ಬೆಂಗಳೂರು, ಫೆ.3: ವಿಧಾನಮಂಡಲ ಅಧಿವೇಶನದ 5ನೇ ದಿನವಾದ ಶುಕ್ರವಾರ ಗೂಳಿಹಟ್ಟಿ ಶೇಖರ್ ಪ್ರಹಸನದಲ್ಲಿ ಅರ್ಧದಿನ ಕಳೆದುಹೋಯಿತು. ಸ್ಪೀಕರ್ ಬೋಪಯ್ಯ ಅವರನ್ನು 'ಕಳಂಕಿತ ಸಭಾಪತಿ' ಗಳೇ ಎಂದು ಸಂಬೋಧಿಸಿದ ಶಾಸಕ ಶೇಖರ್ ಪ್ರತಿಭಟನೆ ನಡೆಸಿದರು.
ಕಪ್ಪು ಪಟ್ಟಿ ಧರಿಸಿದ್ದ ಗೂಳಿಹಟ್ಟಿ ಶೇಖರ್ ಅವರು ಸದನದಲ್ಲಿ ಸ್ಪೀಕರ್ ಅವರನ್ನು ಈ ರೀತಿ ಕರೆದಿದ್ದು ಆಡಳಿತ ಪಕ್ಷ, ವಿಪಕ್ಷಗಳ ವಾಕ್ಸಮರಕ್ಕೆ ನಾಂದಿ ಹಾಡಿತು.
ನಂತರ ಮಾತನಾಡಿದ ಗೂಳಿಹಟ್ಟಿ ಶೇಖರ್, ಬೋಪಯ್ಯ ಅವರ ಮೇಲೆ ಭಾರಿ ಆರೋಪ ಮಾಡಿದರು. ಗುರುವಾರ ಸಂಜೆ ತಮ್ಮ ಕಚೇರಿಗೆ ನನ್ನನ್ನು ಕರೆಸಿಕೊಂಡಿದ್ದರು. ಸ್ಪೀಕರ್ ಎಂದು ಗೌರವ ಕೊಟ್ಟು ಹೋಗಿದ್ದ ನನಗೆ ಅವಮಾನ ಮಾಡಲಾಗಿದೆ.
ಸಾಲದಕ್ಕೆ ದಲಿತ ಮುಖಂಡನೊಬ್ಬನಿಗೆ ಕೊಲೆ ಬೆದರಿಕೆ, ಧಮಕಿ ಹಾಕಿದ ಸಭಾಪತಿಗಳ ಬಗ್ಗೆ ನನಗೆ ಭಯವಿದೆ. ಕಳಂಕಿತರನ್ನು ಕಳಂಕಿತ ಎಂದು ಕರೆದರೆ ತಪ್ಪೇನಿದೆ ಎಂದು ಶಾಸಕ ಗೂಳಿಹಟ್ಟಿ ಶೇಖರ್ ಹೇಳಿದ್ದಾರೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.