•  

ಹೋಂವರ್ಕ್ ಮಾಡದ 6 ವರ್ಷದ ಕಂದಮ್ಮ ಇನ್ನಿಲ್ಲ

ಬುಧವಾರ, ಫೆಬ್ರವರಿ 22, 2012, 15:32 [IST]
homework-locked-in-dark-room-lkg-boy-dies
ರೋಹ್ಟಕ್(ಹರಿಯಾಣ), ಫೆ.22: ಹೋಂವರ್ಕ್ ಮಾಡಲಿಲ್ಲ ಎಂಬ ಕಾರಣಕ್ಕಾಗಿ ಆರು ವರ್ಷದ ಎಲ್‌ಕೆಜಿ ಹುಡುಗನನ್ನು ಶಿಕ್ಷಕಿಯೊಬ್ಬರು ಕತ್ತಲೆ ಕೋಣೆಯಲ್ಲಿ ಕೂಡಿ ಹಾಕಿದ್ದರು. ಅದರ ಪರಿಣಾಮವಾಗಿ ಆಘಾತಕ್ಕೊಳಗಾದ ಮಗು, ಒಂದೂವರೆ ತಿಂಗಳ ಬಳಿಕ ಸಾವನ್ನಪ್ಪಿದ್ದಾನೆ. ಘಟನೆಯ ಸಂಬಂಧ ಬಾಲಕನ ಹೆತ್ತವರು ಕರ್ನಲ್ ಜಿಲ್ಲಾ ಪೊಲೀಸರಿಗೆ ದೂರು ನೀಡಿದ್ದಾರೆ.

ಮೃತ ವಿದ್ಯಾರ್ಥಿ ಪಂಕಜ್, ರೋಹ್ಟಕ್‌ನ ವೈದ್ಯಕೀಯ ವಿಜ್ಞಾನಗಳ ಸ್ನಾತಕೋತ್ತರ ಪದವಿ ಶಿಕ್ಷಣ ಸಂಸ್ಥೆ ಆಸ್ಪತ್ರೆಯಲ್ಲಿ ಮೊನ್ನೆ ಭಾನುವಾರ ರಾತ್ರಿ ಸಾವನ್ನಪ್ಪಿರುವುದಾಗಿ ವರದಿಯಾಗಿದೆ. ಶಿಕ್ಷಕಿಯ ಕೃತ್ಯದಿಂದ ತೀವ್ರ ಆಘಾತಗೊಂಡಿದ್ದ ಮಗುವನ್ನು ಕಳೆದ ತಿಂಗಳು ಆಸ್ಪತ್ರೆಗೆ ದಾಖಲಿಸಲಾಗಿತ್ತು. .

ಹೋಂವರ್ಕ್ ಮಾಡಲಿಲ್ಲ ಎಂಬ ಕಾರಣಕ್ಕಾಗಿ ಡಿಸೆಂಬರ್ 27ರಂದು ಶಾಲೆಯ ಶಿಕ್ಷಕಿ ದುರ್ದೈವಿ ಹುಡುಗನನ್ನು ಕತ್ತಲು ಕೋಣೆಯೊಳಗೆ ಕೂಡಿ ಹಾಕಿದ್ದರು. ಶಿಕ್ಷಕಿಯು ಶಾಲೆ ಬಿಟ್ಟು ಹೋಗಿದ್ದರು. ತುಂಬಾ ಹೊತ್ತಾದರೂ ಮನೆಗೆ ಮರಳದ ಬಾಲಕನನ್ನು ಹುಡುಕಿಕೊಂಡು ಬಂದಿದ್ದ ಆತನ ಹಿರಿಯ ಸಹೋದರಿಗೆ ಮಗು ಪ್ರಜ್ಞೆ ತಪ್ಪಿ ಬೀಗ ಹಾಕಿದ್ದ ಕೋಣೆಯಲ್ಲಿ ಬಿದ್ದಿರುವುದನ್ನು ಕಂಡುಬಂದಿತು.

ಅಲ್ಲಿಂದಾಚೆಗೆ ಆಘಾತಗೊಂಡ ಬಾಲಕ, ಸರಿಯಾಗಿ ಊಟ ಮಾಡುವುದನ್ನೇ ನಿಲ್ಲಿಸಿದ್ದ. ಬಳಿಕ ಅನಾರೋಗ್ಯ ಪೀಡಿತನಾದ. ಆನಂತರ ಹೆಚ್ಚಿನ ಚಿಕಿತ್ಸೆಗಾಗಿ ಬಾಲಕನನ್ನು ರೋಹ್ಟಕ್‌ನ ಆಸ್ಪತ್ರೆಗೆ ದಾಖಲಿಸಲಾಗಿತ್ತು.

User Comments
Nagaraja Magonahalli 23 Feb 2012 08:47 am
ಇದೇನು ಶಾಲೆಯೂ ಅಥವಾ ಬಂದೀಖಾನೆಯೂ?
altaf 22 Feb 2012 05:25 pm
ಸಣ್ಣ ಮಕ್ಕಳಿಗೆ ಹೋಂ ವರ್ಕ್ ಕೊಡಲೇ ಬಾರದು.ಬೆಳಿಗ್ಗೆ ಒಂಬತ್ತುವರೆಯಿಂದ ಸಾಯಂಕಾಲ ನಾಲ್ಕರವರೆಗೆ ಕಲಿತ ವಿಧ್ಯೆ ಧಾರಾಳವಾಗಿ ಸಾಕು.ಮನೆಗೆ ಬಂದ ಮಕ್ಕಳು ಸ್ವಲ್ಪ ಫ್ರೀ ಆಗಿರಲಿ.ಮನೆಯಲ್ಲಿ ಹೆತ್ತವರು ರಕ್ಷಕರು ಸ್ವಲ್ಪ ನೀತಿ ಪಾಠ ಹೇಳಿಕೊಟ್ಟರೆ ಸಾಕು.
[ ಅಭಿಪ್ರಾಯ ಬರೆಯಿರಿ ]
   
    Upcoming Matches
SL Vs PAK - 1st Twenty20 Fri 1st Jun Int2020
SL Vs PAK - 2nd Twenty20 Sun 3rd Jun Int2020
ENG Vs WI - 3rd Test at Edgbaston Thu 7th Jun Test
Follow Oneindia Kannada on Twitter
Oneindia Kannada Facebook fan page
Write Comments on this Article