•  

ಸ್ಪೀಕರ್ ಬೋಪಯ್ಯ ನಿರ್ಧಾರಕ್ಕೆ ಬಿಜೆಪಿ ತತ್ತರ

ಗುರುವಾರ, ಫೆಬ್ರವರಿ 9, 2012, 14:49 [IST]
porngate-kg-bopaiah-unrelents-bjp-leaders-demand
ಬೆಂಗಳೂರು, ಫೆ.9: ಬಿಜೆಪಿ ಸಚಿವತ್ರಯರು ವಿಧಾನಸಭೆಯಲ್ಲೇ ಬ್ಲೂ ಫಿಲಂ ವೀಕ್ಷಿಸಿದ ಬಳಿಕ ದ.ಕ. ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ವಿಧಾನಸೌಧ ಚಿತ್ರಪಟವನ್ನು ಶುಚಿಗೊಳಿಸಿ, ವಿನೂತನ ರೀತಿಯ ಪ್ರತಿಭಟನೆ ನಡೆಸಿದರು.

ಬೆಂಗಳೂರು, ಫೆ. 9: ವಿಧಾನಸಭೆಯಲ್ಲೇ ಬ್ಲೂ ಫಿಲಂ ವೀಕ್ಷಿಸಿದವರು ಸದನಕ್ಕೆ ಬಂದರೆ ನಾನು ಒಂದು ಕ್ಷಣವೂ ಸ್ಪೀಕರ್ ಕುರ್ಚಿ ಮೇಲೆ ಕೂರುವುದಿಲ್ಲ. ಯಾರನ್ನು ಬೇಕಾದರೂ ಕೂರಿಸಿಕೊಳ್ಳಿ. ರಾಜೀನಾಮೆ ಕೊಟ್ಟು ಇಲ್ಲಿಂದಲೇ ಹೊರಡುವೆ'- ಹೀಗೆ ಎಚ್ಚರಿಕೆಯ ಮಾತುಗಳನ್ನಾಡಿದ್ದು ಸ್ಪೀಕರ್ ಕೆಜಿ ಬೋಪಯ್ಯ.

'ಅಶ್ಲೀಲ ಚಿತ್ರ ವೀಕ್ಷಿಸಿದ ಪ್ರಕರಣದಿಂದ ನನಗೆ ತುಂಬಾ ನೋವಾಗಿದೆ. ಹೀಗಾಗಿ ಈ ಕೃತ್ಯ ಎಸಗಿದವರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ' ಎಂದು ಒತ್ತಡ ಹೇರಲು ಬಂದ ಸರ್ಕಾರದ ಪ್ರಮುಖರಿಗೆ ಎಚ್ಚರಿಕೆಯ ಸಂದೇಶ ನೀಡಿದರು ಎನ್ನಲಾಗಿದೆ.

ಮುಖ್ಯಮಂತ್ರಿ ಡಿವಿ ಸದಾನಂದ ಗೌಡ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಬಿಜೆಪಿ ಅಧ್ಯಕ್ಷ ಈಶ್ವರಪ್ಪ, ಸಂಸದೀಯ ವ್ಯವಹಾರಗಳ ಸಚಿವ ಎಸ್ ಸುರೇಶ್‌ಕುಮಾರ್ ಅವರು ಬುಧವಾರ ಸ್ಪೀಕರ್ ಅವರನ್ನು ಭೇಟಿ ಮಾಡಿ, 'ಸಚಿವರಿಗೆ ಸದನ ಪ್ರವೇಶಕ್ಕೆ ನಿರ್ಬಂಧ ಹೇರುವುದು ಬೇಡ' ಎಂದು ಮನವಿ ಮಾಡಿದರು. ಇದಕ್ಕೆ ಸ್ಪೀಕರ್ ಮಣಿದಿಲ್ಲ. 'ಅವರು (ಆರೋಪಿ ಶಾಸಕರು) ಸದನಕ್ಕೆ ಬರಬೇಕೆನ್ನುವುದಾದರೆ ನಾನು ಸದನಕ್ಕೆ ಬರುವುದಿಲ್ಲ'

'ಆಯ್ಕೆ ನಿಮ್ಮದು. ಸ್ಪೀಕರ್ ಆದ ದಿನದಿಂದ ನನಗೆ ನೆಮ್ಮದಿ ಇಲ್ಲದಂತಾಗಿದೆ. ಈ ವಿಷಯದಲ್ಲಿ ನಿರ್ದಾಕ್ಷಿಣ್ಯ ಕ್ರಮ ಖಚಿತ' ಎಂದು ಹೇಳಿದಾಗ ಆಡಳಿತ ಪಕ್ಷದ ಮುಖಂಡರೇ ದಂಗಾದರು ಎನ್ನಲಾಗಿದೆ. 'ಯಾರ ಒತ್ತಡಕ್ಕೂ ಮಣಿಯುವುದಿಲ್ಲ. ವಿಚಾರಣೆ ಪೂರ್ಣವಾಗುವವರೆಗೂ ಮೂವರು ಶಾಸಕರನ್ನು ಸದನದಿಂದ ಹೊರಗಿಡುತ್ತೇನೆ. ಈ ವಿಷಯದಲ್ಲಿ ನನ್ನ ನಿರ್ಧಾರವೇ ಅಚಲ' ಎಂದು ಹೇಳಿ ಆ ನಿರ್ಧಾರವನ್ನು ಪ್ರಕಟಿಸಿದರು ಕೂಡ.
User Comments
Naveen 10 Feb 2012 12:38 pm
all the three members should have killed
nanaiah yaladala 10 Feb 2012 10:47 am
ಕೆ.ಜಿ.ಬೋಪಯ್ಯ ನವರು ಮಾಡಿದು ತುಂಬ ಸರಿಯಾಗಿದೆ. ಒಬ್ಬ ನಿಸ್ಥಾವಂತ ರಾಜಾಕಾರಣಿ ಇದಕಿಂತ ಇನ್ನು ಏನು ಮಾಡಲು ಸಾದ್ಯ? ಆಡಳಿತ ಪಕ್ಷ ದವರು ಇನ್ನಾದ್ರು ಸರಿದಾರಿಗೆ ಬರುವರೆ ಕಾದು ನೋಡುವ!
Chukki 09 Feb 2012 05:49 pm
ಸಭಾದ್ಯಕ್ಷ ಸ್ಥಾನಕ್ಕೆ ಸಂದ ಗೌರವ, ಬೋಪಯ್ಯನವರೇ ಕರ್ತವ್ಯ ಪ್ರಜ್ಞೆ ಮೆರೆದಿರಿ. ನಿಮಗೆ ಅಭಿನಂದನೆಗಳು.
sujith 09 Feb 2012 04:32 pm
ಸುಮ್ನೆ ಹಾಗೆ ಹೇಳಿದಾರೆ ಅಸ್ಟೇ ಇದೆಲ್ಲ ರಾಜಕೀಯ ನಾಟಕ
muthuraju 09 Feb 2012 03:44 pm
ಇದು ಒಳ್ಳೇಯ ತೀರ್ಮಾನವಾಗಿದೆ ಇಂಥಹ ಸಭಾಧ್ಯಕ್ಸರ ಅವಶ್ಯಕತೆ ಇದೆ
RAJU 09 Feb 2012 03:42 pm
ಬ್ಹೊಪಯ್ಯ ನವರು ತಡವಾದರೂ ಒಳ್ಳೆಯ ಕೆಲಸ ಮಾಡಿದ್ದಾರೆ . ತನಿಖೆ ಮಾಡುವುದರಲ್ಲಿ ಅರ್ಥವಿಲ್ಲ . ತಕ್ಷಣವೇ ಶಾಸನ ಸಭೆಯ ನಡವಳಿಕೆಗಳ ಬಗ್ಗೆ ನಿಯಮ ರೂಪಿಸಿರಿ.
[ ಅಭಿಪ್ರಾಯ ಬರೆಯಿರಿ ]
   
1st Test , Lord's Cricket Ground, St John's Wood
England won by 5 wickets
Follow Oneindia Kannada on Twitter
Oneindia Kannada Facebook fan page
Write Comments on this Article