•  

2ಜಿ ತೀರ್ಪಿತ್ತು ನಿವೃತ್ತರಾದ ಜಸ್ಟೀಸ್ ಗಂಗೂಲಿ

ಶುಕ್ರವಾರ, ಫೆಬ್ರವರಿ 3, 2012, 16:38 [IST]
Justice AK Ganguly
ನವದೆಹಲಿ, ಫೆ.3: ಬಹುಕೋಟಿ 2ಜಿ ಸ್ಪೆಕ್ಟ್ರಂ ಹಗರಣದ ಐತಿಹಾಸಿಕ ತೀರ್ಪು ನೀಡಿ ಸುಪ್ರೀಂ ಕೋರ್ಟ್‌ ನ್ಯಾ. ಎ.ಕೆ. ಗಂಗೂಲಿ ನಿವೃತ್ತಿ ಹೊಂದಿದ್ದಾರೆ.

ಗುರುವಾರ ಮುಖ್ಯ ನ್ಯಾ. ಎಸ್‌.ಎಚ್‌. ಕಪಾಡಿಯಾ ಜತೆ ಆಸೀನರಾಗಿದ್ದ ನ್ಯಾ. ಗಂಗೂಲಿ ಅವರು ತಮ್ಮ ಬೀಳ್ಕೊಡುಗೆ ದಿನವಾದ ಕಾರಣ ತೀರ್ಪು ಓದಲಿಲ್ಲ. ಪೀಠದ ಇನ್ನೊಬ್ಬ ಸದಸ್ಯರಾದ ನ್ಯಾ. ಜಿ.ಎಸ್‌. ಸಿಂಘ್ವಿ ತೀರ್ಪು ಓದಿದರು.

"If Sita had not crossed the Lakshman Rekha, Ravan would not have been killed. Lakshman Rekha is not that sacrosanct. It has a limited purpose."

ಎಂದು ಹಿಂದೊಮ್ಮೆ ಹೇಳಿದ್ದ ಗಂಗೂಲಿ ಅವರಿಗೆ ಸರಳ ಸಮಾರಂಭದ ಮೂಲಕ ಮುಖ್ಯ ನ್ಯಾ. ಎಸ್‌.ಎಚ್‌. ಕಪಾಡಿಯಾ ಮತ್ತು ನ್ಯಾಯಾಂಗ ಸಮುದಾಯದವರು ಬೀಳ್ಕೊಡಿಗೆ ನೀಡಿದರು.

'ನಾನು ಸದಾ ನೇರವಾದ ಬ್ಯಾಟ್‌ನಿಂದಲೇ ಕ್ರಿಕೆಟ್‌ ಆಡಿದೆ. ಅಡ್ಡಬ್ಯಾಟ್‌ ಎಂದೂ ಬೀಸಲಿಲ್ಲ ಎಂದು ಮಾರ್ಮಿಕವಾಗಿ ನಗೆಗಡಲಿನ ಮಧ್ಯೆ ಹೇಳಿದರಲ್ಲದೆ, ಪ್ರತಿ ಕ್ರಿಕೆಟಿಗನೂ ಯುವಕರಿಗೆ ದಾರಿ ಮಾಡಲು ವಯಸ್ಸಾದ ಮೇಲೆ ನಿವೃತ್ತಿ ಪಡೆದಂತೆ ನಾನೂ ನಿವೃತ್ತನಾಗುತ್ತಿರುವೆ' ಎಂದು ಇಂಗ್ಲೆಂಡ್ ಕ್ರಿಕೆಟಿಗ ಡೆವಿಡ್ ಕ್ರಾಂಪ್ಟನ್ ಆತ್ಮಚರಿತ್ರೆಯ ಸಾಲುಗಳನ್ನು ಉದಾಹರಿಸಿ ಹೇಳಿದರು.

ಶಾಂತ ಸ್ವಭಾವದ ದಿಟ್ಟ ನ್ಯಾಯಾಧೀಶ: ಫೆ.3, 1947ರಲ್ಲಿ ಜನಿಸಿರುವ ಗಂಗೂಲಿ ಅವರು ಕೋಲ್ಕತ್ತಾ ವಿವಿಯಿಂದ ಇಂಗ್ಲೀಷ್ ನಲ್ಲಿ ಎಂಎ, ಎಲ್ಎಲ್ ಬಿ ಪಡೆದಿದ್ದಾರೆ. ಒರಿಸ್ಸಾ ಹೈಕೋರ್ಟ್ ನ್ಯಾಯಾಧೀಶರಾಗಿದ್ದವರು 1994ರ ನಂತರ ಮುಖ್ಯ ನ್ಯಾಯಮೂರ್ತಿಯಾಗಿ ಬೆಳೆದರು. ಸುಪ್ರೀಂಕೋರ್ಟ್ ಆವರಣ ಸೇರುವ ಮೊದಲು ಮದ್ರಾಸ್ ಹೈಕೋರ್ಟ್ ನಲ್ಲೂ ಸೇವೆ ಸಲ್ಲಿಸಿದ್ದಾರೆ.

ಮಹತ್ವದ ಪ್ರಕರಣಗಳ ವಿಚಾರಣೆಗಳನ್ನು ತಾಳ್ಮೆಯಿಂದ ಆಲಿಸುತ್ತಾ ಸೂಕ್ತ ನಿರ್ದೇಶನಗಳನ್ನು, ಹಳೆ ನ್ಯಾಯಮೂರ್ತಿಗಳ ಆದೇಶಗಳ ಉದಾಹರಣೆಗಳನ್ನು ಹೇಳುತ್ತಿದ್ದರು. ಈಗ ಯುಪಿಎ ಸರ್ಕಾರಕ್ಕೆ ಮುಳುವಾಗಬಲ್ಲ 2ಜಿ ಹಗರಣದ ಬಗ್ಗೆ ಮಹತ್ವದ ತೀರ್ಪು ನೀಡಿದ್ದಾರೆ.
User Comments
canamedi 03 Feb 2012 07:01 pm
ಪ್ರಸಂಸನೀಯ ಮತ್ತು ಅಭಿನಂದನೀಯ ವ್ಯಕ್ತಿ ಶ್ರೀಮಾನ್ ಗಂಗೂಲಿ ಯವರಿಗೆ ದೇಸವೇ ಭಿನಂದಿಸಿ ಗೌರವಿಸಿ ಅಭ್ನಂದನೆಗಲ್ನ್ನು ಸಮರ್ಪಿಸಬೇಕು.ಇವರಿಗೆ ನನ್ನ ವ್ಯುಕ್ತ್ಪ್ಕ ಅಭಿನಂದನೆಗಳು ಮತ್ತು ಅವರ ನಿವ್ರುತ್ತಜೀವನ ಸುಖಮಯವಾಗಿರಲೆಂದು ಪ್ರಾರ್ಥಿಸುತೇನೆ ಅವ್ರಕರ್ತವ್ಯಪ್ರಜ್ಞೆ ಮತ್ತು ಸತ್ಯವನ್ನು ಮತ್ತು ಬಹು ಅಮೌಲ್ಯವಾದ ತೀರ್ಪನ್ನು ಕುತ್ತು ದೇಸಕ್ಕೆ ಉಪಕಾರ ಮತ್ತು ರಾಜಕೀಯ ಕುಯಿಕ್ತಿಗಳನ್ನು ಖಂಡಿಸಿ ತೀರ್ಪನ್ನು ನೀಡಿದ್ದಾರೆ.ಇಂತಹ ನ್ಯಾಯಮೂರ್ತಿಗಳ ಸಂಖ್ಯೆ ಬೆಳೆಯಲಿ ಎಂದು ಪರಮಾತ್ಮನನ್ನು ಪ್ರಾರ್ಥಿಸುತ್ತೇನೆ.ಕಾಂಗ್ರೆಸ್ ಪಕ್ಷದ ಮತ್ತು ಯು ಪಿ ಏ ಸರ್ಕಾರದ ಭ್ರಸ್ತಾಚಾರದ ಚಟುವಟಿಕೆಗಳನ್ನು ಬಯಲಿಗೆಲದು ದೊಡ್ಡ ಸೇವೆ ಇದು/
[ ಅಭಿಪ್ರಾಯ ಬರೆಯಿರಿ ]
   
1st Test , Lord's Cricket Ground, St John's Wood
England won by 5 wickets
Follow Oneindia Kannada on Twitter
Oneindia Kannada Facebook fan page
Write Comments on this Article