ ಪಾಲ್ಗೊಂಡು ವಿದ್ಯಾರ್ಥಿಗಳ ಉತ್ಸಾಹ ಹೆಚ್ಚಿಸಲಿದ್ದಾರೆ.

ಆಚಾರ್ಯ ಇನ್ಸ್ ಸ್ಟಿಟ್ಯೂಟ್ ಸಂಸ್ಥೆ ವಾರ್ಷಿಕ 'ಆಚಾರ್ಯ ಹಬ್ಬ'ದ ಅಂಗವಾಗಿ ಮಾಧ್ಯಮ ಹಾಗೂ ಕಾರ್ಪೋರೇಟ್ ವಲಯಕ್ಕಾಗಿ ವಿಶೇಷ ಕ್ರಿಕೆಟ್ ಟೂರ್ನಮೆಂಟ್ ಆಯೋಜಿಸಿದೆ. ಒನ್ಇಂಡಿಯಾ ಈ ಟೂರ್ನಮೆಂಟ್‌ನ ಅಧಿಕೃತ ಮೀಡಿಯಾ ಪಾರ್ಟನರ್ ಆಗಿದೆ.

ಆಚಾರ್ಯ ಹಬ್ಬ ವಿಶಿಷ್ಟ ಹೇಗೆ? ವಿದ್ಯಾರ್ಥಿಗಳು ಏನು ಹೇಳುತ್ತಾರೆ? ಮುಂದೆ ಓದಿ...

User Comments
[ ಅಭಿಪ್ರಾಯ ಬರೆಯಿರಿ ]
ಈ ಲೇಖನಕ್ಕೆ ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ.
    Upcoming Matches
SL Vs PAK - 1st Twenty20 Fri 1st Jun Int2020
SL Vs PAK - 2nd Twenty20 Sun 3rd Jun Int2020
ENG Vs WI - 3rd Test at Edgbaston Thu 7th Jun Test
Follow Oneindia Kannada on Twitter
Oneindia Kannada Facebook fan page
Write Comments on this Article