•  

ಮುಸ್ಲಿಂ ಮತ ಪ್ರಚಾರಕರನ್ನು ಹೊರದಬ್ಬಿದ ಶ್ರೀಲಂಕಾ

ಮಂಗಳವಾರ, ಜನವರಿ 24, 2012, 13:23 [IST]
Muslims
ಕೊಲಂಬೊ, ಜ.24: ಭಾರತೀಯ ಮುಸ್ಲಿಮರು ಸೇರಿದಂತೆ ಸುಮಾರು 161 ಮಂದಿ ಮುಸ್ಲಿಂ ವಿದ್ವಾಂಸರ ಗುಂಪನ್ನು ದೇಶ ಬಿಟ್ಟು ತೆರಳುವಂತೆ ಶ್ರೀಲಂಕಾದ ವಲಸೆ ಇಲಾಖೆ ಅಧಿಕಾರಿಗಳು ಆದೇಶಿಸಿದ್ದಾರೆ.

ಪ್ರವಾಸಿ ವೀಸಾದಡಿಯಲ್ಲಿ ಶ್ರೀಲಂಕಾಕೆ ಬಂದಿರುವ ಇಸ್ಲಾಂ ವಿದ್ವಾಂಸರು ಮತ ಪ್ರಚಾರ, ಬೋಧನೆಗಳಲ್ಲಿ ತೊಡಗಿದ್ದಾರೆ. ಮತಪ್ರಚಾರದ ಹಕ್ಕನ್ನು ಪಡೆದಿಲ್ಲ ಎಂದು ಶ್ರೀಲಂಕಾದ ವಲಸೆ ಇಲಾಖೆಯ ಮುಖ್ಯಸ್ಥ ಚುಲಾನಂದ ಪರೇರಾ ಆರೋಪಿಸಿದ್ದಾರೆ.

ಪ್ರವಾಸಿ ವೀಸಾದಡಿಯಲ್ಲಿ ರಾಷ್ಟ್ರದಲ್ಲಿರುವ ಸ್ನೇಹಿತರು ಹಾಗೂ ಕುಟುಂಬ ವರ್ಗವನ್ನು ಭೇಟಿ ಮಾಡಬಹುದು. ಆದರೆ ಇಸ್ಲಾಂ ಪ್ರಬೋಧನೆಗೆ ಅವಕಾಶ ನೀಡಲಾಗುವುದಿಲ್ಲ ಎಂದು ಪರೇರಾ ಹೇಳಿಕೆಯನ್ನು ಉಲ್ಲೇಖಿಸಿ ಬಿಬಿಸಿ ವರದಿ ಮಾಡಿದೆ.

ಅಂತಾರಾಷ್ಟ್ರೀಯ ಇಸ್ಲಾಮಿಕ್ ಮೂವ್‌ಮೆಂಟ್ ಆಗಿರುವ ತಬ್ಲಿಗ್ ಜಮಾಅತ್‌ಗೆ ಈ ವಿದ್ವಾಂಸರು ಸೇರಿದ್ದಾರೆ. ಭಾರತ, ಬಾಂಗ್ಲಾದೇಶ, ಪಾಕಿಸ್ತಾನ, ಮಾಲ್ಡೀವ್ಸ್ ಹಾಗೂ ಅರಬ್ ರಾಷ್ಟ್ರಗಳಿಗೆ ಸೇರಿದವರಾಗಿದ್ದಾರೆ. ಜನವರಿ 31ರೊಳಗೆ ಶ್ರೀಲಂಕಾ ತೊರೆಯುವಂತೆ ಆದೇಶ ನೀಡಲಾಗಿದೆ.

ಶ್ರೀಲಂಕಾದಲ್ಲಿರುವ ಸಿಂಹಳೀಯರು ಹಾಗೂ ತಮಿಳರ ಬಳಿಕ ಮುಸ್ಲಿಂ ಸಮುದಾಯ ಮೂರನೆಯ ಅತಿದೊಡ್ಡ ಸಮುದಾಯವಾಗಿದೆ.
User Comments
ದೀಪಕ್ ಕೆ ಎಲ್ 25 Jan 2012 12:34 pm
ಇಂಥಾ ಧೈರ್ಯ ನಮ್ಮ ದೇಶದಲ್ಲಿ ಸಾಧ್ಯವೇ? ಮುಸ್ಲಿಮ್, ಕ್ರೈಸ್ತ ಮತಪ್ರಚಾರಕರನ್ನು ಸನ್ಮಾನ ಮಾಡಲು ಜಾತ್ಯಾತೀತ(???) ಪುಢಾರಿಗಳು, ಬುದ್ಧಿ(ಇಲ್ಲದ)ಜೀವಿಗಳು ಓಡೋಡಿ ಬರುತ್ತಾರೆ
altaf 24 Jan 2012 06:16 pm
ಒಳ್ಳೆ ಕೆಲಸ ಮಾಡಿದ್ದಾರೆ.ಇಲ್ಲದೆ ಇರುತ್ತಿದ್ದರೆ ಧರ್ಮ ಪ್ರಚಾರದಿಂದ ಕೆಲವರಾದರೂ ಕುಡಿಯುವುದನ್ನು ಬಿಟ್ಟು ಸರಕಾರದ ಬೊಕ್ಕಸಕ್ಕೆ ನಸ್ಟ ಮಾಡುತ್ತಿದ್ದರು.ಬಡ್ಡಿ ನಿಷೇದದಿಂದ ಬ್ಯಾಂಕ್ ಗಳಿಗೆ ಲಾಸ್ ಆಗುತ್ತಿತ್ತು.ಪಬ್ ಗಳೂ,ಬಾರ್ ಮಾಲಿಕರ ಅವಸ್ತೆ ಏನಾಗುತ್ತಿತ್ತು.ಕಾಮುಕರು ಕಣ್ಣು ತಂಪು ಹೇಗೆ ಮಾಡುತ್ತಿದ್ದರು.ಅರ್ಧ ಬೆತ್ತಲೆಯಾಗಿ ಲಲನೆಯರು ಹೇಗೆ ಮಾರ್ಕೆಟ್ ನಲ್ಲಿ ಹೋಗುತ್ತಿದ್ದರು.ಮಾನ ಮರ್ಯಾದೆಯನ್ನು ಸೇಲ್ ಮಾಡುವುದರಿಂದಲೇ ಆ ದೇಶದ ಆದಾಯ ಬರೋದು.ಶಹಬಾಜ್ ಶ್ರೀಲಂಕಾ
swamy 25 Jan 2012 07:50 am
ಅಲ್ತಾಫ್ ಸಾಹೇಬರು ನಿಜವನ್ನು ಹೇಳುತ್ತಿದ್ದಾರೆ, ಶ್ರೀಲಂಕ ಸರ್ಕಾರ ತುಂಬಾ ಒಳ್ಳೆಯ ಸಹಾಯ ಮುಸ್ಲಿಮರಿಗೆ ಮಾಡಿದೆ ಇಲ್ಲದಿದ್ದರೆ, ಪುರುಶರೆಲ್ಲ ನೆಲದವರೆಗೂ ಗಡ್ಡವನ್ನು ಬಿಡಬೇಕೆಂದು, ಸ್ತ್ರೀಯರು ಇಂತಹುದೇ ಪೋಷಾಕು ದರಿಸಬೇಕೆಂದು, ಬೇರೆ ಧರ್ಮವನ್ನು ಧ್ವೆಶಿಸಬೇಕೆಮ್ದು, ತಮ್ಮದೇ ಶೇರಿಯ ಕಾನೂನು ಪಾಲಿಸಬೇಕೆಂದು ದೇಶದ ಕಾನೂನಿಗೆ ಗೊಲಿಹೊಡಿ ಎಂದು, ಧರ್ಮದ ಮುಂದೆ ದೇಶ ನಗಣ್ಯವೆಂದು, ಮುಸ್ಲಿಂ ಬಹುಸಂಖ್ಯಾತ ದೇಶದಲ್ಲಿ ಅಲ್ಪ ಸಂಖ್ಯಾತರು ಬಾಲಮದಚಿಕೊಮ್ದು ಶೇರಿಯ ಪಾಲಿಸಬೇಕೆಂದು, ಅಲ್ಪಸಂಖ್ಯಾತ ಮುಸ್ಲಿಮರು ಯಾವುದೇ ದೇಶದಲ್ಲಿರಲಿ ಆ ದೇಶ ಮುಸ್ಲಿಮರಿಗೆ ಶೇರಿಯ ಪಾಲಿಸಲು ಬಿಡಬೇಕೆಂದು ನಾನಾ ರಂಪ ಮಾಡುತ್ತಾರೆ,
[ ಅಭಿಪ್ರಾಯ ಬರೆಯಿರಿ ]
1st Test , Lord's Cricket Ground, St John's Wood
England won by 5 wickets
Follow Oneindia Kannada on Twitter
Oneindia Kannada Facebook fan page
Write Comments on this Article