•  

ಕವನ ಬರೆದು ಗೆಳೆಯರ ಕಣ್ಣಾಲಿ ತುಂಬಿಸಿದ್ದ ದೀಪಾಲಿ

ಶನಿವಾರ, ಜನವರಿ 28, 2012, 17:51 [IST]
Deepali Joshi-Shah
ಧಾರವಾಡದ ಮೂಲದವರಾದರೂ ದೀಪಾಲಿ ವಿದ್ಯಾಭ್ಯಾಸ ಮಾಡಿದ್ದು ಮತ್ತು ನೆಲೆಸಿದ್ದು ಮಹಾರಾಷ್ಟ್ರದಲ್ಲಿ. ಅವರು ಕನ್ನಡ, ಹಿಂದಿ ಮತ್ತು ಮರಾಠಿ ಭಾಷೆಯಲ್ಲಿ ಅತ್ಯಂತ ಸುಲಲಿತವಾಗಿ ಮಾತನಾಡುತ್ತಿದ್ದರು. ಸಾರೆಗಾನಾ ಎಂಬ ಸಂಗೀತ ಕಾರ್ಯಕ್ರಮದಲ್ಲಿ ಸುಶ್ರಾವ್ಯವಾಗಿ ಹಾಡಿ ಹಿಂದಿ ಹಿನ್ನೆಲೆ ಗಾಯಕರಾದ ಸುಖವಿಂದರ್ ಸಿಂಗ್, ಶ್ರೇಯಾ ಘೋಷಾಲ್ ತಲೆದೂಗುವಂತೆ ಮಾಡಿದ್ದರು.

ಕುವೈತ್ ಸಂಗೀತ ಸಂಜೆಯ ಬಗ್ಗೆ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದರು. ಕುವೈತ್‌ಗೆ ಹೋಗುತ್ತಿರುವುದಕ್ಕೆ ತುಂಬಾ ಸಂತೋಷವಾಗಿದೆ, ಐ ಆಮ್ ಎಕ್ಸೈಟೆಡ್, ಜ. 29ರಂದು ಮರಳಿ ಬರುತ್ತಿದ್ದೇನೆ ಎಂದು ಶುಕ್ರವಾರ ಜ.27ರಂದು ತಮ್ಮ ಅಪಾರ ಗೆಳೆಯರ ಬಳಗಕ್ಕೆ ಸಂದೇಶ ಬರೆದಿದ್ದರು.

ಆಲ್ ದಿ ಬೆಸ್ಟ್, ಸುಖಕರವಾಗಿ ಮರಳಿ ಬನ್ನಿ, ವಿ ಮಿಸ್ ಯು ಅ ಲಾಟ್, ವಿದೇಶ ಪ್ರವಾಸ ಎಂಜಾಯ್ ಮಾಡಿ ಮುಂತಾಗಿ ಅವರ ಸ್ನೇಹಿತರು, ಹಿತೈಷಿಗಳು ಹಾರೈಸಿದ್ದರು. ಮರಳಿ ಬರುತ್ತೇನೆ ಎಂದು ವಾಗ್ದಾನ ಮಾಡಿದ್ದ ದೀಪಾಲಿ ಮರಳಿಬಾರದ ಜಾಗಕ್ಕೆ ತೆರಳಿದ್ದಾರೆ.

ಫೇಸ್ ಬುಕ್ ನಲ್ಲಿ ಅವರು ಉಲ್ಲೇಖಿಸಿದ್ದ ಇಂಗ್ಲಿಷ್ ಕವನ ತುಂಬಾ ಅರ್ಥಗರ್ಭಿತವಾಗಿದೆ. ಪ್ರತಿಯೊಂದು ವಸ್ತುವಿನ ಮೌಲ್ಯವನ್ನು ಅರಿಯಬೇಕಿದ್ದರೆ ಅದನ್ನು ಕಳೆದುಕೊಂಡವರನ್ನು ಕೇಳಬೇಕು. ಕವನದ ಕೊನೆಯಲ್ಲಿ ಗೆಳೆತನದ ಮೌಲ್ಯ ಅರಿಯಬೇಕಿದ್ದರೆ ಒಬ್ಬರನ್ನು ಕಳೆದುಕೊಳ್ಳಬೇಕು ಎಂದಿದ್ದರು ದೀಪಾಲಿ. ಆ ಕವನ ಓದಿದವರು ಕಣ್ಣಾಲಿಗಳು ತುಂಬಿಬಂದಿವೆ ಎಂದು ಉತ್ತರಿಸಿದ್ದರು.
User Comments
Raghu Raghava 28 Jan 2012 07:02 pm
ಆಕೆ ಬರೆದ ಕವನದ ಕೊನೆಯ ಸಾಲು ಹೀಗಿದೆ To realize the value of a friend: Lose ಒನ್
ರಾಜಶೇಖರ 28 Jan 2012 06:41 pm
ಸಾಮಾನ್ಯವಾಗಿ ಲೇಖನ ಓದಿದ ಕೂಡಲೆ ಫೇಸ್ ಬುಕ್ ಬಟನ್ ಲೈಕ್ ಮಾಡೋದು ಅಥವಾ ಶೇರ್ ಮಾಡೋದು ನನ್ನ ರೂಢಿ. ಆದರೆ, ಈ ಲೇಖನ ಲೈಕ್ ಮಾಡೋಕೆ ಯಾಕೋ ಇಷ್ಟಾನೇ ಆಗ್ತಾ ಇಲ್ಲ.
[ ಅಭಿಪ್ರಾಯ ಬರೆಯಿರಿ ]
1st Test , Lord's Cricket Ground, St John's Wood
England won by 5 wickets
Follow Oneindia Kannada on Twitter
Oneindia Kannada Facebook fan page
Write Comments on this Article