ದಾವಣಗೆರೆ, ಫೆ.7: ತಿಂತಿಣಿ ಮೌನೇಶ್ವರ ಜಾತ್ರೆಗೆ ತೆರಳುತ್ತಿದ್ದ ಕುಟುಂಬ ದುರ್ಮರಣಕ್ಕೀಡಾದ ಘಟನೆ ಹರಪನಹಳ್ಳಿ-ಹೊಸಪೇಟೆ ರಸ್ತೆಯಲ್ಲಿ ಮಂಗಳವಾರ ಬೆಳಗ್ಗೆ ಸಂಭವಿಸಿದೆ.
ಕೆಎಸ್ಆರ್ ಟಿಸಿ ಬಸ್ ಹಾಗೂ ಕ್ರೂಸರ್ ವಾಹನದ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ 7 ಮಂದಿ ಸಾವನ್ನಪ್ಪಿದ್ದು, 6 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಮೃತರನ್ನು ಹರಪನಹಳ್ಲಿಯ ಕೊಟ್ರೇಶ್, ಶ್ರೀನಿವಾಸ, ಪತ್ತಾರ್, ದ್ರೋಣಾಚಾರಿ, ಮೌನೇಶ್, ಮಲ್ಲೇಶ್, ನಾಗರಾಜ್ ಸಿರಿಗೆರೆ ಮತ್ತು ಗೋಪಾಲ್ ಎಂದು ಗುರುತಿಸಲಾಗಿದೆ. ಕೆ ಕೊಟ್ರೇಶ್, ಪೂರ್ವಾಚಾರಿ, ಭದ್ರಾಚಾರಿ. ಬಿ ಕೊಟ್ರೇಶ್, ಜನಾರ್ದನಾಚಾರಿ, ಅಂಜನಪ್ಪ ಎಂಬುವರು ತೀವ್ರವಾಗಿ ಗಾಯಗೊಂಡಿದ್ದು ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಯಾದಗಿರಿ ಜಿಲ್ಲೆಯ ತಿಂತಿಣಿ ಮೌನೇಶ್ವರ ಜಾತ್ರೆಗೆ ತೆರಳುತ್ತಿದ್ದ ಈ ಕುಟುಂಬ ಇಟಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದುರಂತ ಸಾವನ್ನಪ್ಪಿದೆ. ಹೊಸಪೇಟೆಯಿಂದ ಬರುತ್ತಿದ್ದ ಕೆಎಸ್ ಆರ್ ಟಿಸಿ ಬಸ್ ಚಾಲಕನ ನಿರ್ಲಕ್ಷ್ಯದಿಂದ ಅಪಘಾತ ಸಂಭವಿಸಿದೆ. ರಕ್ಷಣಾ ಕಾರ್ಯ ವಿಳಂಬವಾದ ಹಿನ್ನೆಲೆಯಲ್ಲಿ ಸಾವಿನ ಸಂಖ್ಯೆ ಹೆಚ್ಚಾಗಿದೆ ಎಂದು ಇಟಗಿ ಪೊಲೀಸರು ಹೇಳಿದ್ದಾರೆ.