•  

ಮೂವತ್ತು ನಿಮಿಷದಲ್ಲಿ ಬೆಂಗಳೂರಿಂದ ಮೈಸೂರಿಗೆ ಝೂಮ್

ಗುರುವಾರ, ಫೆಬ್ರವರಿ 16, 2012, 14:15 [IST]
Bangalore to Mysore in just 30 minutes
ಬೆಂಗಳೂರು, ಫೆ. 16 : ಪ್ಯಾಸೆಂಜರ್ ರೈಲಲ್ಲಿ ಅಥವಾ ಎಕ್ಸ್‌ಪ್ರೆಸ್ ಟ್ರೈನಲ್ಲಿ ಬೆಂಗಳೂರಿನಿಂದ ಮೈಸೂರಿಗೆ ಹೋಗಲು ಎಷ್ಟು ಸಮಯ ಬೇಕು? ಮೂರು, ಮೂರು ಕಾಲು ಗಂಟೆ? ಮೂರು ಗಂಟೆಯಲ್ಲ ಕೇವಲ ಮೂವತ್ತು ನಿಮಿಷದಲ್ಲಿ ಬೆಂಗಳೂರಿನಿಂದ ಮೈಸೂರನ್ನು ತಲುಪುವ ಹಾಗಿದ್ದರೆ ಹೇಗೆ?
  Read:  In English 
ಕನಸು ಕಾಣುವುದಕ್ಕೂ ಒಂದು ಮಿತಿಯಿರಬೇಕು ಅಂತ ಅಂದುಕೊಳ್ಳಬೇಡಿ. ದೆಹಲಿ ಮೆಟ್ರೋ ರೈಲ್ ಕಾರ್ಪೊರೇಷನ್ (DMRC) ಪ್ರಧಾನ ಸಲಹೆಗಾರ ಈ ಶ್ರೀಧರನ್ ಅವರು ರಾಜ್ಯ ಸರಕಾರದ ಮನದಲ್ಲಿ ಬಿತ್ತಿರುವ ಕನಸಿನ ಬೀಜ ಮೊಳಕೆಯೊಡೆದರೆ, ಮೂವತ್ತು ನಿಮಿಷದಲ್ಲಿ ತಲುಪುವ ಕನಸು ನನಸಾಗುವುದು ಖಂಡಿತ.

ಈ ಕುರಿತು ಡಿಎಮ್ಆರ್‌ಸಿ ಕರ್ನಾಟಕದ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರಿಗೆ ಒಂದು ಪತ್ರ ಬರೆದಿದ್ದು, ಹೈ ಸ್ಪೀಡ್ ರೈಲು ಮಾರ್ಗವನ್ನು ರಚಿಸುವ ಪ್ರಸ್ತಾವನೆಯನ್ನು ಮುಂದಿಟ್ಟಿದೆ. ಇದಕ್ಕಾಗಿ ನೀಲನಕ್ಷೆ ಕೂಡ ಸಿದ್ಧವಾಗಿದ್ದು, ಕೇಂದ್ರ ಸರಕಾರ ಮತ್ತು ಕೇಂದ್ರ ರೈಲ್ವೆ ಇಲಾಖೆ ಇದನ್ನು ಕಾರ್ಯರೂಪಕ್ಕೆ ತರಲು ಉತ್ಸುಕತೆ ತೋರಿವೆ.

ಬೆಂಗಳೂರು ಮತ್ತು ಮೈಸೂರು ನಡುವೆ ಓಡಾಡುವವರ ಸಂಖ್ಯೆಯನ್ನು ಗಮನಿಸಿದರೆ ಮತ್ತು ಗಮ್ಯ ತಲುಪಬೇಕಾದ ಸಮಯ ಗಣನೆಗೆ ತೆಗೆದುಕೊಂಡರೆ ಇಂಥ ಹೈ ಸ್ಪೀಡ್ ರೈಲ್ ಲಿಂಕ್ ಅಗತ್ಯ ಖಂಡಿತವಿದೆ. ಇದಕ್ಕೆ ಅನುಮೋದನೆ ದೊರೆತು, ಯೋಜನೆ ಅನುಷ್ಠಾನಗೊಂಡರೆ ಎರಡೂ ನಗರಗಳ ನಡುವಿನ ಅಂತರವನ್ನು, ಗಂಟೆಗೆ 350 ಕಿ.ಮೀ. ವೇಗದಲ್ಲಿ ಚಲಿಸುವ ರೈಲಿನಲ್ಲಿ ಕೇವಲ 30 ನಿಮಿಷದಲ್ಲಿ ಕ್ರಮಿಸಬಹುದಾಗಿದೆ ಎಂದು ಶ್ರೀಧರನ್ ಹೇಳಿದ್ದಾರೆ.

User Comments
ರೇಖಾ 16 Feb 2012 03:05 pm
ಈ ಯೋಜನೆಯು ಅನುಷ್ಠಾನಗೊಂಡರೆ ಸಾವಿರಾರು ಮಂದಿ ಉದ್ಯೋಗಿಗಳಿಗೆ ಖಂಡಿತವಾಗಿಯೂ ಅನುಕೂಲವಾಗಿತ್ತದೆ. ಮೈಸೂರಿನಿಂದ ಬೆಂಗಳೂರಿಗೆ ಕನಾ೵ಟಕ ಸಕಾ೵ರದ ಸಚಿವಾಲಯದ ಹಾಗೂ ವಿವಿಧ ಖಾಸಗಿ ಕಂಪನಿಗಳಿಗೆ ಪ್ರತಿದಿನ ಮೈಸೂರಿನಿಂದ ಬರುವವರ ಸಂಖ್ಯೆ ಸಾವಿರಕ್ಕಿಂತ ಹೆಚ್ಚಿದೆ ಅದರಲ್ಲಿ ನಾನು ಒಬ್ಭಳು ಸಹ, ಇದರಿಂದ ವೇಳೆ ಉಳಿತಾಯವಾಗುವುದಲ್ಲದೆ, ಎಷ್ಟೋ ಹೆಣ್ಣು ಮಕ್ಕಳ ಕುಟುಂಬದ ಸಮಸ್ಯೆಗಳು ಬಹೆಹರಿದು ನೆಮ್ಮದಿಯಾಗಿರುತ್ತಾರೆ. ದಯವಿಟ್ಟು ಸಿ.ಎಂ ರವರು ಈ ಕಾಯ೵ಕ್ಕೆ ಒಪ್ಪಿಗೆ ಸೂಚಿಸಿ ಮೈಸೂರಿನ ರೈಲ್ವೆ ಪ್ರಯಾಣಿಕರಿಗೆ ಆದಷ್ಟು ಬೇಗ ಸಿಹಿಸುದ್ದಿಯನ್ನು ಕೋಡಬೇಕಾಗಿ ವಿನಂತಿ.
augustin 16 Feb 2012 03:57 pm
ರೇಖಾ ಚೆನ್ನಾಗಿ ಹೇಳಿದಿರಿ.
santosh 16 Feb 2012 02:59 pm
ತುಂಬಾ ಸಂತೋಷ ದ ವಿಷಯ ಅದಸ್ಟ್ ಬೇಗ ಕಾರ್ಯ ರೂಪಕ್ಕೆ ಬರಲಿ
[ ಅಭಿಪ್ರಾಯ ಬರೆಯಿರಿ ]
   
1st Test , Lord's Cricket Ground, St John's Wood
England won by 5 wickets
Follow Oneindia Kannada on Twitter
Oneindia Kannada Facebook fan page
Write Comments on this Article