ಹೈದರಾಬಾದ್, ಜ.25: ಸುಮ್ನೆ ಈ ತರಹ ಗೋಳು ಹೊಯ್ದುಕೊಳ್ಳುವ ಬದಲು ನನ್ನನ್ನು ಮತ್ತು ನನ್ನ ಕುಟುಂಬದವರನ್ನು ನೇರವಾಗಿ ಗುಂಡಿಟ್ಟು ಸಾಯಿಸಿಬಿಡಿ' ಎಂದು ವೈಎಸ್ಆರ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಜಗನ್ ಮೋಹನ್ ರೆಡ್ಡಿ ಸಿಬಿಐಗೆ ಆಹ್ವಾನ ಕೊಟ್ಟಿದ್ದಾರೆ. ಎಮ್ಮಾರ್ ಹಗರಣದಲ್ಲಿ ಜಗನ್ ಅವರ ಭಾವಮೈದುನ ಸುನಿಲ್ ರೆಡ್ಡಿ ಅವರನ್ನು ಸಿಬಿಐ ಬಂಧಿಸುತ್ತಿದ್ದಂತೆ ಜಗನ್ ಬುಧವಾರ ಈ ಹೇಳಿಕೆ ನೀಡಿದ್ದಾರೆ.
ಗುರಜರಣ ಪಟ್ಟಣದಲ್ಲಿ ಓದಾರ್ಪು ಯಾತ್ರೆ ವೇಳೆ ಸಭೆಯನ್ನುದ್ದೇಶಿಸಿ ಮಾತನಾಡಿದ ಜಗನ್, ಕಾಂಗ್ರೆಸ್ ಮತ್ತು ತೆಲುಗು ದೇಶಂ ನನ್ನ ವಿರುದ್ಧ ಪಿತೂರಿ ನಡೆಸಿದೆ. ನನಗೆ ಚಿತ್ರ ಹಿಂಸೆ ನೀಡುವುದೇ ಇವರ ಗುರಿಯಾಗಿದೆ. ಸುಮ್ಮನೆ ಈ ರೀತಿ ಕೇಸುಗಳನ್ನು ಹಾಕುತ್ತಾ ನನ್ನನ್ನು ಕಾಡುವ ಬದಲು ನೇರವಾಗಿ ಗುಂಡಿಟ್ಟು ಸಾಯಿಸಿಬಿಡಿ' ಎಂದು ಗುಡುಗಿದರು.
ಇತ್ತೀಚೆಗೆ ರಾಜಕೀಯದಲ್ಲಿ ಮೌಲ್ಯಗಳು ನಶಿಸುತ್ತಿರುವ ಬಗ್ಗೆ ಅತೀವ ಖೇದ ವ್ಯಕ್ತಪಡಿಸಿದ ಜಗನ್, ನನ್ನ ತಂದೆ ದಿವಂಗತ ವೈಎಸ್ ರಾಜಶೇಖರ್ ಅವರ ಸತ್ಯ, ನಿಷ್ಠೆಯನ್ನು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಮತ್ತು ಪ್ರಧಾನಿ ಮನಮೋಹನ್ ಸಿಂಗ್ ಅವರು ಗುರುತಿಸಿರಲಿಲ್ಲವೇ ಎಂದು ಪ್ರಶ್ನಿಸಿದರು.
ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಅವರನ್ನು ಬಂಧಿಸುವಂತೆ ಮತ್ತೊಮ್ಮೆ ಆಗ್ರಹಿಸಿದ ಜಗನ್, ನಾಯ್ಡು 'ಹೆರಿಟೇಜ್' ವ್ಯಾಪಾರದ ಬಗ್ಗೆ ಸಿಬಿಐ ತನಿಖೆ ನಡೆಸಲಿ ಎಂದು ಹೇಳಿದರು.