•  

ಮದುವೆಯಿಂದ 29,000 ರು ಗಡಿ ದಾಟಿದ ಚಿನ್ನ

ಶುಕ್ರವಾರ, ಫೆಬ್ರವರಿ 24, 2012, 9:45 [IST]
india-gold-breaches-rs-29000-mark-feb-23
ಮುಂಬೈ,ಫೆ.5: ಮಧ್ಯಪ್ರಾಚ್ಯದಲ್ಲಿನ ರಾಜಕೀಯ ಅನಿಶ್ಚಿತತೆಯ ಕಾರಣಕ್ಕೆ ಚಿನ್ನದ ಬೆಲೆ ಏರಿಕೆಯಾಗಿವೆ. ಇರಾನಿನ ಉದ್ವಿಗ್ನ ಪರಿಸ್ಥಿತಿಯಿಂದಾಗಿ ಚಿನ್ನದಲ್ಲಿ ಹಣ ತೊಡಗಿಸಲು ಹೂಡಿಕೆದಾರರು ಮುಂದಾಗಿದ್ದಾರೆ. ಇನ್ನು ಭಾರತದಲ್ಲಿ ಮದುವೆ ಸೀಸನ್ ಆರಂಭವಾಗಿದೆ. ಇದರಿಂದ ಚಿನ್ನದ ಬೇಡಿಕೆ ಕಳೆದ ವರ್ಷಕ್ಕಿಂತ ಸ್ವಲ್ಪ ಹೆಚ್ಚಾಗಿಯೇ ಇದೆ.

ಚಿನ್ನಕ್ಕೆ ಬೇಡಿಕೆ ಹೆಚ್ಚಾಗಿರುವುದು ಸಹಜವಾಗಿಯೆ ಬೆಲೆ ಹೆಚ್ಚಳಕ್ಕೆ ಹೇತುವಾಗಿದೆ. ಸದ್ಯಕ್ಕೆ ದೇಶಿ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಪ್ರತಿ 10 ಗ್ರಾಂ.ಗೆ 29,080 ರೂಪಾಯಿ ಆಸುಪಾಸಿನಲ್ಲಿ ಇದೆ.
ಇದು ಕಳೆದ 19 ವಾರಗಳಲ್ಲಿನ ಅತ್ಯಧಿಕ ಮತ್ತು ದಿಢೀರ್ ಬೆಲೆ ಹೆಚ್ಚಳವಾಗಿದೆ.

ದೇಶೀಯ ಚಿನ್ನ ಮಾರುಕಟ್ಟೆಯಲ್ಲಿ ಗುರುವಾರ 10 ಗ್ರಾಂ ಚಿನ್ನದ ಬೆಲೆ 300 ರುಪಾಯಿ ಏರಿಕೆ ಕಂಡಿತು. ಆದರೆ ಬೆಳ್ಳಿ ಬೆಲೆ ಕೆಜಿಗೆ 57,400 ರುಪಾಯಿಯಲ್ಲಿ ಸ್ಥಿರವಾಗಿಯೇ ಇತ್ತು.
User Comments
[ ಅಭಿಪ್ರಾಯ ಬರೆಯಿರಿ ]
ಈ ಲೇಖನಕ್ಕೆ ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ.
    Upcoming Matches
SL Vs PAK - 2nd Twenty20 Sun 3rd Jun Int2020
ENG Vs WI - 3rd Test at Edgbaston Thu 7th Jun Test
SL Vs PAK - 1st ODI at R Premadasa Stadium Thu 7th Jun ODI
Follow Oneindia Kannada on Twitter
Oneindia Kannada Facebook fan page
Write Comments on this Article