•  

ನರ್ಸ್ ಗಳ ಮುಷ್ಕರ ಅಂತ್ಯ, ಸುರೇಶ್ ಭರವಸೆ

ಬುಧವಾರ, ಫೆಬ್ರವರಿ 15, 2012, 18:22 [IST]
Nurse Protest Karnataka
ಬೆಂಗಳೂರು, ಫೆ.15: ಹಲವಾರು ದಿನಗಳಿಂದ ಬೇಡಿಕೆ ಈಡೇರಿಸುವಂತೆ ನಗರದ ಫ್ರೀಡಂ ಪಾರ್ಕ್ ನಲ್ಲಿ ನಡೆಸುತ್ತಿದ್ದ ಮುಷ್ಕರಕ್ಕೆ ಮುಕ್ತಾಯ ಹಾಡಲಾಗಿದೆ.

ಕಳೆದ 8 ದಿನಗಳಿಂದ ನರ್ಸ್ ಗಳು ಮುಷ್ಕರ ಹೂಡಿದ್ದರು. ಬುಧವಾರ ಸಚಿವ ಸುರೇಶ್ ಕುಮಾರ್ ಅವರು ಧರಣಿ ನಡೆಯುತ್ತಿದ್ದ ಸ್ಥಳಕ್ಕೆ ಭೇಟಿ ಕೊಟ್ಟ್ ಸಂದರ್ಭದಲ್ಲಿ ಅಸ್ವಸ್ಥಗೊಂಡಿದ್ದ ನರ್ಸ್ ಯೊಬ್ಬರು ಕುಸಿದು ಬಿದ್ದ ಘಟನೆ ನಡೆಯಿತು.

ಇದರಿಂದ ತೀವ್ರವಾಗಿ ಆಘಾತಗೊಂಡ ಸಚಿವ ಸುರೇಶ್ ಕುಮಾರ್ ಅವರು ನರ್ಸ್ ಗಳ ಬೇಡಿಕೆ ಈಡೆರುವ ಭರವಸೆ ನೀಡಿ, ಮುಷ್ಕರ ನಿಲ್ಲಿಸುವಂತೆ ಹೇಳಿದರು.

ತೀವ್ರವಾಗಿ ಅಸ್ವಸ್ಥಗೊಂಡಿದ್ದ ನರ್ಸ್ ಗಾಯತ್ರಿ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ.

ಸುಮಾರು 1,500 ಕ್ಕೂ ಅಧಿಕ ಹುದ್ದೆಗಳು ಖಾಲಿ ಇದೆ. ಆದರೆ, 4,700ಕ್ಕೂ ಅಧಿಕ ನರ್ಸ್ ಗಳು ಇನ್ನೂ ಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ನೇಮಕಗೊಂಡ ಸ್ಟಾಪ್ ನರ್ಸ್ ಸಂಬಳ ಪ್ರತಿ ತಿಂಗಳಿಗೆ 17,142 ಎಂದು ನಿಗದಿಪಡಿಸಬೇಕು. ಉಳಿದ ಗುತ್ತಿಗೆ ಸೇವೆ ನರ್ಸ್ ಗಳ ಸಂಬಳ ಕೂಡಾ ಖಾಯಂ ನರ್ಸ್ ಗಳ ಸಂಬಳವನ್ನು ಹೋಲುವಂತಿರಬೇಕು ಎಂದು ಬೇಡಿಕೆ ಸಲ್ಲಿಸಲಾಗಿದೆ.
User Comments
[ ಅಭಿಪ್ರಾಯ ಬರೆಯಿರಿ ]
ಈ ಲೇಖನಕ್ಕೆ ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ.
1st Test , Lord's Cricket Ground, St John's Wood
England won by 5 wickets
Follow Oneindia Kannada on Twitter
Oneindia Kannada Facebook fan page
Write Comments on this Article