ಬೆಂಗಳೂರು, ಫೆ.1: ನೂತನ ಲೋಕಾಯುಕ್ತ ನೇಮಕಾತಿ ಸಂಬಂಧವಾಗಿ ರಾಜ್ಯ ಸರ್ಕಾರ ಹಾಗೂ ರಾಜ್ಯಪಾಲರ ನಡುವೆ ನಡೆದಿರುವ ಜಟಾಪಟಿ ತಾರಕ್ಕೇರಿದೆ. ನಿವೃತ್ತ ನ್ಯಾಯಾಧೀಶರೊಬ್ಬರನ್ನು ಶಿಫಾರಸ್ಸು ಮಾಡಿದ್ದರೂ ಅನಗತ್ಯ ನೆಪವೊಡ್ಡಿ ಲೋಕಾಯುಕ್ತ ನೇಮಕಾತಿ ವಿಳಂಬ ಮಾಡುತ್ತಿರುವ ರಾಜ್ಯಪಾಲರ ವಿರುದ್ಧ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಲು ಸದಾನಂದ ಗೌಡರ ಸರ್ಕಾರ ಮುಂದಾಗಿದೆ.
ಈ ನಿಟ್ಟಿನಲ್ಲಿ ರಾಜ್ಯ ಅಡ್ವೋಕೇಟ್ ಜನರಲ್ ಮತ್ತು ಸುಪ್ರೀಂಕೋರ್ಟ್ ನ ನ್ಯಾಯಾಧೀಶರ ಸಲಹೆಯನ್ನು ರಾಜ್ಯಸರ್ಕಾರ ಪಡೆದಿದ್ದು, ಸಾರ್ವಜನಿಕ ಹಿತಾಸಕ್ತಿ ಅರ್ಜಿ(PIL) ಸಲ್ಲಿಸಲು ಮುಂದಾಗಿದೆ.
ಮುಖ್ಯಮಂತ್ರಿ ಸದಾನಂದ ಗೌಡ, ಪಕ್ಷದ ರಾಜ್ಯಾಧ್ಯಕ್ಷ ಕೆಎಸ್ ಈಶ್ವರಪ್ಪ ಅವರು ತೆಗೆದುಕೊಂಡಿರುವ ಈ ಮಹತ್ವದ ನಿರ್ಧಾರಕ್ಕೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕೂಡಾ ಸಮ್ಮತಿಸಿದ್ದಾರೆ ಎನ್ನಲಾಗಿದೆ.
ಲೋಕಾಯುಕ್ತ ನೇಮಕಾತಿ ವಿಳಂಬಕ್ಕೆ ಸರ್ಕಾರ ಕಾರಣವಲ್ಲ. ನಿವೃತ್ತ ನ್ಯಾ. ಬನ್ನೂರುಮಠ ಅವರ ಹೆಸರನ್ನು ಶಿಫಾರಸು ಮಾಡಲಾಗಿದೆ. 1984ರ ಕರ್ನಾಟಕ ಲೋಕಾಯುಕ್ತ ಕಾಯ್ದೆ ಪ್ರಕಾರ ಸರ್ಕಾರ ಅನುಸರಿಸಬೇಕಾದ ನಿಯಮಗಳನ್ನು ತಪ್ಪದೇ ಪಾಲಿಸಲಾಗಿದೆ.
ಮಾಧ್ಯಮಗಳ ಮುಂದೆ ನ್ಯಾ. ಬನ್ನೂರುಮಠ್ ನೇಮಕ ಸಾಧ್ಯವಿಲ್ಲ ಎಂದು ರಾಜ್ಯಪಾಲರು ಹೇಳುತ್ತಿರುವುದು ಯಾಕೋ ಸಂಶಯ ಉಂಟು ಮಾಡುತ್ತಿದೆ. ರಾಜ್ಯಪಾಲರ ಅಧಿಕಾರ ವ್ಯಾಪ್ತಿಯ ಬಗ್ಗೆ ತಿಳಿಸುವಂತೆ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಲಾಗುವುದು ಎಂದು ಸರ್ಕಾರಿ ವಕೀಲರು ಹೇಳಿದ್ದಾರೆ.