•  

ಚಿದಂಬರಂಗೆ ಕ್ಲೀನ್ ಚಿಟ್, ಸಿಬಿಐ ತನಿಖೆ ಇಲ್ಲ

ಶನಿವಾರ, ಫೆಬ್ರವರಿ 4, 2012, 13:37 [IST]
ನವದೆಹಲಿ, ಫೆ.4: ಕೇಂದ್ರ ಗೃಹ ಸಚಿವ ಪಳನಿಯಪ್ಪನ್ ಚಿದಂಬರಂ ಅವರ ಪರ ಸಿಬಿಐ ಕೋರ್ಟಿನಿಂದ ನಿರೀಕ್ಷಿತ ತೀರ್ಪು ಹೊರಬಿದ್ದಿದೆ. ಚಿದಂಬರಂ ವಿರುದ್ಧ 2ಜಿ ಸ್ಪೆಕ್ಟ್ರಂ ಹಗರಣದಲ್ಲಿ ತನಿಖೆ ನಡೆಸುವುದು ಬೇಡ ಎಂದು ದೆಹಲಿಯ ವಿಶೇಷ ಸಿಬಿಐ ಕೋರ್ಟ್‌ ನ್ಯಾ ಒಪಿ ಸೈನಿ ಆದೇಶಿಸಿದ್ದಾರೆ. ಇದರಿಂದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರಕ್ಕೆ ಭಾರಿ ಜಯ ಸಿಕ್ಕಂತಾಗಿದೆ. ವನ್ಇಂಡಿಯಾ ಕನ್ನಡ ಬೆಳಗ್ಗೆಯೇ ಇದನ್ನು ಹೇಳಿತ್ತು.

ಇದರಿಂದ ತನ್ನ ಬಾಸ್ ಆಗಿರುವ ಗೃಹ ಸಚಿವ ಚಿದಂಬರಂ ವಿರುದ್ಧವೇ ವಿಚಾರಣೆ ನಡೆಸುವ ಮುಜುಗರದಿಂದ ಸಿಬಿಐ ಬಚಾವಾಗಿದೆ. ಕುತೂಹಲದ ಸಂಗತಿಯೆಂದರೆ ಚಿದಂಬರಂ ವಿರುದ್ಧ ತನಿಖೆ ನಡೆಸುವುದು ಬೇಡ ಎಂದು ಆದೇಶಿಸಿರುವ ಹರಿಯಾಣ ಮೂಲದ ನ್ಯಾಯಮೂರ್ತಿ ಸೈನಿ ಅವರೂ ಗೃಹ ಇಲಾಖೆಯ ಅಧೀನಕ್ಕೆ ಒಳಪಡುವ ದೆಹಲಿ ಪೊಲೀಸ್ ಇಲಾಖೆಯಲ್ಲಿ ಸಬ್ ಇನ್ಸ್ ಪೆಕ್ಟರ್ ಆಗಿ 1981ರಲ್ಲಿ ತಮ್ಮ ವೃತ್ತಿ ಜೀವನ ಆರಂಭಿಸಿದವರು.

ಜನತಾ ಪಕ್ಷದ ಅಧ್ಯಕ್ಷ ಸುಬ್ರಹ್ಮಣಿಯನ್‌ ಸ್ವಾಮಿ ಅವರು ನ್ಯಾ ಸೈನಿ ಎದುರು ಜನವರಿ 21ರಂದು ವಾದ ಮಂಡಿಸುತ್ತಾ, 2ಜಿ ಹಗರಣದಲ್ಲಿ ಚಿದಂಬರಂ ಕೈವಾಡ ಇರುವುದು ಮೇಲ್ನೋಟಕ್ಕೇ ದೃಢಪಟ್ಟಿದೆ ಎಂದಿದ್ದರು. ಜತೆಗೆ, ಸಾಕಷ್ಟು ದಾಖಲೆ ಪತ್ರಗಳನ್ನೂ ಸಾಕ್ಷಿಯಾಗಿ ಒದಗಿಸಿದ್ದರು. ಇದೀಗ ಹೈಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸುವುದಾಗಿ ಹೇಳಿದ್ದಾರೆ.

User Comments
freedomfighter 04 Feb 2012 11:51 pm
ಗೊತ್ಹಿದ್ದದ್ದೆ ... ತಮ್ಮ ವಿರುಧ್ದದ ತನಿಖೆಯ ತೀರ್ಪು ಏನಿರಬೇಕು ಅಂತ ನಿರ್ಧರಿಸುವವನು ಕೂಡ ಚಿದಂಬರಂ .... ಅದಕ್ಕೆ ಆತ ಹಣಕಾಸು ಬಿಟ್ಟು ಗೃಹಮಂತ್ರಿ ಆದದ್ದಲ್ವಾ ...
reddy 04 Feb 2012 05:07 pm
ರಾಜಕಾರಣಿಗಳು ದೆವರೂಊಊಊಊಊಊಊಊ ಮಿಕ್ಕಿದಾಆಆಆಅ ಎಲ್ಲರೂಊಊಊ ಸೇವಕರು
reddy 04 Feb 2012 04:41 pm
ನಾನು ಮೊದಲೇ ಹೇಳಿದ ಹಾಗೆ ಭಾರತದಲ್ಲಿ ಕಾನುನು ತಿದ್ದುಪಡಿ ಮದುವರೆಗೆ ಇ ರಾಜಕಾರಣಿಗಳಿಗೆ ಏನು ಆಗಲ್ಲ ಏಕೆಂದರೆ ಅವರು ಎಲಿದ್ದ್ದೆ ಕಾನೂನು ಹಾಗಿದೆ .ದೆಅಸದಲ್ಲಿ ಎಲ್ಲ ಅಂದ್ರೆ ಸಿಬಿಐ ಅಂಡ್ ನಯಾದಿಸ ಎಲ್ಲಾ ವವಸ್ತೆ ಇ ರಾಜಕಾರಣಿ ಕೈ ಕೆಳಗೆ ಮಾಡುವ ಪೂಜಾರಿ ವವಸ್ತೆ ಇದೆ.ಇ ರಾಜಕಾರಣಿಗಳು ದೇವರು ಕಪದಬೇಕದ ದೇವರು ಜನಸಾಮಾನ್ಯರನ್ನು ಕೊಲ್ಲುತಿದ್ದಾನೆ .ಇನ್ನು ಎಲ್ಲಿದೆ ನ್ಯಾಯ .ಇ ದೆಅಸಕ್ಕೆ ಒಬ್ಬ ಹಿತ್ಲೆರು ಬೇಕು .ಆದ್ರೆ ಸರಕಾರಿ ಕೆಲಸಗಾರರು ಹಾಗು ರಾಜಕಾರಣಿಗಳು ಗದಫಿ ಆಗಿದ್ದರೆ .ಇವರನ್ನು ಮುಗಿಸಲು ಇ ದೆಅಸದ ಜನರಿಂದ ಸಾ ದ್ದ್ಯವಿಲ್ಲ.ಇಲ್ಲಿ ಎಲ್ಲ ರಂಗದಲ್ಲಿ ಕಳ್ಳರು ಮೋಸಗಾರರು ಇದ್ದಾರೆ .ಅಂದ್ರೆ ??/?/
Pradeep Kumar 04 Feb 2012 03:02 pm
ಜಡ್ಗ್ ಗಳಿಗೆ ದುಡ್ಡು ಬಿಸಾಕಿದ್ರೆ ಯಾವ ಕೇಸ್ ಇರಲ್ಲ
reddy 04 Feb 2012 05:03 pm
ಮೊದಲು ಬರಿದ್ದಿದೆ ,ಇನ್ನು ಬಂದಿಲ್ಲ
[ ಅಭಿಪ್ರಾಯ ಬರೆಯಿರಿ ]
   
1st Test , Lord's Cricket Ground, St John's Wood
England won by 5 wickets
Follow Oneindia Kannada on Twitter
Oneindia Kannada Facebook fan page
Write Comments on this Article