•  

ಬಳ್ಳಾರಿ, ಬೆಂಗಳೂರಿನಲ್ಲಿ BSR Congress ಕಚೇರಿ ರೆಡಿ

ಭಾನುವಾರ, ಜನವರಿ 22, 2012, 8:09 [IST]
sreeramulu-bsr-congress-gets-office-symbol
ಬೆಂಗಳೂರು, ಜ.22: 'ಸ್ವತಂತ್ರ ಹಕ್ಕಿ' ಶ್ರೀರಾಮುಲು ಅವರ ಹೊಸ ಪಕ್ಷವಾದ BSR Congress ಪಕ್ಷದ ಕಚೇರಿ ಬಳ್ಳಾರಿ ಮತ್ತು ಬೆಂಗಳೂರಿನಲ್ಲಿ ಏಕಕಾಲದಲ್ಲಿ ಸಿದ್ಧವಾಗುತ್ತಿವೆ. ಪಕ್ಷಕ್ಕೆ ಅಧಿಕೃತ ಮುದ್ರೆಯೊತ್ತಿರುವ ಚುನಾವಣೆ ಆಯೋಗ, ಚಿಹ್ನೆಯನ್ನೂ ದಯಪಾಲಿಸಿದೆ.

ಬಳ್ಳಾರಿಯಲ್ಲಿ ಈ ಹಿಂದೆ ಬಿಜೆಪಿಯ ಕಚೇರಿಯಾಗಿದ್ದ ಕಟ್ಟಡವೇ ಈಗ ರಾಮುಲು ಪಕ್ಷದ ಕಚೇರಿಯಾಗಲಿದೆ. ಒಳವಿನ್ಯಾಸ ಬದಲಿಸುವ ಕಾಮಗಾರಿಯನ್ನು ಈಗಾಗಲೇ ಕೈಗೆತ್ತಿಕೊಳ್ಳಲಾಗಿದೆ. ಇದು ಗಣಿರೆಡ್ಡಿಗಳ ಪಾಳೆಯಕ್ಕೆ ಸೇರಿದ ಸ್ವಂತ ಕಟ್ಟಡ.

ಇನ್ನು ಬೆಂಗಳೂರಿನಲ್ಲಿ ಈ ಮೊದಲು ಸದಾಶಿವನಗರದಲ್ಲಿ ಪಕ್ಷದ ಕಚೇರಿ ತೆರೆಯಲು ಉದ್ದೇಶಿಸಲಾಗಿತ್ತು. ಆದರೆ, ಬಡವರ ಹೆಸರಿನಲ್ಲಿ ಪಕ್ಷದ ಹೆಸರನ್ನು ಇಟ್ಟುಕೊಂಡು ಶ್ರೀಮಂತರ ಪ್ರದೇಶವಾದ ಸದಾಶಿವನಗರದಲ್ಲಿ ಕಚೇರಿ ಆರಂಭಿಸುವುದು ಸರಿಯಲ್ಲ ಎಂಬ ಕಾರಣಕ್ಕಾಗಿ ಆ ನಿರ್ಧಾರದಿಂದ ಹಿಂದೆ ಸರಿಯಲಾಗಿದೆ.

ಇದೀಗ ನಗರದ ಕುಮಾರಪಾರ್ಕ್‌ನ ರೇಲ್ವೆ ಸಮಾನಾಂತರ ರಸ್ತೆಯಲ್ಲಿ ಕಟ್ಟಡವೊಂದನ್ನು ಗುರುತಿಸಲಾಗಿದ್ದು, ಅಲ್ಲಿ ಪಕ್ಷದ ಕಚೇರಿ ತೆರೆಯಲು ಉದ್ದೇಶಿಸಲಾಗಿದೆ ಎಂದು ತಿಳಿದು ಬಂದಿದೆ.

User Comments
Shantulala chauhan 8105551029 22 Jan 2012 04:12 pm
ಶ್ರೀರಾಮುಲು ಮುಖ್ಯಮಂತ್ರಿ ಆಗೋದು ಖಚಿತ ,,,,,,
kannadiga 17 May 2012 04:10 pm
ಯಾವಾಗ? ಸಂಪೂರ್ಣ ಕರ್ನಾಟಕ ಗಣಿ ಮಣ್ಣಿನಲ್ಲಿ ಹೂತು ಹೋದಾಗ
[ ಅಭಿಪ್ರಾಯ ಬರೆಯಿರಿ ]
1st Test , Lord's Cricket Ground, St John's Wood
England won by 5 wickets
Follow Oneindia Kannada on Twitter
Oneindia Kannada Facebook fan page
Write Comments on this Article