ಮದುರೈ, ಜ.29: ಬೆಂಗಳೂರು ಮೂಲದ ಸಾಫ್ಟ್ ವೇರ್ ಕಂಪನಿ ಇಂಜಿನಿಯರ್ ಚೆಂಗಪ್ಪ ದುರಂತ ಸಾವಿಗೀಡಾಗಿದ್ದಾರೆ, ಕೊಡೈಕೆನಲ್ ನ ರೆಸಾರ್ಟ್ ಬಳಿ ಹರಿಯುವ ನದಿಯಲ್ಲಿ ಈಜಾಡುತ್ತಿದ್ದ ಟೆಕ್ಕಿ ಚೆಂಗಪ್ಪ, ನೀರಿನಲ್ಲಿ ಕೊಚ್ಚಿಹೋಗಿದ್ದಾರೆ ಎಂದು ತಮಿಳುನಾಡು ಪೊಲೀಸರು ತಿಳಿಸಿದ್ದಾರೆ.
ಜ.26ರಂದು ರಜೆ ಇದ್ದ ಕಾರಣ ಗೆಳತಿ ವಿನಿತಾ ಜೊತೆ ಚೆಂಗಪ್ಪ ಕೊಡೈಕೆನಲ್ ಗೆ ಬಂದಿದ್ದರು. ಪೆಥುಪರೈ ಎಂಬಲ್ಲಿ ಕಾಟೇಜ್ ಬಾಡಿಗೆಗೆ ತೆಗೆದುಕೊಂಡು ಉಳಿದುಕೊಂಡಿದ್ದರು.
ಈಜಾಟವಾಡುತ್ತಿದ್ದ 30 ವರ್ಷದ ಚೆಂಗಪ್ಪ ನೀರಿನ ಸೆಳೆತಕ್ಕೆ ಸಿಕ್ಕು ಮುಳುಗೇಳುತ್ತಾ ಕೊಚ್ಚಿಕೊಂಡು ಹೋದರು ಎಂದು ಆತನ ಗೆಳತಿ ವಿನಿತಾ ತಿಳಿಸಿದರು. ನಾವು ಬರುವಷ್ಟರಲ್ಲಿ ಆತನ ದೇಹವನ್ನು ದಡಕ್ಕೆ ತರಲಾಗಿತ್ತು ಎಂದು ಸ್ಥಳೀಯ ಪೊಲೀಸರು ಹೇಳಿದ್ದಾರೆ.
ವೃತ್ತಿಯಿಂದ ದಂತವೈದ್ಯೆಯಾಗಿರುವ 28 ವರ್ಷದ ವಿನಿತಾ ರೋದನ ಮುಗಿಲು ಮುಟ್ಟಿದೆ. ಚೆಂಗಪ್ಪ ಹುಟ್ಟುಹಬ್ಬ ಆಚರಣೆಗೆ ಎಂದು ಬಂದು ಅಂಜುವೀಡು ನದಿಗೆ ಆಹುತಿಯಾಗಿರುವುದು ವಿನಿತಾಗೆ ಶಾಕ್ ಆಗಿದೆ.
ನದಿ ನೀರಿನಲ್ಲಿ ಸಿಲುಕಿದ್ದ ಚೆಂಗಪ್ಪನನ್ನು ಉಳಿಸಿಕೊಳ್ಳಲ ವಿನಿತಾ ಹೋಟೆಲ್ ಸಿಬ್ಬಂದಿ ನೆರವು ಪಡೆದು ಎಲ್ಲ ರೀತಿ ಪ್ರಯತ್ನಿಸಿದ್ದು ಫಲ ನೀಡಲಿಲ್ಲ. ಬೆಂಗಳೂರಿನ ಆರ್ ಟಿ ನಗರ ನಿವಾಸಿಯಾದ ಚೆಂಗಪ್ಪ ಅವರ ಮೃತದೇಹವನ್ನು ಅವರ ಸಂಬಂಧಿಕರಿಗೆ ನೀಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.