•  

ಬ್ಲೂ ಫಿಲಂ: ಪೊಲೀಸ್ ತನಿಖೆಗೆ ಕೋರ್ಟ್ ಆದೇಶ

ಸೋಮವಾರ, ಫೆಬ್ರವರಿ 13, 2012, 11:39 [IST]
bjp-ministers-adult-movie-high-court-orders-police-enquiry
ಬೆಂಗಳೂರು,ಫೆ.13: ವಿಧಾನಸೌಧ ಬ್ಲೂಫಿಲಂ ಪ್ರಕರಣದಲ್ಲಿ ಪೊಲೀಸ್ ತನಿಖೆ ನಡೆಸುವಂತೆ 8ನೇ ACMM ಕೋರ್ಟ್ ಸೋಮವಾರ ಆದೇಶಿಸಿದೆ. ವಕೀಲ ಧರ್ಮಪಾಲ ಗೌಡ ಅವರು ಪ್ರಕರಣದ ಸಂಬಂಧ ಖಾಸಗಿ ದೂರು ಸಲ್ಲಿಸಿದ್ದರು.

ಇದೀಗ IPC 156/3 ಅನುಸಾರ ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುವಂತೆ ಆದೇಶಿಸಿರುವ ಕೋರ್ಟ್ ಫೆ. 27ರೊಳಗಾಗಿ ತನಿಖೆ ನಡೆಸಿ, ವರದಿ ಸಲ್ಲಿಸುವಂತೆ ವಿಧಾನಸೌಧ ಪೊಲೀಸ್ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ಗೆ ಆದೇಶಿಸಿದೆ.

ಅದಕ್ಕೂ ಮೊದಲು, ಸದನದಲ್ಲಿ ಬ್ಲೂ ಫಿಲಂ ಸವಿದ ಸವದಿ ಮತ್ತಿತರ ಸಚಿವರಿಗೆ ಪ್ರಕರಣದ ಕುರಿತು ಉತ್ತರಿಸಲು ಸ್ಪೀಕರ್ ಕಾಲಾವಕಾಶ ವಿಸ್ತರಿಸಿ, ಜೀವದಾನ ನೀಡಿದ್ದರು. ಅದರೆ ಈಗ ಪೊಲೀಸ್ ತನಿಖೆಗೆ ಆದೇಶಿಸಿರುವುದು ಕಳಂಕಿತ ಸಚಿವರಿಗೆ ಭಾರಿ ಹಿನ್ನಡೆಯಾಗಿದ್ದರೆ ಆಡಳಿತಾರೂಢ ಬಿಜೆಪಿಗೆ ತೀವ್ರ ಮುಜುಗುರ ತಂದಿದೆ.

ಕಳೆದ ವಾರ ಅಧಿವೇಶನದಲ್ಲಿ ನೀಡಿದ ಸೂಚನೆಯಂತೆ ವಿಧಾನಸಭೆಯ ಕಾರ್ಯದರ್ಶಿಗಳು ಲಕ್ಷ್ಮಣ ಸವದಿ, ಸಿ.ಸಿ.ಪಾಟೀಲ್‌ ಮತ್ತು ಕೃಷ್ಣ ಪಾಲೇಮಾರ್‌ ಅವರಿಗೆ ಕಾರಣ ಕೇಳಿ ನೋಟಿಸ್‌ ಜಾರಿಗೊಳಿಸಿದ್ದರು. ಸೋಮವಾರ ಬೆಳಗ್ಗೆ 10.30ರೊಳಗೆ ವಿವರಣೆ ನೀಡಲು ಗಡವನ್ನೂ ವಿಧಿಸಲಾಗಿತ್ತು.

ಆದರೆ, ಈ ನೊಟೀಸ್‌ಗೆ ಉತ್ತರಿಸಲು ತಮಗೆ ಕಾಲಾವಕಾಶ ನೀಡುವಂತೆ ಮೂವರು ಮಾಜಿ ಸಚಿವರು ಸ್ಪೀಕರ್‌ರನ್ನು ಕೇಳಿಕೊಂಡಿದ್ದರಲ್ಲದೆ, ಈ ಬಗ್ಗೆ ವಿಧಾನ ಸಭಾದ ಮುಖ್ಯ ಕಾರ್ಯದರ್ಶಿ ಓಂಪ್ರಕಾಶ್‌ಗೆ ಪತ್ರ ಬರೆದಿದ್ದರು. ಈ ಹಿನ್ನೆಲೆಯಲ್ಲಿ ಶೋಕಾಸ್ ನೊಟೀಸ್‌ಗೆ ಉತ್ತರಿಸಲು ಫೆ. 19ರವರೆಗೆ ಗಡುವು ನೀಡಲಾಗಿದೆ

User Comments
[ ಅಭಿಪ್ರಾಯ ಬರೆಯಿರಿ ]
ಈ ಲೇಖನಕ್ಕೆ ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ.
1st Test , Lord's Cricket Ground, St John's Wood
England won by 5 wickets
Follow Oneindia Kannada on Twitter
Oneindia Kannada Facebook fan page
Write Comments on this Article