ನವದೆಹಲಿ, ಫೆ. 13 : ಗೃಹಸಾಲ ಪಡೆದವರಿಗೆ ಮತ್ತು ಪಡೆಯಲು ಚಿಂತಿಸುತ್ತಿರುವವರಿಗೆ ಇಲ್ಲೊಂದು ಸಂತಸದ ಸುದ್ದಿಯಿದೆ. ಮುಂಬರುವ 2012-13ನೇ ಸಾಲಿನ ಮುಂಗಡ ಪತ್ರದಲ್ಲಿ ಮನೆಸಾಲದ ಮೇಲಿನ ತೆರಿಗೆ ವಿನಾಯಿತಿ ಮಿತಿಯನ್ನು 1.5 ಲಕ್ಷ ರು.ನಿಂದ 3 ಲಕ್ಷಕ್ಕೆ ಏರಿಸಲು ವಿತ್ತ ಸಚಿವ ಪ್ರಣಬ್ ಮುಖರ್ಜಿ ಚಿಂತನೆ ನಡೆಸಿದ್ದಾರೆ.
ಇದಕ್ಕೆ ಅನುಮತಿ ದೊರಕಿದರೆ ಸದ್ಯಕ್ಕೆ ಇಳಿಮುಖದಲ್ಲಿರುವ ರಿಯಲ್ ಎಸ್ಟೇಟ್ ಕ್ಷೇತ್ರದ ಗ್ರಾಫ್ ಮತ್ತೆ ಮೇಲುಮುಖವಾಗಲಿದೆ. ಬೆಲೆ ಏರಿಕೆಯಿಂದಾಗಿ ಸಂಕಷ್ಟದಲ್ಲಿರುವ ರಿಯಲ್ ಎಸ್ಟೇಟ್ ಕ್ಷೇತ್ರವನ್ನು ಪುನರುಜ್ಜೀವನಗೊಳಿಸಲು ಕೂಡಲೆ ಹಣಕಾಸು ಸಚಿವರು ಕ್ರಮ ತೆಗೆದುಕೊಳ್ಳಲೇಬೇಕಾಗಿದೆ.
ಇದರಿಂದಾಗಿ, ಮನೆ ಸಾಲಕ್ಕೆ ಕರ ಕಟ್ಟುತ್ತಿರುವವರ ಆದಾಯದಲ್ಲಿ ವಾರ್ಷಿಕವಾಗಿ 15,000 ರು.ನಿಂದ 45,000 ರು.ವರೆಗೆ ಉಳಿತಾಯವಾಗಲಿದೆ. ಗೃಹಸಾಲ ಪಡೆದು ಇಎಮ್ಐ ಕಟ್ಟುತ್ತಾ ಬಸವಳಿದವರಿಗೆ ಈ ಕೊಡುಗೆ ಅಲ್ಪವಾದರೂ ಸಾಂತ್ವನ ನೀಡಲಿದೆ ಎನ್ನುತ್ತಾರೆ ವಿತ್ತ ಪಂಡಿತರು.