•  

ಯಡಿಯೂರಪ್ಪ ಕುಬುದ್ಧಿ ಸ್ಯಾಂಪಲ್ ಕೊಟ್ಟ ಎಚ್ಡಿಕೆ

ಭಾನುವಾರ, ಜನವರಿ 29, 2012, 17:13 [IST]
ಬೆಂಗಳೂರು, ಜ.29: 'ಬಡವರು ಹಾಗೂ ಶೋಷಿತ ವರ್ಗದ ಮೇಲೆ ಬಿಜೆಪಿ ಸರ್ಕಾರ ನಿರಂತರವಾಗಿ ದಾಳಿ ನಡೆಸಿಕೊಂಡು ಬಂದಿದೆ. ಗಾಂಧಿ ಬಜಾರಿನ ವರ್ತಕರಿಗೆ ಸೂಕ್ತ ರೀತಿಯಲ್ಲಿ ವ್ಯವಸ್ಥೆ ಕಲ್ಪಿಸಲು ಸರ್ಕಾರಕ್ಕೆ ಒಂದು ವಾರದ ಗಡುವು ನೀಡುತ್ತಿದ್ದೇನೆ. ಅಷ್ಟರಲ್ಲಿ ಪರಿಹಾರ ಸಿಗದಿದ್ದರೆ 'ಗಾಂಧಿಬಜಾರು ಉಳಿಸಿ ಆಂದೋಲನ'ಕ್ಕೆ ನಾನು ಧುಮುಕುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಹೇಳಿದ್ದಾರೆ.

ಬಾಗಲೂರಿನಲ್ಲಿ ಭಾನುವಾರ(ಜ.29) ನಡೆದ ಜೆಡಿಎಸ್ ಸಮಾವೇಶದಲ್ಲಿ ಕುಮಾರಸ್ವಾಮಿಗಳು ತಮ್ಮ ಭಾಷಣದುದ್ದಕ್ಕೂ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ವಿರುದ್ಧ ಭರ್ಜರಿ ಟೀಕಾಪ್ರಹಾರ ಮಾಡಿದರು.

'ಮುಂದಿನ ಬಜೆಟ್ ನಾನೇ ಮಂಡಿಸುತ್ತೇನೆ' ಎಂದು ಸಿಎಂ ಸದಾನಂದ ಗೌಡರು ಹೇಳಿಕೆ ನೀಡುವುದನ್ನು ಕೇಳಿದರೆ ನನಗೆ ಅವರ ಮೇಲೆ ಅನುಕಂಪ ಮೂಡುತ್ತದೆ. ಅವರಿಗೆ ಯಡಿಯೂರಪ್ಪ ಎಲ್ಲಿ ಸಿಎಂ ಸ್ಥಾನ ಕಿತ್ತುಕೊಳ್ಳುತ್ತಾರೆ ಎಂಬ ಭಯ ಕಾಡುತ್ತಿರಬೇಕು ಪಾಪ.

ಮೂರೂವರೆ ವರ್ಷ ಏನೂ ಕಿಸಿಯೋಕೆ ಆಗದ ಯಡಿಯೂರಪ್ಪ ಮತ್ತೆ ಸಿಎಂ ಆಗಿ ಬಡವರ ಉದ್ಧಾರ ಮಾಡುವ ಮಾತನಾಡುತ್ತಿರುವುದು ಅಸಹ್ಯ ಹುಟ್ಟಿಸುತ್ತಿದೆ ಎಂದು ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು.

ಯಡ್ಡಿ ಕುಬುದ್ಧಿಗೆ ಒಂದು ಸ್ಯಾಂಪಲ್: 'ನಾನು ಅಕಸ್ಮಾತ್ ಆಗಿ ಮುಖ್ಯಮಂತ್ರಿಯಾದೆ ನಿಜ. ಆದರೆ, ಗ್ರಾಮ ವಾಸ್ತವ್ಯದ ಕಲ್ಪನೆ ಮೂಲಕ ಒಮ್ಮೆ ಮುಧೋಳದ ಗ್ರಾಮವೊಂದರಲ್ಲಿ ವಾಸವಾಗಿದ್ದೆ. ಆ ಗ್ರಾಮದ ದೇವದಾಸಿ ತಾಯಿಯೊಬ್ಬಳ ಮಗಳು ನನ್ನ ಕಾಲಿಗೆ ಬಿದ್ದು, ಅಣ್ಣಾ ನಾನು ಎಂಎ ಮಾಡಿದ್ದೇನೆ ನನ್ನ ಪತಿ ಮೇಲ್ಜಾತಿಯವರು ಇಲ್ಲಿ ನಮಗ ಕೆಲ್ಸ ಸಿಗೋಲ್ಲ. ನಮ್ಮ ಕಾಪಾಡಿ ಎಂದಳು.'

ತಕ್ಷಣ ನಾನು 25 ಸಾವಿರ ರು ಕೈಗಿತ್ತು. ನನ್ನ ಕಚೇರಿಯಲ್ಲಿ ದಂಪತಿಗಳಿಗೆ ಕೆಲ್ಸ ಕೊಡಿಸಿದೆ. ಇಬ್ಬರಿಗೂ ಗ್ರಾಮೀಣ ಭಾಗದ ಪ್ರತಿಭಾವಂತ ಅರ್ಜಿಗಳನ್ನು ಆಯ್ಕೆ ಮಾಡಿ ನನಗೆ(ಸಿಎಂ ಆಗಿದ್ದ ಕಾಲದಲ್ಲಿ) ನೀಡುವಂತೆ ವ್ಯವಸ್ಥೆ ಕಲ್ಪಿಸಿದ್ದೆ.

ಆದರೆ, ಈ ಪುಣ್ಯಾತ್ಮ ಯಡಿಯೂರಪ್ಪ ಅಧಿಕಾರಕ್ಕೆ ಬಂದ ಮೊದಲ ದಿನವೇ ಆ ಹೆಣ್ಮಗಳನ್ನು ಕೆಲ್ಸದಿಂದ ಕಿತ್ತು ಹಾಕಿಬಿಟ್ಟ. ಈಗ ಆಕೆ ಹಾಗೂ ಆಕೆ ಪತಿ ಬೀದಿಗೆ ಬಿದ್ದಿದ್ದಾರೆ. ಇಂಥವರಿಂದ ಬಡವರ ಉದ್ಧಾರ ನಿರೀಕ್ಷೆ ಮಾಡಲು ಹೇಗೆ ಸಾಧ್ಯ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.
User Comments
Gajanan 29 Jan 2012 06:32 pm
ಕುಮಾರಸ್ವಾಮಿಯವರೇ ನಿಮ್ಮ ಹಾಗು ನಿಮ್ಮ ತಂದೆಯವರ ನೂರಾರು ಕುಬುದ್ಧಿಗಳನ್ನೂ ಈ ರಾಜ್ಯದ ಜನತೆ ನೋಡುತ್ತಲೇ ಬಂದಿದೆ. ಅದಕ್ಕಾಗಿ ಬೇರೆಯವರ ತಪ್ಪನ್ನು ಎತ್ತಿ ತೋರಿಸುವ ಬದಲು ನಿಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಂಡು ಮುಂದುವರೆಯುವದು ಉತ್ತಮ ಎಂದು ಈ ನಾಡಿನ ಸಾಮಾನ್ಯ ಮತದರನಗಿ ವಿನಂತಿ ಮಾಡಿಕೊಳ್ಳುತ್ತೇನೆ.
[ ಅಭಿಪ್ರಾಯ ಬರೆಯಿರಿ ]
1st Test , Lord's Cricket Ground, St John's Wood
England won by 5 wickets
Follow Oneindia Kannada on Twitter
Oneindia Kannada Facebook fan page
Write Comments on this Article