•  

ಮಂತ್ರಿಗಳು ನೋಡಿದ ವಿಡಿಯೋಗೆ ಭಾರೀ ಬೇಡಿಕೆ

ಗುರುವಾರ, ಫೆಬ್ರವರಿ 9, 2012, 19:19 [IST]
High demand for video watched by Lakshman Savadi in Bangalore
ಬೆಂಗಳೂರು, ಫೆ. 9 : ವಿಧಾನಸಭೆಯಲ್ಲಿಯೇ ಅಶ್ಲೀಲ ವಿಡಿಯೋ ಅಥಣಿ ಎಂಎಲ್ಎ ಲಕ್ಷ್ಮಣ ಸವದಿ ನೋಡಿದ್ದು, ಅದನ್ನು ಕದ್ದು ನರಗುಂದ ಶಾಸಕ ಸಿಸಿ ಪಾಟೀಲರು ನೋಡಿದ್ದು, ಆ ವಿಡಿಯೋವನ್ನು ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಕೃಷ್ಣ ಜೆ. ಪಾಲೇಮಾರ್ ಕಳಿಸಿದ್ದು, ಕೊನೆಗೆ ಮೂವರೂ ರಾಜೀನಾಮೆ ಸಲ್ಲಿಸಿದ್ದು ಹಳೆಯ ಕಥೆಯಾಯಿತು.

ರಾಜಕಾರಣಿಗಳ ಈ ದೊಂಬರಾಟದ ಬಗ್ಗೆ ಜನರು ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ. ಅವರ ಸಚಿವ ಸ್ಥಾನವನ್ನೇ ಕಿತ್ತುಕೊಳ್ಳಲಿ, ಶಾಸಕ ಸ್ಥಾನದಿಂದಲೇ ಕಿತ್ತುಬಿಸಾಡಲಿ ಅಥವಾ ಸರಕಾರವೇ ಬಿದ್ದುಹೋಗಲಿ. ಇದಾವುದರ ಬಗ್ಗೆಯೂ ಆಸಕ್ತಿಯಿಲ್ಲ. ಅದೆಲ್ಲವನ್ನು ಮೀರಿ ಈ ಶಾಸಕರು ನೋಡಿದ ವಿಡಿಯೋ ಯಾವುದು, ಎಲ್ಲಿ ದೊರೆಯುತ್ತದೆ, ಎಷ್ಟಕ್ಕೆ ದೊರೆಯುತ್ತದೆ ಎಂಬ ಬಗ್ಗೆ ಆಸಕ್ತಿ ಕೆರಳುತ್ತಿದೆ.

ಬೆಂಗಳೂರಿನಲ್ಲಿ ಸಿಡಿ ಅಂಗಡಿ ಇಟ್ಟ ವ್ಯಾಪಾರಿಗಳಿಗೆ ಇದು ಭಾರೀ ನೋವಾಗಿ ಪರಿಣಮಿಸಿದೆ. ಅನೇಕಾರು ಜನರು ಸವದಿ ನೋಡಿದ ವಿಡಿಯೋ ಸಿಡಿ ಸಿಗುತ್ತದಾ ಎಂದು ಕೇಳುತ್ತಿದ್ದಾರೆ. ಅದೆಲ್ಲೂ ಸಿಗದ ಕಾರಣ ವ್ಯಾಪಾರಿಗಳಿಗೆ ಪೀಕಲಾಟಕ್ಕೆ ಹಿಡಿದುಕೊಂಡಿದೆ. ಭಾರೀ ಬೇಡಿಕೆಯಿದ್ದರೂ ಪೂರೈಸಲು ಸಾಧ್ಯವಾಗದೆ ನಷ್ಟ ಅನುಭವಿಸುತ್ತಿರುವುದಕ್ಕಾಗಿ ಕೈಕೈ ಹಿಸುಕಿಕೊಳ್ಳುತ್ತಿದ್ದಾರೆ.

ಕಳೆದ ಕೆಲ ವರ್ಷಗಳವರೆಗೆ ಈ ಪರಿಯ ಬೇಡಿಕೆ ಎಂದೂ ಇರಲಿಲ್ಲ ಎಂದು ಹೆಸರು ಹೇಳಲಿಚ್ಛಿಸದ ಸಿಡಿ ವ್ಯಾಪಾರಿಯೊಬ್ಬರು ಹೇಳಿದ್ದಾರೆ. ಸ್ವಾಮೀಜಿಯೊಬ್ಬರ ರಾಸಲೀಲೆ ಘಟನೆ ಹೊರಬಿದ್ದಾಗ ಈ ಪರಿಯ ಬೇಡಿಕೆ ಹುಟ್ಟಿಕೊಂಡಿತ್ತು. ಇಂಟರ್ನೆಟ್‌ನಲ್ಲಿ ಕೂಡ ಈ ಎಂಎಂಎಸ್ ಲಭ್ಯವಿದೆ ಎಂಬ ಸುದ್ದಿ ಹರಡಿಕೊಳ್ಳುತ್ತಿದೆ. ಆದರೆ ಇಂಟರ್ನೆಟ್ಟಿನಲ್ಲಿ ಸಿಗದೆ ಡಿವಿಡಿ ರೂಪದಲ್ಲಿ ಸಿಕ್ಕರೆ ಅನುಕೂಲಕರ ಎಂದು ವ್ಯಾಪಾರಿಗಳು ಆಶಿಸುತ್ತಿದ್ದಾರೆ.

ಇದೆಲ್ಲದರ ಜೊತೆಗೆ ಆ ಸಿಡಿಯಲ್ಲಿ ಇದ್ದ ಮಹಿಳೆ ಯಾರು ಎಂಬ ಕುರಿತು ಕೂಡ ಊಹಾಪೋಹಗಳು ಹುಟ್ಟಿಕೊಳ್ಳುತ್ತಿವೆ. ಮಹಿಳೆ ಕೇರಳದವಳಿರಬಹುದೆಂದು ಕೂಡ ಮಾತು ಕೇಳಿಬರುತ್ತಿದೆ. ಪಡ್ಡೆಗಳು ಮಾತ್ರ ಚಾತಕ ಪಕ್ಷಿಗಳಂತೆ ಈ ಡಿವಿಡಿಗಾಗಿ ಕಾದು ಕುಳಿತಿರುವುದಂತು ಸತ್ಯ. ಏನೇ ಆಗಲಿ ಪೊಲೀಸರು ಮಾತ್ರ ಒಂದು ಕಣ್ಣಿಟ್ಟಿರಬೇಕು, ಯಾರ ಕೈಗೂ ಸಿಗದಂತೆ ಕ್ರಮ ಕೈಗೊಳ್ಳಬೇಕು.
User Comments
Ramesh 10 Feb 2012 11:40 am
ಈ ಸರ್ಕಾರದವರು ಧರಿಧ್ರಧವರು............. ಅಂತ ಎಲ್ಲರಿಗು ಗೊತ್ತಿದೆ. ಆದರು ನಮ್ಮ ಜನ ಅವರಿಗೆ ವೋಟು ಹಾಕಿ ಗೆಲ್ಲಿಸ್ತಿವಿ ......... ಆದರೆ ಅವ್ರು ವಿಧಾನ ಸೌಧನ ಅಶ್ಲೀಲತೆ ನೋಡುವ ಟೆಂಟ್ ಮಾಡಿಕೊಂಡಿದ್ದಾರೆ. ಅದನ್ನೇ ಇ ಮೀಡಿಯಾದವರು ಅದರಬಗೆ ಜಾಲಾಡಿ ನಮ್ ಜನಕ್ಕೆ ತಿಳಿಸಿದರೆ ಅದು ಪರವಾಗಿಲ್ಲ..... ಆದರೆ ಈ ಮೀಡಿಯಾದವರು,.,.,. ಅ ಧರಿಧ್ರವರಿಗೆ ಪುಗಸಟ್ಟೆ ಪ್ರಚಾರ ಮಾಡಿ ... ಅವರನ್ನ ಉತ್ತುಂಗಕ್ಕೆ ಏರಿಸ್ತಾ ಇದಾರೆ,.,. ಆದ್ರೆ ಇದು ತುಂಬಾ ಅತಿಯಾಯ್ತು.... ನಾವು ಮನೆಗೆ ಹೋಗಿ ಯಾವುದೇ ಚಾನೆಲ್ ಹಾಕಿದರು ಕೂಡ ಬರೋದು,,,,, ಈ ಕೆಟ್ಟ ಚನರ ವಿಷ್ಯನೇ ........ ದಯವಿಟ್ಟು ಈ ಮೂಲಕ ನಿಮ್ಮಲ್ಲಿ ಕೇಳೋದು ಇಷ್ಟೇ.
meese edda gunda 10 Feb 2012 11:37 am
ಅಣ್ಣ ಮೊದಲು ನಿಮ್ಮ ಕಯಲ್ಲದ್ರೆ ಪೋಲಿಸ್ ನವರಿಗೆ ಈ ಪೋರ್ನ್ ವಿದೆಒಸ್ ಎಲ್ಲಿ ಸಿಗ್ತದೆ,ವೆಬ್ಸೈಟ್ ಅಡ್ರೆಸ್ಸ್ ಎಲ್ಲ ದೆತೈಲ್ಸ್ ಕೊಟ್ಟು ಬಂದ್ ಮದ್ಸ್ಲಿಕ್ಕೆ ನೋಡಿ ಅದನ್ನು ಬಿಟ್ಟು ಸುಮ್ನೆ ಒಂದು ಮಮಸ್ ಬಗ್ಗೆ ಪ್ರಚಾರ ಮಾಡಬೇಡಿ
Salian 10 Feb 2012 09:52 am
The demand for the said alleged blue film has increased due to media's telecasting continuously 1-2 days about this incident. Media is showing to all the innoncent public about blue film. Majority of people are not knowing about blue film. Electronic and print media is totally responsbile for spoiling the society by showing such kind of incidents again and again. There should be restriction on media to certain extent in this regard.
[ ಅಭಿಪ್ರಾಯ ಬರೆಯಿರಿ ]
   
1st Test , Lord's Cricket Ground, St John's Wood
England won by 5 wickets
Follow Oneindia Kannada on Twitter
Oneindia Kannada Facebook fan page
Write Comments on this Article