•  

ಈಗ ಜೆಡಿಯು ಶಾಸಕನ ನಂಗಾನಾಚ್ ಮೊಬೈಲಿನಲ್ಲಿ

ಸೋಮವಾರ, ಫೆಬ್ರವರಿ 13, 2012, 15:07 [IST]
patna-jdu-mla-shyambahadur-nanganach-with-bar-girls
ಪಟ್ನಾ,ಫೆ.13: ಇತ್ತ ವಿಧಾನಸೌಧದಲ್ಲಿ ಬ್ಲೂ ಫಿಲಂ ಸುರುಳಿಯಲ್ಲಿ ಸಿಕ್ಕಿ ಪೊಲೀಸ್ ತನಿಖೆ ಎದುರಿಸಲು ಸಜ್ಜಾಗುತ್ತಿರುವಾಗ ಅತ್ತ ಬಿಹಾರದಲ್ಲಿ ಬಿಜೆಪಿಯ ಮಿತ್ರ ಪಕ್ಷವಾದ ಜೆಡಿಯುನ ಶಾಸಕ ಮಹಾಶಯನೊಬ್ಬ ನಂಗಾನಾಚ್ ಮಾಡುತ್ತಿರುವುದು ಮೊಬೈಲಿನಲ್ಲಿ ದಾಖಲಾಗಿ ಫಜೀತಿಗಿಟ್ಟುಕೊಂಡಿದ್ದಾರೆ. 2010ರಲ್ಲಿಯೂ ಇದೇ ಶಾಸಕ ಮಹಾಶಯ ಇದೇ ರೀತಿ ನಂಗಾನಾಚಿನಲ್ಲಿ ಪಾಲ್ಗೊಂಡಿದ್ದ.

ಏನಾಯಿತೆಂದರೆ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಪಕ್ಷಕ್ಕೆ ಸೇರಿರುವ ಶ್ಯಾಮ್‌ ಬಹಾದೂರ್‌ ಸಿಂಗ್‌ ಎಂಬ ರಸಿಕ ಶಾಸಕ ತನ್ನ ಕ್ಷೇತ್ರದಲ್ಲಿ ನಡೆದ ಮದುವೆ ಸಮಾರಂಭವೊಂದರಲ್ಲಿ ಬಾರ್‌ ಬಾಲೆಯ ಜತೆಗೆ ಕುಣಿದು ಕುಪ್ಪಳಿಸಿದ್ದಾನೆ ಎನ್ನಲಾಗಿದೆ. ಇದನ್ನು ಯಾರೋ ಮೊಬೈಲ್‌ ಫೋನ್‌ನಲ್ಲಿ ಚಿತ್ರೀಕರಿಸಿ, ಬಿಡುಗಡೆಯನ್ನೂ ಮಾಡಿದ್ದಾರೆ. ಇದನ್ನು ಕಂಡು ಹೌಹಾರಿರುವ ಪ್ರತಿಪಕ್ಷಗಳು, ಕೂಡಲೇ ನಿತೀಶ್‌ ಕುಮಾರ್‌ ಮತ್ತು ಅವರ ಪಕ್ಷದ ಮೇಲೆ ಟೀಕಾಸ್ತ್ರ ಸುರಿಮಳೆಗೈದಿದ್ದಾರೆ.

ಫೆಬ್ರವರಿ 8ರ ರಾತ್ರಿ ಅಜಯ್ ಸಿಂಗ್ ಎಂಬ ಇಟ್ಟಿಗೆ ವ್ಯಾಪಾರಿ ಜತೆ ಮದುವೆ ಮನೆಗೆ ಹೋಗಿದ್ದ ಶಾಸಕ ಸಿಂಗ್‌, ಅಲ್ಲಿ ಅತಿಥಿಗಳ ಮನರಂಜಿಸಲು ಕರೆಸಿದ್ದ ಮನರಂಜನಾ ತಂಡದಲ್ಲಿ ಯುವತಿಯ ಕುಣಿದಿದ್ದಾರೆ. ಈ ಮೊಬೈಲ್‌ ವಿಡಿಯೋ ಈಗ ಪಟ್ನಾ ಪಟ್ಟಣದಾದ್ಯಂತ ಹರಿದಾಡುತ್ತಿದೆ. ಜತೆಗೆ ಟಿವಿ ಚಾನೆಲುಗಳಲ್ಲೂ ಒಂದೇ ಸಮನೆ ಬಿತ್ತರವಾಗುತ್ತಿವೆ. ಶ್ಯಾಮ್, ಬಿಹಾರದ ಸಿವಾನ್ ಜಿಲ್ಲೆಯ ಬಧಾರಿಯಾ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.
User Comments
[ ಅಭಿಪ್ರಾಯ ಬರೆಯಿರಿ ]
ಈ ಲೇಖನಕ್ಕೆ ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ.
1st Test , Lord's Cricket Ground, St John's Wood
England won by 5 wickets
Follow Oneindia Kannada on Twitter
Oneindia Kannada Facebook fan page
Write Comments on this Article