ರಾಯಚೂರು, ಫೆ 13: ಪ್ರಮಾದವಷಾತ್ ರಾಯಚೂರಿನ ಯುವಕನೊಬ್ಬ ಮಾಡಿದ ದೂರವಾಣಿ ಕರೆಯೊಂದು ನೇರವಾಗಿ ಪಾಕ್ ವಿದೇಶಾಂಗ ಸಚಿವೆ ಹೀನಾ ರಬ್ಬಾನಿ ಕಿವಿಗೆ ತಲುಪಿ, ಫಜೀತಿಗಿಟ್ಟುಕೊಂಡಿದೆ. ಸಿಂಧನೂರು ತಾಲೂಕಿನ ಬುದ್ದಿನಿ ಗ್ರಾಮದಿಂದ ಅಮರೇಶ ಎಂಬ ಯುವಕ ರಬ್ಬಾನಿಗೆ ಕಾಲ್ ಮಾಡಿದ್ದೂ ಅಲ್ಲದೆ ಅಶ್ಲೀಲವಾಗಿ ಮಾತನಾಡಿದ್ದು ಪ್ರಕರಣವನ್ನು ಮತ್ತಷ್ಟು ಗಂಭೀರವಾಗಿಸಿದೆ.
2 ತಿಂಗಳ ಹಿಂದೆ ಏನಾಯಿತೆಂದರೆ ... ಅಮರೇಶನ ತನ್ನ ಮೊಬೈಲಿನಿಂದ ಯಾರಿಗೋ ಕರೆ ಮಾಡಿದ್ದಾನೆ. ಆದರೆ ತಾನು ಮಾಡಿದ ಸಂಖ್ಯೆಗೆ ಹೆಚ್ಚುವರಿಯಾಗಿ ಎರಡು ಸೊನ್ನೆಗಳನ್ನು ಸೇರಿಸಿ ಮಾಡಿದ್ದು ಯಡವಟ್ಟಾಗಿದೆ. ಕೋಚಿಂಗ್ ಸಂಸ್ಥೆಯೊಂದರಲ್ಲಿ ಅಸಿಸ್ಟೆಂಟ್ ಆಗಿರುವ ಅಮರೇಶ ಗಂಗಪ್ಪ ಬುದ್ದಿನಿ ಮಾಡಿದ ಪ್ರಮಾದ ನೇರವಾಗಿ ಪಾಕಿಸ್ತಾನದ ಸಚಿವೆಯ ಕೈಜಗ್ಗಿದೆ. ಆಕೆ ತಕ್ಷಣ ಗುಪ್ತಚರ ಇಲಾಖೆ ಸೇರಿದಂತೆ ಎಲ್ಲರನ್ನೂ ಜಾಗೃತಗೊಳಿಸಿ, ವಿಚಾರಣೆ ನಡೆಸುವಂತೆ ಆಜ್ಞಾಪಿಸಿದ್ದಾರೆ.
ಅದು ದೆಹಲಿ ಗುಪ್ತಚರವನ್ನೂ ಜಾಗೃತಗೊಳಿಸಿದೆ. ಅಲ್ಲಿಂದ ನೇರವಾಗಿ ಬೆಂಗಳೂರಿನ ಸಿಸಿಬಿಗೆ ಕರೆ ಬಂದಿದೆ. ಸರಿ ಸಿಸಿಬಿ ಇನ್ಸ್‌ಪೆಕ್ಟರ್ ಕೃಷ್ಣಕುಮಾರ್ ನೇತೃತ್ವದ ತಂಡ ಭಾನುವಾರ ಅಮರೇಶನ ಮನೆಯ ಕದ ತಟ್ಟಿದೆ. ಅಮರೇಶನ ಗೋಳಾಟ ಕಂಡು ಇವ ಅಂಥವನಲ್ಲ ಅಂತ ತೀರ್ಮಾನಿಸಿ, ಬೆದರಿದ್ದ ಅಮರೇಶನ ಕುಟುಂಬಕ್ಕೆ ಧೈರ್ಯ ತುಂಬಿ ಬರಿಗೈಯಲ್ಲಿ ವಾಪಸಾಗಿದ್ದಾರೆ. ಪ್ರಕರಣವೂ ಅಲ್ಲಿಗೆ ಮುಕ್ತಾಯವಾಗಿದೆ.