•  

ಮೈಸೂರು ಅನಂತಸ್ವಾಮಿ, ರಾಜುಗೆ ಅವಿರತ ನಮನ

ಗುರುವಾರ, ಫೆಬ್ರವರಿ 9, 2012, 12:14 [IST]
Musician Raju Ananthaswamy
ಬೆಂಗಳೂರು, ಫೆ.9 : ಕರ್ನಾಟಕ ಕಂಡ ಪ್ರತಿಭಾವಂತ ಗಾಯಕ, ಸಂಗೀತ ಸಂಯೋಜಕ, ನಟ, ಬಹುಮುಖ ಪ್ರತಿಭೆಯಾಗಿದ್ದ 'ರಾಜು ಅನಂತಸ್ವಾಮಿ' ಹಾಗೂ ಸಂಗೀತ ಲೋಕದ 'ದೊರೈ' ಎನಿಸಿದ್ದ ಮೈಸೂರು ಅನಂತಸ್ವಾಮಿ ಅವರ ನೆನಪಿನ ಸಂಗೀತ ಸಂಜೆಯನ್ನು ಅವಿರತ ಟ್ರಸ್ಟ್ ಆಯೋಜಿಸಿದೆ.

ಅನಂತ ಚೇತನ ಎಂಬ ಹೆಸರಿನ ಕಾರ್ಯಕ್ರಮದಲ್ಲಿ ವಿಶೇಷವಾಗಿ 'ರತ್ನನ್ ಪದ' ಮತ್ತು ಭಾವ ತುಂಬಿದ ಹಾಡುಗಳ ಸುಗ್ಗಿಯನ್ನು ಕಾಣಬಹುದು

ರಾಜು ಅನಂತಸ್ವಾಮಿಯ ಶಿಷ್ಯ ರವಿ ಮೂರೂರು ಮತ್ತು ತಂಡದಿಂದ ರತ್ನನ್ ಪದ ಹಾಗೂ ಕೈಲಾಸಂ ಹಾಡುಗಳ ಸುಗ್ಗಿಯನ್ನು ಸವಿಯಲು ಕೆ.ಎಚ್ ಕಲಾಸೌಧಕ್ಕೆ ಬರಲೇ ಬೇಕು.

ಕಾರ್ಯಕ್ರಮದ ದಿನಾಂಕ: ಫೆ.11, ಶನಿವಾರ
ಸ್ಥಳ: ಕೆ.ಎಚ್.ಕಲಾಸೌಧ ರಾಮಾಂಜನೇಯ ಗುಡ್ಡದ ಆವರಣ, ಹನುಮಂತ ನಗರ ಬೆಂಗಳೂರು
ಸಮಯ: ಸಂಜೆ 6:30 ರಿಂದ 8:30
ಟಿಕೆಟ್ ದರ: ರು.100
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 98800 86300
kts_gowda@yahoo.com, www.aviratha.org

ನೋಟ್ ಬುಕ್ ವಿತರಣಾ ಯೋಜನೆ 2012: ಗ್ರಾಮಾಂತರ/ಹಿಂದುಳಿದ ಪ್ರದೇಶಗಳಲ್ಲಿ ಅಭ್ಯಾಸ ಮಾಡುತ್ತಿರುವ ಸರ್ಕಾರಿ ಶಾಲೆಯ ಸುಮಾರು 10,000 ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ಹಂಚುವ ಯೋಜನೆಯನ್ನು ಅವಿರತ ಪ್ರತಿಷ್ಠಾನ ಹಮ್ಮಿಕೊಂಡಿದೆ. ಈ ಕಾರ್ಯಕ್ರಮದಿಂದ ಸಂಗ್ರಹವಾಗುವ ಹಣವನ್ನು ಈ ಯೋಜನೆಗೆ ಬಳಸಲಾಗುವುದು ಎಂದು ಟ್ರಸ್ಟ್ ಅಧ್ಯಕ್ಷ ಕೆಟಿ ಸತೀಶ್ ಗೌಡ ಅವರು ಹೇಳಿದ್ದಾರೆ.

User Comments
[ ಅಭಿಪ್ರಾಯ ಬರೆಯಿರಿ ]
ಈ ಲೇಖನಕ್ಕೆ ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ.
1st Test , Lord's Cricket Ground, St John's Wood
England won by 5 wickets
Follow Oneindia Kannada on Twitter
Oneindia Kannada Facebook fan page
Write Comments on this Article