ಹೈದರಾಬಾದ್, ಜ.31: ಅಕ್ರಮ ಗಣಿಗಾರಿಕೆ ಆರೋಪದಲ್ಲಿ ಜೈಲುವಾಸಿಯಾಗಿರುವ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ಜಾಮೀನು ಅರ್ಜಿ ನಾಲ್ಕನೇ ಬಾರಿ ವಜಾಗೊಂಡಿದೆ.
ಓಎಂಸಿ ಸಂಸ್ಥೆ ಮಾಲೀಕ ಜನಾರ್ದನ ರೆಡ್ಡಿ ಹಾಗೂ ಸಹ ಆರೋಪಿಗಳು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನಾಂಪಲ್ಲಿಯ ಸಿಬಿಐ ವಿಶೇಷ ನ್ಯಾಯಾಲಯ ಮಂಗಳವಾರ ತಿರಸ್ಕರಿಸಿದೆ.
ಹೆಚ್ಚಿನ ವಿಚಾರಣೆ ಅಗತ್ಯತೆ ಇರುವುದರಿಂದ ಆರೋಪಿಗಳಿಗೆ ಜಾಮೀನು ನೀಡಲು ಕೋರ್ಟ್ ನಿರಾಕರಿಸುವ ಸಾಧ್ಯತೆ ಇದೆ. ಹಾಗಾಗಿ ಗಾಲಿ ರೆಡ್ಡಿ ಸೇರಿದಂತೆ ನಾಲ್ವರು ಆರೋಪಿಗಳಿಗೆ ಜಾಮೀನು ಮಂಜೂರು ಮಾಡಲಾಗಿಲ್ಲ ಎಂದು ಜಾಮೀನು ಅರ್ಜಿ ಪ್ರಕರಣದ ತೀರ್ಪನ್ನು ನ್ಯಾ.ನಾಗಮೂರ್ತಿ ಶರ್ಮ ಅವರು ಪ್ರಕಟಿಸಿದ್ದಾರೆ.
ಐಎಎಸ್ ಅಧಿಕಾರಿಯಾಗಿ, ಪ್ರಕರಣದ ಆರೋಪಿಯಾಗಿರುವ ಶ್ರೀಲಕ್ಷ್ಮಿ ಫೆ.21ಕ್ಕೆ ಜಾಮೀನು ಪಡೆಯುವ ನಿರೀಕ್ಷೆಯಲ್ಲಿದ್ದಾರೆ.