ಹೈದರಾಬಾದ್, ಫೆ. 2: ಎಮ್ಮಾರ್ ಟೌನ್‌ಶಿಪ್ ಹಗರಣದಲ್ಲಿ ಅನೇಕ ಅಚ್ಚರಿಯ ಬೆಳವಣಿಗೆಗಳು ಕಂಡುಬರುತ್ತಿವೆ. ತಿರುಪತಿಯ ಆಡಳಿತಾಧಿಕಾರಿ, ಐಎಎಸ್ ಬಾಬು ಎಲ್ ವಿ ಸುಬ್ರಹ್ಮಣ್ಯ ಸಹ ಭಾಗಿಯಾಗಿದ್ದಾರೆ ಎಂದು ಸಿಬಿಐ ತಿಳಿಸಿದೆ. ಹಗರಣದಲ್ಲಿ ಸುಬ್ರಹ್ಮಣ್ಯ ಪಾತ್ರದ ಬಗ್ಗೆ ಸಾಕಷ್ಟು ಸಾಕ್ಷ್ಯಾಧಾರಗಳಿದ್ದು, ಅವರ ವಿಚಾರಣೆಗೆ ಅನುಮತಿ ಕೋರಿ ರಾಜ್ಯ ಚೀಪ್ ಸೆಕ್ರೆಟರಿಗೆ ಪತ್ರ ಬರೆಯಲಾಗಿದೆ ಎಂದು ಸಿಬಿಐ ಜಂಟಿ ನಿರ್ದೇಶಕ ವಿವಿ ಲಕ್ಷ್ಮಿನಾರಾಯಣ ಹೇಳಿದ್ದಾರೆ,
ಈ ಮಧ್ಯೆ, ಮೊನ್ನೆ ಬಂಧನಕ್ಕೊಳಗಾದ ಬಿಪಿ ಆಚಾರ್ಯರನ್ನು ಸೇವೆಯಿಂದ ಅಮಾನತುಗೊಳಸಿಲಾಗಿದೆ. ಜತೆಗೆ ಅವರನ್ನು ಫೆ. 15ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ತಿರುಪತಿ ಸುಬ್ರಹ್ಮಣ್ಯ ಅವರು ಆಚಾರ್ಯರಿಗೆ ಐಎಎಸ್ ಬ್ಯಾಚ್ ಮೇಟ್! ಇಂತಿಪ್ಪ ಸುಬ್ರಹ್ಮಣ್ಯ, ಚಂದ್ರಬಾಬು ನಾಯ್ಡು ಮತ್ತು ವೈಎಸ್ಆರ್ ರೆಡ್ಡಿ ಆಡಳಿತದಲ್ಲಿ ಆಯಕಟ್ಟಿನ ಜಾಗಗಳನ್ನು ಅಲಂಕರಿಸಿ, ಎರಡೂ ಮಾ.ಮು.ಗಳಿಗೆ ತುಂಬಾ ಹತ್ತಿರದವರಾಗಿದ್ದರು.
ಜತೆಗೆ, ಮತ್ತೊಬ್ಬ ಮಾಜಿ ಐಎಎಸ್ ಅಧಿಕಾರಿ ಕೆ ವಿಶ್ವೇಶ್ವರರಾವ್ (ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಕಾರ್ಯದರ್ಶಿಯಾಗಿ ಸ್ವಯಂನಿವೃತ್ತಿ) ಅವರ ಹೆಸರನ್ನೂ ಪ್ರಕರಣದ ಆರೋಪಪಟ್ಟಿಯಲ್ಲಿ ದಾಖಲಿಸಲಾಗಿದೆ. ವಿಶ್ವೇಶ್ವರರಾವ್ ಮಾಜಿ ಕೇಂದ್ರ ಸಚಿವ ಪಿವಿ ರಂಗಯ್ಯ ನಾಯ್ಡು ಅವರ ಅಳೀಮಯ್ಯ. ಕುತೂಹಲದ ಬೆಳವಣಿಗೆಯಲ್ಲಿ ಪ್ರಕರಣದ ಸಂಬಂಧ ಮಾಫೀ ಸಾಕ್ಷಿಯಾಗಲು ಒಪ್ಪಿರುವ ಸ್ಟೈಲಿಶ್ ಹೋಮ್ಸ್ ಕಂಪನಿಯು ಮುಖ್ಯಸ್ಥ ಟಿ. ರಂಗಾರಾವ್ ಗೆ ಸಿಬಿಐ ಕೋರ್ಟ್ ಬುಧವಾರ ಜಾಮೀನು ನೀಡಿದೆ.
ಕಳೆದ ಜೂನ್ ತಿಂಗಳಲ್ಲಿ ಟಿಟಿಡಿ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡ ತಿರುಪತಿ ಸುಬ್ರಹ್ಮಣ್ಯ ಮತ್ತು ಕೆವಿ ರಾವ್ ಅವರು ಎಮ್ಮಾರ್ ಟೌನ್‌ಶಿಪ್ ಹಗರಣದಲ್ಲಿ 2002ರಿಂದ 2010ರ ನಡುವೆ ತೆಗೆದುಕೊಂಡ ನಿರ್ಣಯಗಳಿಂದಾಗಿ ರಾಜ್ಯದ ಬೊಕ್ಕಸಕ್ಕೆ ಅಪಾರ ನಷ್ಟವುಟಾಗಿದೆ ಎಂದು ಸಿಬಿಐ ಆರೋಪಿಸಿದೆ. ಮೊನ್ನೆ ಬಂಧನಕ್ಕೊಳಗಾದ ಮತ್ತೊಬ್ಬ ಐಎಎಸ್, ಹಾಲಿ ಗೃಹ ಕಾರ್ಯದರ್ಶಿ ಆಚಾರ್ಯರನ್ನು ಪ್ರಕರಣದಲ್ಲಿ (A1) ಮೊದಲ ಆರೋಪಿಯನ್ನಾಗಿಸಿದೆ. ಒಟ್ಟು 12 ಮಂದಿಯನ್ನು ಆರೋಪಿಗಳೆಂದು ಸಿಬಿಐ ಗುರುತಿಸಿದೆ.