•  

2ಜಿ ಲೈಸೆನ್ಸ್ ಗೋತಾ: ಗ್ರಾಹಕರಿಗೆ ತೊಂದರೆ ಇಲ್ಲ

ಗುರುವಾರ, ಫೆಬ್ರವರಿ 2, 2012, 13:37 [IST]
2g-telecom-licenses-quashed-what-about-customers
ನವದೆಹಲಿ, ಫೆ.2: ಮಾಜಿ ದೂರಸಂಪರ್ಕ ಸಚಿವ ಎ. ರಾಜಾ ಆಡಳಿತಾವಧಿಯಲ್ಲಿ ವಿತರಿಸಿರುವ ಎಲ್ಲ 2ಜಿ ಲೈಸೆನ್ಸುಗಳನ್ನು ರದ್ದುಗೊಳಿಸಿ ಸುಪ್ರೀಂಕೋರ್ಟ್ ಇಂದು ಮಹತ್ವದ ಆದೇಶ ನೀಡಿದೆ. ಆದರೆ ಹೀಗೆ ಸುಪ್ರೀಂ ತಪರಾಕಿ ತಿಂದಿರುವ 122 ಕಂಪನಿಗಳ ಭವಿಷ್ಯವೇನು? ಅದಕ್ಕಿಂತ ಮುಖ್ಯವಾಗಿ ಆ ಕಂಪನಿಗಳ ಗ್ರಾಹಕರ ಪಾಡೇನು? ಎಂಬ ಪ್ರಶ್ನೆಗಳು ಕಾಡಲಾರಂಭಿಸಿವೆ.

ಈ 2ಜಿ ದೂರಸಂಪರ್ಕ ಕಂಪನಿಗಳ ಸೇವೆಗೆ ಸದ್ಯಕ್ಕೆ ಯಾವುದೇ ತೊಂದರೆಯಿಲ್ಲ. ಆದರೆ ಇನ್ನು ನಾಲ್ಕು ತಿಂಗಳೊಳಗಾಗಿ ಈ ಕಂಪನಿಗಳು ಸೇವೆಯನ್ನು ಸ್ಥಗಿತಗೊಳಿಸಬೇಕು. ಅಂದರೆ ಈ ಕಂಪನಿಗಳ ಸೇವೆ ಪಡೆಯುತ್ತಿರುವ ಗ್ರಾಹಕರು ಬೇರೆ ಕಂಪನಿಗಳ ಸೇವೆಗೆ ವರ್ಗಾವಣೆ ಪಡೆಯಬೇಕು. ಇಂತಹ ಗ್ರಾಹಕರಿಗೆ Mobile number portability (MNP) ಆಪದ್ಬಾಂಧವನಂತೆ ನೆರವಿಗೆ ಧಾವಿಸಲಿದೆ.

ಮುಖ್ಯವಾಗಿ Idea Cellular, Tata Teleservices, Uninor, Loop Telecom, Videocon,  S Tel ಕಂಪನಿಗಳ ಸೇವೆಗಳು ಬಂದ್ ಆಗಲಿವೆ. ಆದ್ದರಿಂದ ಈ ಕಂಪನಿಗಳ ಚಂದಾದಾರರು ತಕ್ಷಣ ಬೇರೆ ವಿಶ್ವಾಸಾರ್ಹ ಕಂಪನಿಗಳ ಕದ ತಟ್ಟಬಹುದು. ಇನ್ನು, ಈ ಮಾನಗೇಡಿ ಕಂಪನಿಗಳು ಮೇಲ್ಮನವಿ ಸಲ್ಲಿಸಿದರೆ ಅವುಗಳ ಸೇವೆ ಮತ್ತೆ ಚಾಲ್ತಿಗೆ ಬರುತ್ತದಾ ಅಂದರೆ ಪರಿಸ್ಥಿತಿ ಹಾಗಿಲ್ಲ. ಏಕೆಂದರೆ ಇಂತಹ ಖಡಕ್ ತೀರ್ಪು ನೀಡಿರುವುದು ಖುದ್ದು ಸುಪ್ರೀಂಕೋರ್ಟ್. ಸೋ ಸೇವೆ ರದ್ದುಗೊಳಿಸಿರುವುದನ್ನು ವಾಪಸ್ ಪಡೆಯುವ ಸಾಧ್ಯತೆ ತುಂಬಾ ಕ್ಷೀಣವಾಗಿದೆ.

ಗಮನಾರ್ಹವೆಂದರೆ ಇಂತಹ ಮಾನಗೇಡಿ ಕಂಪನಿಗಳಿಗೆ ಸುಪ್ರೀಂಕೋರ್ಟ್ ದಂಡ ವಿಧಿಸಿದೆ. ಅದು 5 ಕೋಟಿ ರು. ನಿಂದ ಆರಂಭವಾಗಿ 50 ಕೋಟಿ ರು. ವರೆಗೂ ಇದೆ. ಈ ಹಣವನ್ನು ಕೋರ್ಟ್ ವೆಚ್ಚಕ್ಕೆ ಮತ್ತು ರಕ್ಷಣಾ ಸೇವೆಗಳಿಗೆ ವಿನಿಯೋಗಿಸಬೇಕು ಎಂದೂ ಕೋರ್ಟ್ ಹೇಳಿದೆ.

User Comments
K P GOWDA 16 Feb 2012 06:52 pm
ಸುಪ್ರೀಂ ಕೋರ್ಟ್ ನ ತೀರ್ಪು ಸ್ವಾಗತರ್ಹವಾದರು ಗ್ರಾಹಕರು ತುಂಬ ಪರದಾಡುವ ಸ್ತಿತಿಗೆ ತಲುಪಿರುವುದು ಇಲ್ಲಿ ಶೋಚನೀಯ ಎಂದರೆ ತಪ್ಪಾಗಲಾರದು ಅಲ್ಲದೆ ಎತ್ತಿಗೆ ಹೊಟ್ಟೆನೋವು ಬಂದರೆ ಎಮ್ಮೆಗೆ ಚುಚ್ಚ್ಹುಮದ್ದು ಕೊಡಿಸುವುದು ಯಾವ ನ್ಯಾಯ ಹೇಳಿ ೧,೭೬,೦೦೦ ಕೋಟಿ ಹಣ ನುಂಗಿದ ತಿಮಿಂಗಿಲ (ಎ ರಾಜ ) ಕ್ಕೆ ಇನ್ನು ಶಿಕ್ಷೆ ವಿದಿಸಲಾಗಿಲ್ಲ ಅವರಿಗೆ ಪ್ರತ್ಯೇಕ ಜೈಲು ಇದನೆಲ್ಲ ನೆನೆಸಿಕೊಂಡಾಗ ನಮ್ಮ ದೇಶ ಏನಕ್ಕಾ ದರು ಸ್ವತಂತ್ರ ಹೊಂದಿತು ಎಂಬುದರ ಕೀಳರಿಮೆ ನಮಗೆ ಉಂಟಾಗುತ್ತದೆ ಅಂದು ಮಹಾತ್ಮರು ಸಮಾಜದ ಏಳಿಗೆಗಾಗಿ ತಮ್ಮನ್ನೇ ಬಲಿಕೊಟ್ಟರು ಇಂದು ಈ ಬ್ರಸ್ತ ರಾಜಕಾರಿಣಿಗಳು ಅವರ ಸ್ವರ್ತಕ್ಕೆ ನಮ್ಮನ್ನು ಬಳಿ ಕೊಡುತ್ತಿದ್ದರೆ ಕೆ
nataraj 02 Feb 2012 09:37 pm
Yeddi ಚಡ್ಡಿ ಬಗ್ಗೆ ದಿನಕ್ಕೆ 10 ಕಾಮೆಂಟ್ ಬರೆವ "ಕನ್ನಡ ಒನ್ ಇಂಡಿಯಾ" ಸುಪ್ರೀಂ ಕೋರ್ಟ್ ಆರ್ಡರ್ ಬಗ್ಗೆ 2 column ಬರೆದು ಮಕಾಡೆ ಮಲಕೊಂಡಿದೆ. ಎಷ್ಟು ಸಿಕ್ಕಿದೆ ರಾಯರೇ ನಿಮಗೆ ????. ಮತ್ತೆ ಬೇರೆಯವರ ಕಾಮೆಂಟ್ ಕೂಡ hide ಆಗಿದೆ.
sujith 02 Feb 2012 02:41 pm
ಬಾಸು "5 ಕೋಟಿ ರು. ನಿಂದ ಆರಂಭವಾಗಿ 50 ಲಕ್ಷ ರು. ವರೆಗೂ ಇದೆ"....... 50 ಲಕ್ಷ ಅಲ್ಲ.... 50 ಕೋಟಿ ಇರಬೇಕು ನೋಡಿ
[ ಅಭಿಪ್ರಾಯ ಬರೆಯಿರಿ ]
   
1st Test , Lord's Cricket Ground, St John's Wood
England won by 5 wickets
Follow Oneindia Kannada on Twitter
Oneindia Kannada Facebook fan page
Write Comments on this Article