ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೇದವ್ಯಾಸ ಶ್ರೀನಿವಾಸ ಆಚಾರ್ಯ (1939-2012)

By Mahesh
|
Google Oneindia Kannada News

ಸರಳ, ಸಜ್ಜನ ರಾಜಕಾರಣಿ, ಅಜಾತಶತ್ರು ಡಾ. ವೇದವ್ಯಾಸ ಶ್ರೀನಿವಾಸ ಆಚಾರ್ಯ ಅವರ ಹಠಾತ್ ನಿಧನದಿಂದ ಕರ್ನಾಟಕ ಶೋಕಾಚರಣೆಯಲ್ಲಿ ಮುಳುಗಿದೆ. ಆಚಾರ್ಯ ಅವರ ಜೀವನದ ಅಸಮಗ್ರ ಅವಲೋಕನ ಇಲ್ಲಿದೆ...

ಕುಟುಂಬ:
* 1939ರಲ್ಲಿ ಉಡುಪಿಯಲ್ಲಿ ಜನನ
* ತಂದೆ: ವಿದ್ವಾನ್ ವೇದಾಂತ ಶಿರೋಮಣಿ ಕಟ್ಟೆ ಶ್ರೀನಿವಾಸ ಆಚಾರ್ಯ ಮತ್ತು ಶ್ರೀಮತಿ ಕೃಷ್ಣವೇಣಿ ಅಮ್ಮ

* ಪತ್ನಿ: ಶ್ರೀಮತಿ ಶಾಂತಾ ವಿ ಆಚಾರ್ಯ, ಬಿಎಸ್ಸಿ ಪದವೀಧರೆ, ಸಾಮಾಜಿಕ ಕಾರ್ಯಕರ್ತೆ, ನಗರ ಪಾಲಿಕೆ ಮಾಜಿ ಸದಸ್ಯೆ.
* ಮಕ್ಕಳು: ಡಾ. ರವಿರಾಜ್ ವಿ ಆಚಾರ್ಯ: ಎಂಬಿಬಿಎಸ್ ಎಂಡಿ(ವೈದ್ಯಕೀಯ), ಕಸ್ತೂರ್ಬಾ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ಪ್ರೊಫೆಸರ್ ಹಾಗೂ ವಿಭಾಗದ ಮುಖ್ಯಸ್ಥ.
ಶಶಿರಶ್ಮಿ ಆಚಾರ್ಯ, ಎಂಡಿಎಸ್, ಪ್ರೊಫೆಸರ್ ಡೆಂಟಲ್, ಮಣಿಪಾಲ್ ವಿಶ್ವವಿದ್ಯಾಲಯ
ಡಾ ಕಿರಣ್ ಕೆ ವಿ ಆಚಾರ್ಯ: ಎಂಬಿಬಿಎಸ್ ಎಂಎಸ್(ಆರ್ಥೋಪೆಡಿಕ್ಸ್) ಪ್ರೊಫೆಸರ್ ಕಸ್ತೂರ್ಬಾ ಆಸ್ಪತ್ರೆ.
ಸೊಸೆ: ಕಿರಣ್ ಅವರ ಪತ್ನಿ ಪ್ರತೀಮಾ, ವಿದುಷಿ, ಕಲಾನಿಧಿ, ಉಡುಪಿ ನಿರ್ದೇಶಕಿ
* ಗಣೇಶ್ ಪ್ರಸಾದ್ : ಬಿಇ ಸಾಫ್ಟ್ ವೇರ್ ಇಂಜಿನಿಯರ್ ಯುಎಸ್ಎ
* ರಾಜೇಂದ್ರ ಪ್ರಸಾದ್: ಬಿಇ, ಸಾಫ್ಟ್ ವೇರ್ ಇಂಜಿನಿಯರ್(ಪತ್ನಿ ಮಧು)
* ಭಾರತಿ ಎಂ ಹೆಬ್ಬಾರ್, ಯುಎಸ್ ಎ (ಮೋಹನ್ ಹೆಬ್ಬಾರ್ )

ವಿದ್ಯಾಭ್ಯಾಸ, ರಾಜಕೀಯ ಜೀವನ:
* 1959: ವೈದ್ಯಕೀಯ ಶಿಕ್ಷಣ, ಕೆಎಂಸಿ ಮಣಿಪಾಲ್, ಎರಡು ಬಾರಿ ಉತ್ತಮ ವಿದ್ಯಾರ್ಥಿ ಪ್ರಶಸ್ತಿ
* 1968: ಉಡುಪಿಯ ಸ್ವರ್ಣ ನೀರು ಸರಬರಾಜು ಯೋಜನೆ ಮುನ್ಸಿಪಲ್ ಅಧ್ಯಕ್ಷರಾಗಿ ಆಯ್ಕೆಯಾದಾಗ ಕೇವಲ 28 ವರ್ಷ ವಯಸ್ಸು.
* ಉಡುಪಿ ನಗರ ಪಾಲಿಕೆ ಸುಧಾರಣೆ, ಕಟ್ಟಡ, ಆಡಳಿತದ ಹಿಂದಿನ ಶಕ್ತಿಯಾಗಿದ್ದರು.

* ಎರಡು ಬಾರಿ ಸ್ಥಳೀಯ ಮುನ್ಸಿಪಾಲ್ ಅಧ್ಯಕ್ಷರಾಗಿ 8 ಬಾರಿ ಆಯ್ಕೆಯಾಗಿದ್ದರು.
* 1974 -1977: ಭಾರತೀಯ ಜನ ಸಂಘದ ಜಿಲ್ಲಾಧ್ಯಕ್ಷರಾದರು.
* 1977-1980: ಜನತಾ ಪಾರ್ಟಿಯ ಜಿಲ್ಲಾಧ್ಯಕ್ಷರಾಗಿ 10 ವರ್ಷಗಳ ಕಾಲ ಸೇವೆ ಸಲ್ಲಿಕೆ.

* 1980 –1983: ಬಿಜೆಪಿ ಜಿಲ್ಲಾಧ್ಯಕ್ಷರಾದರು.
* 1984: ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ 20 ವರ್ಷ ಅವಧಿ ಸೇವೆ ಸಲ್ಲಿಕೆ.
* 1975-77: ತುರ್ತು ಪರಿಸ್ಥಿತಿ ಸಂದರ್ಭದಲ್ಲಿ MISA ಅಡಿಯಲ್ಲಿ 19 ತಿಂಗಳ ಕಾಲ ಬಂಧಿತರಾಗಿದ್ದರು.
* 1983: ಉಡುಪಿ ಕ್ಷೇತ್ರದಿಂದ ಕರ್ನಾಟಕ ವಿಧಾಸಭೆಗೆ ಆಯ್ಕೆ

* ಭೂ ಹಿಡುವಳಿ ಕಾಯ್ದೆ ಸುಧಾರಣೆ, ಮೀನುಗಾರರಿಗೆ ಸಬ್ಸಿಡಿ ದರದಲ್ಲಿ ಡೀಸೆಲ್,
* ಉಡುಪಿ ಪರ್ಯಾಯ ಉತ್ಸವಕ್ಕೆ 10 ಲಕ್ಷ ಅನುದಾನ
* ಉಡುಪಿಯಲ್ಲಿ 5 ಪ್ರೌಢಶಾಲೆ ಮತ್ತು 3 ಪ್ರಾಥಮಿಕ ಶಾಲೆ, 4 ಸೇತುವೆ ನಿರ್ಮಾಣಕ್ಕೆ ನಾಂದಿ ಹಾಡಿದರು.

* 1996, 2002: ವಿಧಾನಪರಿಷತ್ತಿಗೆ ಆಯ್ಕೆ
* ಉಡುಪಿ ಜಿಲ್ಲೆ ನಿರ್ಮಾಣದ ಸಾರಥಿಯಾಗಿದ್ದರು.
* 2006ರಲ್ಲಿ ವೈದ್ಯಕೀಯ ಶಿಕ್ಷಣ ಮತ್ತು ಪಶುಸಂಗೋಪನಾ ಸಚಿವರಾದರು.
* ಒಂದು ವರ್ಷದಲ್ಲಿ 6 ಹೊಸ ಮೆಡಿಕಲ್ ಕಾಲೇಜು ಸ್ಥಾಪನೆಗೆ ಅನುಮತಿ ನೀಡಿ ಸಾಧನೆ ಮೆರೆದರು.
* CET ಗೊಂದಲಗಳನ್ನು ಬಹುತೇಕ ನಿವಾರಿಸಿದರು.
* 2007ರಲ್ಲಿ ಸಚಿವರಾಗಿ ಪುನರ್ ನೇಮಕ.
* 2008ರ, 30 ಮೇರಂದು ಗೃಹ ಸಚಿವರಾಗಿ ಪದವಿ ಸ್ವೀಕಾರ.
* 2010ರಲ್ಲಿ ಮುಜರಾಯಿ ಇಲಾಖೆ, ಉನ್ನತ ಶಿಕ್ಷಣ, ಯೋಜನಾ ಆಯೋಗ ಖಾತೆ ಹೆಚ್ಚುವರಿಯಾಗಿ ಪಡೆದರು.
* ನಂತರ ಐಟಿ ಮತ್ತು ಬಿಟಿ ಸಚಿವರಾಗಿದ್ದರು.
* 2012, ಫೆ.14ರಂದು ಹೃದಯಾಘಾತದಿಂದ ನಿಧನ ಹೊಂದಿದರು.

English summary
Dr. Vedavyas Srinivas Acharya is a senior BJP leader of Karnataka state. He passed away on February 14, 2012. He served as Higher education Minister in the Government of Karnataka. He is a native of Udupi and a physician by profession.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X