ಬೆಂಗಳೂರು, ಫೆ. 13: ಇಂಡೋ-ಫ್ರೆಂಚ್ ಸಿಇಒ ಒಕ್ಕೂಟಕ್ಕೆ ತಾವು ಸೂಚಿಸಿದ ಅರ್ಹ ವ್ಯಕ್ತಿಗಳನ್ನು ಸದಸ್ಯರನ್ನಾಗಿ ನೇಮಕ ಮಾಡಲಿಲ್ಲವೆಂದು ಸಿಟ್ಟಿಗೆದ್ದ ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣ ಮೂರ್ತಿ, ಒಕ್ಕೂಟದ ಅಧ್ಯಕ್ಷ ಸ್ಥಾನಕ್ಕೆ ಸೋಮವಾರ ರಾಜೀನಾಮೆ ವಗಾಯಿಸಿದ್ದಾರೆ. ಕೇಂದ್ರ ವಾಣಿಜ್ಯ ಮತ್ತು ಉದ್ಯಮ ಸಚಿವಾಲಯ 2008ರಲ್ಲಿ ಮೂರ್ತಿ ಅವರನ್ನು ಈ ಸ್ಥಾನದಲ್ಲಿ ಪ್ರತಿಷ್ಠಾಪಿಸಿತ್ತು.
ಈ ಬಗ್ಗೆ ತಮ್ಮ ಅಸಮಾಧಾನ ಸೂಚಿಸಿ ಕಳೆದ ಡಿಸೆಂಬರಿನಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಗೆ ಇನ್ಫಿ ಮೂರ್ತಿ ಪತ್ರ ಬರೆದಿದ್ದರು. ಅದರಲ್ಲಿ ಅವರು ತಮ್ಮ ರಾಜೀನಾಮೆ ನಿರ್ಧಾರವನ್ನು ಸ್ಪಷ್ಟಪಡಿಸಿದ್ದರು. ತಕ್ಷಣ, ಪ್ರಧಾನಿ ಕಚೇರಿಯು ನಾರಾಯಣ ಮೂರ್ತಿ ಸಲಹೆಯನ್ನು ಪರಿಗಣಿಸುವಂತೆ ವಾಣಿಜ್ಯ ಸಚಿವಾಲಯಕ್ಕೆ ಸೂಚಿಸಿತು. ಆದರೆ ಸಚಿವಾಲಯ ಪ್ರಧಾನಿ ಕಚೇರಿ ಸೂಚನೆಗೆ ಮಣೆ ಹಾಕಲಿಲ್ಲ.
ಜಮ್ಷೆಡ್ ಗೋದ್ರೇಜ್, ರಾಕೇಶ್ ಮಿತ್ತಲ್ ಮತ್ತು ಐಐಟಿ ಬಾಂಬೆ ನಿರ್ದೇಶಕ ದೇವಾಂಗ್ ಖಾಖರ್ ಅವರನ್ನು ಭಾರತದ ಕಡೆಯಿಂದ ಸದಸ್ಯರನ್ನಾಗಿ ಒಕ್ಕೂಟಕ್ಕೆ ನೇಮಿಸಿಕೊಳ್ಳಬೇಕು ಎಂದು ಇನ್ಫಿ ಮೂರ್ತಿ ಸೂಚಿಸಿದ್ದರು. ಆದರೆ ಇದನ್ನು ಪುರಸ್ಕರಿಸದೆ ಸಚಿವಾಲಯವು ಬೇರೆಯವರನ್ನು ಸದಸ್ಯರನ್ನಾಗಿ ನೇಮಿಸಿಕೊಂಡಿದೆ. ಈ ಮಧ್ಯೆ ವಾಣಿಜ್ಯ ಸಚಿವ ಆನಂದ ಶರ್ಮಾ ಅವರು ಈ ಸಂಬಂಧ ನಾರಾಯಣ ಮೂರ್ತಿ ಜತೆ ಮಾತುಕತೆ ನಡೆಸಿದರಾದರೂ ಮೂರ್ತಿ ರಾಜೀನಾಮೆ ಪ್ರಸ್ತಾವದಿಂದ ಹಿಂದೆ ಸರಿಯಲಿಲ್ಲ ಎನ್ನಲಾಗಿದೆ.