•  

ಕ್ಲಾಸ್ ರೂಮ್ ನಲ್ಲೇ ಶಿಕ್ಷಕಿಯ ಕೊಲೆಗೈದ ವಿದ್ಯಾರ್ಥಿ

ಗುರುವಾರ, ಫೆಬ್ರವರಿ 9, 2012, 17:26 [IST]
Class IX Student kills Teacher
ಚೆನ್ನೈ, ಫೆ.9: 9ನೇ ತರಗತಿ ವಿದ್ಯಾರ್ಥಿಯೊಬ್ಬ ತನ್ನ ತರಗತಿಯಲ್ಲೇ ಶಿಕ್ಷಕರಿಯನ್ನು ಚೂರಿಯಿಂದ ಇರಿದು ಕೊಂದ ಭೀಕರ ಘಟನೆ ಸೈಂಟ್ ಮೇರಿಸ್ ಆಂಗ್ಲೋ ಇಂಡಿಯನ್ ಶಾಲೆಯಲ್ಲಿ ಗುರುವಾರ(ಫೆ.9) ನಡೆದಿದೆ.

ಇಲ್ಲಿನ ಪ್ಯಾರಿಸ್ ಅರ್ಮೆನಿಯನ್ ಸ್ಟ್ರೀಟ್‌ನಲ್ಲಿರುವ ಶಾಲಾ ವಿದ್ಯಾರ್ಥಿ ಮೊಹಮ್ಮದ್ ಇರ್ಫಾನ್ (15)ಗೆ ಸ್ಟ್ರಿಕ್ಟ್ ಟೀಚರ್ ಉಮಾ ಮಹೇಶ್ವರಿ(42) ಕಂಡರೆ ಆಗುತ್ತಿರಲಿಲ್ಲ.ವಿಜ್ಞಾನ ವಿಷಯ ಬೋಧಿಸುವ ಉಮಾ ಅವರು ಮತ್ತೊಂದು ಕ್ಲಾಸ್ ರೂಮ್ ನಲ್ಲಿ ಕುಳಿತ್ತಿದ್ದ ವೇಳೆ ಇರ್ಫಾನ್ ಹಿಂದಿನಿಂದ ಹಲ್ಲೆ ನಡೆಸಿದ್ದಾನೆ.

ಕುತ್ತಿಗೆ ಹಾಗೂ ಮುಖಕ್ಕೆ ತೀವ್ರವಾಗಿ ಗಾಯಗಳಾಗಿದ್ದರಿಂದ ಶಿಕ್ಷಕಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಘಟನೆಯನ್ನು ನೋಡಿದ ಉಳಿದ ವಿದ್ಯಾರ್ಥಿಗಳು ಹೌಹಾರಿದ್ದಾರೆ. ವಿದ್ಯಾರ್ಥಿಗಳ ಬೊಬ್ಬೆಯಿಂದ ಬೆದರಿದ ಇರ್ಫಾನ್ ಅಲ್ಲಿಂದ ಓಡಿ ಹೋಗಲು ಯತ್ನಿಸಿದ್ದಾರೆ.

ಆದರೆ, ಇತರೆ ಶಿಕ್ಷಕರು, ಸ್ಥಳೀಯರು ಇರ್ಫಾನ್ ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಓದಿನಲ್ಲಿ ಹಿಂದಿದ್ದ ಇರ್ಫಾನ್ ಗೆ ನಾಲ್ಕು ಬುದ್ಧಿ ಮಾತು ಹೇಳಿ ಅವನ ಪೋಷಕರನ್ನು ಕರೆಸಿ ಬೋಧಿಸಿದ್ದ ಉಮಾ ಟೀಚರ್ ಅವರು ಇಂದು ವಿದ್ಯಾರ್ಥಿಯ ಕೊಲವೆರಿಗೆ ಬಲಿಯಾಗಿದ್ದಾರೆ.

ಹಿಂದಿ ಹಾಗೂ ವಿಜ್ಞಾನ ವಿಷಯ ಪಾಠ ಮಾಡುತ್ತಿದ್ದ ಶಿಕ್ಷಕಿ ಉಮಾ ಬಗ್ಗೆ ಮೆಚ್ಚುಗೆಯ ಮಾತನಾಡಿದ ಮುಖ್ಯ ಶಿಕ್ಷಕ ಪೆರಿನಯಾಗನ್ ಅವರು, 'ಒಬ್ಬ ಉತ್ತಮ ಶಿಕ್ಷಕಿಯನ್ನು ಕಳೆದುಕೊಂಡೆವು, ಇರ್ಫಾನ್ ಮಾಡಿರುವ ಕೃತ್ಯ ಆಘಾತಕಾರಿ' ಎಂದಿದ್ದಾರೆ.


User Comments
[ ಅಭಿಪ್ರಾಯ ಬರೆಯಿರಿ ]
ಈ ಲೇಖನಕ್ಕೆ ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ.
1st Test , Lord's Cricket Ground, St John's Wood
England won by 5 wickets
Follow Oneindia Kannada on Twitter
Oneindia Kannada Facebook fan page
Write Comments on this Article