•  

ವರದಕ್ಷಿಣೆ ಪಿಶಾಚಿಗಳ ದಾಹಕ್ಕೆ ಆಕೆ ಬಲಿಯಾದಳು

ಗುರುವಾರ, ಫೆಬ್ರವರಿ 9, 2012, 16:13 [IST]
Dowry Death Channarayapatna
ಚನ್ನರಾಯಪಟ್ಟಣ, ಫೆ.9: ಆಕೆ ಮದುವೆಯಾಗಿ ಕೇವಲ ಎರಡು ವರ್ಷ ಕಳೆದಿತ್ತು. ವರದಕ್ಷಿಣೆ ಪಿಶಾಚಿ ಆಕೆಯನ್ನು ಬಲಿ ತೆಗೆದುಕೊಂಡು ಬಿಟ್ಟಿತು. ಅತ್ತೆ ಮಾವ ಹಾಗೂ ಪತಿ ಕಾಟ ತಾಳಲಾರದೆ ಗೃಹಿಣಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಹಿರೀಸಾವೆ ಹೋಬಳಿಯಲ್ಲಿ ನಡೆದಿದೆ.

ಚನ್ನರಾಯಪಟ್ಟಣ ತಾಲ್ಲೂಕು, ಹಿರೀಸಾವೆ ಹೋಬಳಿ, ಬೆಳಗೀಹಳ್ಳಿ ಗ್ರಾಮದ ನಾಗರಾಜು ರವರ ಎಂಬುವರ ಮಗಳು ಅಭಿಲಾಷಾ ಮೃತಳಾದ ದುರ್ದೈವಿ.

ಅದೇ ಗ್ರಾಮದ ಪುಟ್ಟಸ್ವಾಮಿಗೌಡ ರವರ ಮಗ ತಮ್ಮಯ್ಯನಿಗೆ ಅಭಿಲಾಷಾಳನ್ನು ಕೊಟ್ಟು ಮದುವೆ ಮಾಡಲಾಗಿತ್ತು. ಮದುವೆ ಸಂದರ್ಭದಲ್ಲಿ 1,00,000/-ನಗದು ಮತ್ತು 150 ಗ್ರಾಂ ಚಿನ್ನಾಭರಣಗಳನ್ನು ವರದಕ್ಷಿಣೆಯಾಗಿ ನೀಡಲಾಗಿತ್ತು.

ಆದರೆ, ತಮ್ಮಯ್ಯನ ತಂದೆ ಪುಟ್ಟಸ್ವಾಮಿಗೌಡ, ತಾಯಿ ಜಯಮ್ಮ ಸೇರಿಸಿಕೊಂಡು ಮಾನಸಿಕ ಹಾಗೂ ದೈಹಿಕವಾಗಿ ಕಿರುಕುಳ ನೀಡುತ್ತಿದ್ದರು.

ನಂತರ ದಂಪತಿಗೆ ಹೆಣ್ಣು ಮಗು ಜನಿಸಿತು. ಆದರೆ, ಮೊಮ್ಮಗು ಹುಟ್ಟಿದ ಮೇಲೆ ಕಿರುಕುಲ ಇನ್ನಷ್ಟು ಹೆಚ್ಚಾಯಿತು. ಹೆಣ್ಣು ಮಗು ಹುಟ್ಟಿದ ಕಾರಣಕ್ಕೆ ಹೆಚ್ಚಿನ ವರದಕ್ಷಿಣೆ ತೆಗೆದುಕೊಂಡು ಬಾ ಎಂದು ಆಗ್ರಹಿಸಿದರು.

ಅದಂತೆ, ಅಭಿಲಾಷಾಳ ತಂದೆ ನಾಗರಾಜ ಅವರು ಮೊಮ್ಮಗು ಹೆಸರಿನಲ್ಲಿ ಬ್ಯಾಂಕ್‌ನಲ್ಲಿ ಹಣ ಇಡುವುದಾಗಿ ಹೇಳಿ ಬ್ಯಾಂಕ್ ಗೆ ತೆರಳಿದ್ದರು. ಆದರೆ, ಅಷ್ಟರಲ್ಲಿ ಸತತ ಕಿರುಕುಳದಿಂದ ಬೇಸತ್ತಿದ್ದ ಅಭಿಲಾಷಾ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮಗಳ ಪತಿ ಮತ್ತು ಅತ್ತೆ ಮಾವನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ನಾಗರಾಜ ದೂರು ನೀಡಿದ್ದು,ಹಿರೀಸಾವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
User Comments
[ ಅಭಿಪ್ರಾಯ ಬರೆಯಿರಿ ]
ಈ ಲೇಖನಕ್ಕೆ ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ.
1st Test , Lord's Cricket Ground, St John's Wood
England won by 5 wickets
Follow Oneindia Kannada on Twitter
Oneindia Kannada Facebook fan page
Write Comments on this Article