•  

ರಾಜ್ಯದಲ್ಲಿ ಅಕ್ಕಿ ಬೆಲೆಯಲ್ಲಿ ಭಾರೀ ಹೆಚ್ಚಳ

ಬುಧವಾರ, ಫೆಬ್ರವರಿ 22, 2012, 19:27 [IST]
Rice price hiked in Karnataka
ಬೆಂಗಳೂರು, ಫೆ. 22 : 'ಅಕ್ಕಿ ಮೇಲೆ ಆಸೆ, ನೆಂಟರ ಮೇಲೆ ಪ್ರೀತಿ' ಗಾದೆಯನ್ನು ಇನ್ನು ಮುಂದೆ 'ಅಕ್ಕಿ ಮೇಲೆ ಅತಿಯಾದ ಆಸೆ, ನೆಂಟರ ಮೇಲೆ ತುಸು ಕಡಿಮೆ ಪ್ರೀತಿ' ಎಂದು ಬದಲಾಯಿಸಬೇಕಾದ ಪರಿಸ್ಥಿತಿ (ಕನಿಷ್ಠ ಬಡವರಿಗೆ) ಬಂದಿದೆ. ಏಕೆಂದರೆ, ಕರ್ನಾಟಕದಲ್ಲಿ ಅಕ್ಕಿಯ ಬೆಲೆಯನ್ನು ಏಕಾಏಕಿ ಏರಿಸಲಾಗಿದೆ. ಉಳ್ಳವರಿಗೇನೂ ಚಿಂತೆಯಿಲ್ಲ, ಆದರೆ ಬಡವರ ಗತಿ?

ಪ್ರತಿ ಕಿ.ಗ್ರಾಂ. ಮೇಲೆ ಕನಿಷ್ಠವೆಂದರೂ 5 ರು. ಏರಿಸಲಾಗಿದ್ದು, ದಿನನಿತ್ಯದ ಊಟಕ್ಕಾಗಿ ಅನ್ನವನ್ನೇ ಅವಲಂಬಿಸಿರುವ ಬಡವರ ಹೊಟ್ಟೆಯ ಮೇಲೆ ಭಾರೀ ಹೊಡೆತ ನೀಡಲಾಗಿದೆ. ಬುಧವಾರದಿಂದಲೇ ಎಪಿಎಂಸಿಯಲ್ಲಿ ಅಕ್ಕಿಯ ಬೆಲೆಯಲ್ಲಿ ಭಾರೀ ಏರಿಕೆ ಕಂಡುಬಂದಿದೆ. ಇದು ದಲ್ಲಾಳಿಗಳನ್ನು ದಾಟಿ ವ್ಯಾಪಾರಿಗಳನ್ನು ಸೇರಿ, ಜನರ ಚೀಲ ಸೇರುವ ಹೊತ್ತಿಗೆ ಎಷ್ಟಾಗಿರುತ್ತದೋ?

ಅಕ್ಕಿಯ ಉತ್ಪಾದನೆ ಕಡಿಮೆಯಾಗಿ, ರಫ್ತು ಹೆಚ್ಚಾಗಿರುವುದರಿಂದ ಅಕ್ಕಿ ಬೆಲೆಯಲ್ಲಿ ಏರಿಕೆಯುಂಟಾಗಿದೆ. ಅಕ್ಕಿ ರಫ್ತನ್ನು ಕೂಡಲೆ ನಿಲ್ಲಿಸಿ ನಮಗೇ ಅಕ್ಕಿ ದಕ್ಕುವಂತೆ ಮಾಡಬೇಕು. ಆಗ ಮಾತ್ರ ಅಕ್ಕಿ ಬೆಲೆ ಇಳಿಯಲು ಸಾಧ್ಯ. ಇಲ್ಲದಿದ್ದರೆ ಬೆಲೆ ಇನ್ನಷ್ಟು ಏರುವ ಸಾಧ್ಯತೆಯಿದೆ ಎಂಬುದು ವರ್ತಕರ ಕಿಡಿನುಡಿ.

ಅಕ್ಕಿ ಬೆಲೆ ಏರಿಕೆಯಿಂದಾಗಿ ಮನೆಗೆ ಬರುವ ಅತಿಥಿಗಳನ್ನು ಊಟಕ್ಕೆ ಕೂಡಿಸಲು ಹಿಂದೆ ಮುಂದೆ ನೋಡುವಂತಾಗಿದೆ. ಹಾಗೆಯೆ, ಅಕ್ಕಿ ಯಾವುದೇ ರೀತಿಯಲ್ಲಿ ಹಾಳಾಗದಂತೆ ನೋಡುವ ಜವಾಬ್ದಾರಿಯೂ ನಾಗರಿಕರ ಮೇಲಿದೆ. ಅದೇ ರೀತಿ, ಸರಕಾರ ಕೂಡ ಈ ನಿಟ್ಟಿನಲ್ಲಿ ಚಿಂತಿಸಬೇಕಾಗಿದೆ. ಇಲ್ಲದಿದ್ದರೆ, ಮೃಷ್ಟಾನ್ನದ ಬದಲು ಚಿತ್ರಾನ್ನವೇ ಗತಿ.

ಅಕ್ಕಿ ಹಾಳಾಗದಂತೆ, ದುಂದಾಗದಂತೆ, ಮಣ್ಣು ಪಾಲಾಗದಂತೆ, 'ಹೆಗ್ಗಣ'ಗಳ ಹೊಟ್ಟೆ ಸೇರದಂತೆ ಮಾಡುವುದು ಹೇಗೆ? ನಮಗೆ ಬರೆದು ತಿಳಿಸಿ.

User Comments
Ramesh 23 Feb 2012 11:44 am
ಅಕ್ಕಿಯನ್ನು ಮೆಡಿಕಲ್ ಸ್ಟೋರ್ನಲ್ಲಿ ಸಿಗುವ PARAD TABLETS ಅನ್ನು ಮೂಟೆ ಒಳಗೆ ಮಧ್ಯೆ ಮಧ್ಯೆ ಸೇರಿಸಿ ಇಡುವುದರಿಂದ ಅಕ್ಕಿಯು ಹಾಳಾಗದಂತೆ ಹೆಚ್ಚು ತಿಂಗಳುಗಳ ಕಾಲ ರಕ್ಷಿಸಬಹುದು. ಬೇರೆ ಕಾಳು ಮತ್ತು ಇತರ ಧಾನ್ಯಗಳನ್ನು ಇದೇ ರೀತಿ ಸಂರಕ್ಷಿಸಬಹುದು.
drija 22 Feb 2012 09:01 pm
ಅಕ್ಕಿ ಬೆಳೆವ ಜಮೀನು ರಾಜಕಾರಣಿಗಳು ಕಬಳಿಸಿ ಶಾಪಿಂಗ್ ಮಾಲ್ , ಏರ್ ಪೋರ್ಟ್ , ರಿಯಲ್ ಎಸ್ಟೇಟ್ ಮಾಡಿದ್ರೆ ಎಲ್ಲಿ ಅಕ್ಕಿ ಉತ್ಪನ್ನ ಎಲ್ಲಿ ಆಗುತ್ತೆ ?
[ ಅಭಿಪ್ರಾಯ ಬರೆಯಿರಿ ]
   
    Upcoming Matches
SL Vs PAK - 1st Twenty20 Fri 1st Jun Int2020
SL Vs PAK - 2nd Twenty20 Sun 3rd Jun Int2020
ENG Vs WI - 3rd Test at Edgbaston Thu 7th Jun Test
Follow Oneindia Kannada on Twitter
Oneindia Kannada Facebook fan page
Write Comments on this Article