•  

ಶಿರಡಿ ದೇಗುಲ 36 ಕೆಜಿ ಚಿನ್ನ, 401 ಕೋಟಿ ಆದಾಯ

ಗುರುವಾರ, ಫೆಬ್ರವರಿ 9, 2012, 18:07 [IST]
Shirdi Sai Baba Temple Earning
ಮುಂಬೈ, ಫೆ.9: ಚಿನ್ನದ ಬೆಲೆ ದಿನೇ ದಿನೇ ಗಗನಕ್ಕೇರುತ್ತಿದ್ದರೂ ಭಕ್ತರ ಭಕ್ತಿಗೆ ಬೆಲೆ ಕಟ್ಟಲು ಸಾಧ್ಯವೇ? ಶಿರಡಿ ದೇಗುಲದ ಆದಾಯ ವಾರ್ಷಿಕವಾಗಿ ಶೇ.20ರಷ್ಟು ಏರಿಕೆಯಾಗುತ್ತಿದೆ. ಸುಮಾರು 36 ಕೆಜಿ ಚಿನ್ನ ದೇಣಿಗೆ ಸಿಕ್ಕಿದೆ ಎಂದು ಶಿರಡಿ ಸಾಯಿ ದೇಗುಲ ಟ್ರಸ್ಟಿ ಕಿಶೋರ್ ಅವರು ಹೇಳಿದ್ದಾರೆ.

ಭಕ್ತಾದಿಗಳು ಹುಂಡಿಗೆ ಹಾಕಿರುವ ಮೊತ್ತದಲ್ಲಿ 36 ಕೆಜಿ ಚಿನ್ನ, 401 ಕೋಟಿ ರು ನಗದು ಲಭಿಸಿದೆ. 2010ರಲ್ಲಿ 31 ಕೆಜಿ ಚಿನ್ನವನ್ನು ಭಕ್ತಾದಿಗಳು ದೇವರಿಗೆ ಅರ್ಪಿಸಿದ್ದರು.

2010ರಲ್ಲಿ 320 ಕೆಜಿ ಬೆಳ್ಳಿ ಅರ್ಪಿಸಿದ್ದ ಭಕ್ತರು ಈ ವರ್ಷ 440 ಕೆಜಿ ಬೆಳ್ಳಿ ಹುಂಡಿಗೆ ಹಾಕಿದ್ದಾರೆ. ವಿದೇಶಿ ಹಣಗಳ ಮೊತ್ತದಲ್ಲೂ ಏರಿಕೆ ಕಂಡಿದ್ದು, 2010ರಲ್ಲಿ 5.43 ಕೋಟಿ ರು ಬಂದಿತ್ತು, ಈ ಬಾರಿ 6.28 ಕೋಟಿ ರು ಸಿಕ್ಕಿದೆ ಎಂದು ಟ್ರಸ್ಟಿ ಎಂ ಕಿಶೋರ್ ವಿವರಿಸಿದ್ದಾರೆ.

User Comments
[ ಅಭಿಪ್ರಾಯ ಬರೆಯಿರಿ ]
ಈ ಲೇಖನಕ್ಕೆ ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ.
1st Test , Lord's Cricket Ground, St John's Wood
England won by 5 wickets
Follow Oneindia Kannada on Twitter
Oneindia Kannada Facebook fan page
Write Comments on this Article