ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇರಳ ಪದ್ಮನಾಭ ದೇಗುಲಕ್ಕೆ ಭದ್ರತೆಯ ಆತಂಕ

By Srinath
|
Google Oneindia Kannada News

kerala-padmanabha-temple-treasure-security-threats
ತಿರುವನಂತಪುರ, ಫೆ.17: ತನ್ನಲ್ಲಿ ಹುದುಗಿಸಿಕೊಂಡಿದ್ದ ಅನಂತ ಸಂಪತ್ತಿನಿಂದ ಎಲ್ಲರನ್ನೂ ಬೆಚ್ಚಿಬೀಳಿಸಿದ ಇಲ್ಲಿನ ಅನಂತ ಪದ್ಮನಾಭ ಸ್ವಾಮಿ ದೇಗುಲಕ್ಕೆ ಭದ್ರತೆಯ ಭೀತಿ ಎದುರಾಗಿದೆ. ಅದರಲ್ಲೂ ದೇಗುಲದ ನೆಲಮಾಳಿಗೆಯಲ್ಲಿರುವ ಅಮೂಲ್ಯ ಸಂಪತ್ತಿನ ರಕ್ಷಣೆಯದ್ದೇ ಚಿಂತೆಯಾಗಿದೆ.

ಹತ್ತಾರು ಕ್ಯಾಮರಾಗಳೊಂದಿಗೆ ರಾಜ್ಯ ಪೊಲೀಸ್ ಸಿಬ್ಬಂದಿ ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತಿದ್ದರೂ ಯಾವ ಕ್ಷಣದಲ್ಲಿ ಏನಾಗುವುದೋ ಎಂಬ ಭೀತಿಗೆ ತುತ್ತಾಗಿದೆ. ದೇಗುಲದ ನೆಲಮಾಳಿಗೆಗಳಲ್ಲಿರುವ ಅಪಾರ ಸಂಪತ್ತನ್ನು ದೋಚಲು ಭೂಗತ ಡಕಾಯಿತಿ ಪ್ರಯತ್ನಗಳು ನಡೆದರೆ ಗತಿಯೇನು? ಸದ್ಯಕ್ಕೆ ಈ ಸಾಧ್ಯತೆ ಇಲ್ಲ ಎನ್ನುವುದಾದರೂ ದೇಗುಲದ ನೆಲಮಾಳಿಗೆಗೆ ಸಂಪರ್ಕ ಕಲ್ಪಿಸುವ ಸುರಂಗ ಮಾರ್ಗಗಳು ಇವೆಯೆಂಬುದು ಜನಜನಿತ. ಇದೇ ಈಗ ಆತಂಕ ಸೃಷ್ಟಿಸಿರುವುದು.

ಜತೆಗೆ, ಭಾರಿ ಪ್ರಮಾಣದ ಸಂಪತ್ತು ಮತ್ತು ಅದರ ಬಗ್ಗೆ ಅಪಾರ ಪ್ರಚಾರ ಸಿಕ್ಕಿರುವುದರಿಂದ ವಿಶ್ವಮಟ್ಟದ ವೃತ್ತಿಪರ ಡಕಾಯಿತಿ ತಂಡಗಳು ಏನು ಬೇಕಾದರೂ ಮಾಡಬಹುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಸ್ವೀಡನ್ನಿನಲ್ಲಿ ಹಾಡಹಗಲೇ ಹೆಲಿಕಾಪ್ಟರ್ ಮೂಲಕ ಬ್ಯಾಂಕ್ ತಿಜೋರಿಗಳ ಡಕಾಯಿತಿ ಮಾಡುವ ಭೂಗತ ಪಾತಕಿಗಳು ಇದ್ದಾರೆ. ಹೀಗೆ ಸಾವಿರಾರು ಕೋಟಿ ರುಪಾಯಿ ದರೋಡೆಯಾಗಿದ್ದರೂ ಜಗತ್ತಿನಲ್ಲೇ ಅತ್ಯಂತ ಚಾಣಾಕ್ಷರು ಎನಿಸಿಕೊಂಡಿರುವ ಸ್ವೀಡನ್ ಪೊಲೀಸರು ಈ ಪ್ರಕರಣಗಳನ್ನು ಬೇಧಿಸದೆ ಇನ್ನೂ ಕಣ್ಮುಚ್ಚಿ ಕುಳಿತಿರುವಾಗ ಕೇರಳ ಪದ್ಮನಾಭ ದೇಗುಲಕ್ಕೆ ಏನಾಗುವುದೋ ಎಂಬ ಆತಂಕ ಸ್ಥಳೀಯ ಪೊಲೀಸರಿಗೆ ಇದೆ.

English summary
Even as dozens of surveillance cameras and police personnel are guarding the priceless treasures at the Sree Padmanabha Swamy temple at Thiruvananthapuram in Kerala, safety concerns are loud and clear. Considering the value of the treasure in the temple chambers, and in view of the wide publicity it got in recent months, robbery bids could not be ruled out.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X