ಬೆಂಗಳೂರು, ಫೆ.15: ಕಳೆದ ವರ್ಷ ಅತ್ಯಧಿಕ ಪ್ರಮಾಣದಲ್ಲಿ ಡೌನ್ ಲೋಡ್ ಆದ ಮೊಬೈಲ್ ಗೇಮ್ ಎಂಬ ಹೆಗ್ಗಳಿಕೆ angry birdsಗೆ ಸಲ್ಲುತ್ತದೆ. ಇಂತಿಪ್ಪ ಆಂಗ್ರಿ ಬರ್ಡ್ಸ್ ನಿನ್ನೆ (ಫೆ.14) ಫೇಸ್ ಬುಕ್ ಗೂ ಹಾರಿ ಬಂದಿದೆ.
ಆಂಗ್ರಿ ಬರ್ಡ್ಸ್ ವಿಶ್ವವ್ಯಾಪಿ ಜ್ವರವಾಗಿ ಕಾಡುತ್ತಿದೆ. ಅಂತರ್ಜಾಲದಲ್ಲಿ ಅತ್ಯಂತ ಪ್ರಭಾವಿ ಮಾಧ್ಯಮವಾಗಿ ಬೆಳೆಯುತ್ತಿರುವ ಫೇಸ್ ಬುಕ್ ನಲ್ಲಿ angry birds 'ಲವ್ ಬರ್ಡ್ಸ್' ದಿನದಂದು ಹಾರಿ ಬಂದಿರುವ ಅವುಗಳ ಹಾರಾಟ ಮತ್ತಷ್ಟು ಹೆಚ್ಚಾಗಿದೆ. ಫಿನ್ ಲ್ಯಾಂಡಿನ ರೋವಿಯೋ ಎಂಬ ಯುವಕ ಆಟವಾಡುತ್ತಲೇ ಇಂತಹ ಅದ್ಭುತ ಆಟವನ್ನು ಹುಟ್ಟುಹಾಕಿದ್ದಾನೆ. ಅದೀಗ ಎಲ್ಲೆಲ್ಲೂ ಚಟವಾಗಿ ಹಬ್ಬುತ್ತಿದೆ.
ವಿಶ್ವದಾದ್ಯಂತ 8000 ಲಕ್ಷ ಫೇಸ್ ಬುಕ್ ಬಳಕೆದಾರರಿದ್ದಾರೆ. 2009ರಲ್ಲಿ ಬಿಡುಗಡೆಯಾದ angry birds ಇದುವರೆಗೆ 7000 ಲಕ್ಷ ಮೊಬೈಲುಗಳಿಗೆ ಡೌನ್ ಲೋಡ್ ಆಗಿದೆ. ಫೇಸ್ ಬುಕ್ ಗೆ ಪದಾರ್ಪಣೆ ಮಾಡುವ angry birds ಹೊಚ್ಚ ಹೊಸ ನಮೂನೆಯದ್ದಾಗಿವೆ. ಇದು ಖಂಡಿತ ಟೆಕ್ಕಿಗಳ ಮನ ಗೆಲ್ಲುತ್ತದೆ ಎಂಬ ಭರವಸೆಯಿದೆ ಎಂದು ರೋವಿಯೋ ಕಂಪನಿ ತಿಳಿಸಿದೆ.