ಒಸ್ಮಾನಾಬಾದ್, ಫೆ. 2 : ಸಾವಿಗೀಡಾಗಿದ್ದ ವ್ಯಕ್ತಿಯನ್ನು ಸಾಗಿಸುತ್ತಿದ್ದ ಕರ್ನಾಟಕದ ಆಂಬುಲನ್ಸ್ ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಬಸ್ಸಿಗೆ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ ನಾಲ್ವರು ಮರಣಕ್ಕೀಡಾದ ಭೀಕರ ಘಟನೆ ಗುರುವಾರ ಬೆಳಗಿನ ಜಾವ ಒಸ್ಮಾನಾಬಾದ್ ಜಿಲ್ಲೆಯ ವಡಗಾಂವ್ ಬಳಿ ನಡೆದಿದೆ.
ಸೊಲ್ಲಾಪುರ-ಒಸ್ಮಾನಾಬಾದ್ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದ್ದು, ಆಂಬುಲನ್ಸ್ ಔರಂಗಾಬಾದಿಗೆ ತೆರಳುತ್ತಿತ್ತು. ಅಪಘಾತದಲ್ಲಿ ಆಂಬುಲನ್ಸ್ ನಲ್ಲಿದ್ದ ನಾಲ್ವರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಓರ್ವನ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಸ್ಸು ಒಸ್ಮಾನಾಬಾದಿನಿಂದ ಸತಾರಾಗೆ ತೆರಳುತ್ತಿತ್ತು. ಈ ಘಟನೆಯಲ್ಲಿ ಬಸ್ಸಲ್ಲಿದ್ದ ಹನ್ನೊಂದಕ್ಕೂ ಹೆಚ್ಚಿನ ಮಂದಿ ಗಾಯಗೊಂಡಿದ್ದಾರೆ. ಅವರನ್ನು ಒಸ್ಮಾನಾಬಾದ್ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.