•  

ಶ್ರೀರಾಮುಲುಗೆ ರುಕ್ಮಿಣಿ: ರೆಡ್ಡಿ ಕಾಣಿಕೆ

ಭಾನುವಾರ, ಜನವರಿ 22, 2012, 8:13 [IST]
bsr-congress-canvass-bus-ultra-modern-facilities
ಬೆಂಗಳೂರು, ಜ.22: 'ಸ್ವತಂತ್ರ ಹಕ್ಕಿ' ಶ್ರೀರಾಮುಲು ತಮ್ಮ ಮುಂದಿನ ರಾಜಕೀಯ ಹೋರಾಟಕ್ಕೆ ಭರ್ಜರಿ ಸಿದ್ಧತೆ ಆರಂಭಿಸಿದ್ದಾರೆ. ಪ್ರಚಾರಕ್ಕೆ ಸಜ್ಜಾಗುತ್ತಿರುವ ವಿಶೇಷ ಬಸ್ಸು ಸಂಪೂರ್ಣ ಹವಾನಿಯಂತ್ರಿತವಾಗಿದೆ. ಜತೆಗೆ ಬುಲೆಟ್ ಪ್ರೂಫ್ ಜಾಕೆಟ್ ಸಹ ತೊಡಿಸಲಾಗಿದೆ.

ಈ ಬಸ್ಸಿನಲ್ಲಿ ಪತ್ರಿಕಾ ಸಂದರ್ಶನ ಅಥವಾ ಪ್ರಮುಖ ನಾಯಕರೊಂದಿಗೆ ಮಾತುಕತೆಗಾಗಿ ಪುಟ್ಟ ಕಾನ್ಫರೆನ್ಸ್‌ ಕೊಠಡಿಯಿರುತ್ತದೆ. ಅಲ್ಲದೆ, ವಿಶ್ರಾಂತಿಗಾಗಿ ಮಂಚ, ಚಿಕ್ಕ ಅಡುಗೆ ಮನೆ, ಶೌಚಾಲಯ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ಜತೆಗೆ ಜನರೇಟರ್, ಇಂಟರ್ನೆಟ್‌, ಪ್ಲಾಸ್ಮಾ ಟಿವಿ, ಸೆಟಲೈಟ್‌ ಫೋನ್‌. ಜಿಪಿಎಸ್ ಸಿಸ್ಟಮ್ ಮತ್ತಿತರ ಸೌಲಭ್ಯಗಳನ್ನೂ ಅಳವಡಿಸಲಾಗಿದೆ.

ಸಿದ್ಧ ವೇದಿಕೆಗಾಗಿ 2 ಪ್ರತ್ಯೇಕ ವಾಹನ: ಐಷಾರಾಮಿ ಬಸ್ಸಿನ ಜತೆಗೆ ಗ್ರಾಮಗಳಲ್ಲಿ ಪ್ರಚಾರ ಕಾರ್ಯಕ್ರಮ ಆಯೋಜಿಸಲು ತೊಂದರೆ ಆಗಬಾರದು ಎಂಬ ಉದ್ದೇಶದಿಂದ ಕುರ್ಚಿ, ಡಯಾಸ್‌, ಮೈಕ್‌ ಮೊದಲಾದವುಗಳನ್ನು ಒಳಗೊಂಡ 'ರೆಡಿಮೇಡ್‌ ಸ್ಟೇಜ್‌' (ಸಿದ್ಧ ವೇದಿಕೆ) ಹೊಂದಿದ ಎರಡು ವಾಹನಗಳನ್ನು ಸಜ್ಜುಗೊಳಿಸಲಾಗುತ್ತಿದೆ. ಈ ಎರಡೂ ವಾಹನಗಳು 'ಐಷರ್‌' ಕಂಪನಿಗೆ ಸೇರಿವೆ. ಈ ವಾಹನಗಳನ್ನು ಕರ್ನಾಟಕದಲ್ಲಿಯೇ ವಿನ್ಯಾಸಗೊಳಿಸಲಾಗುತ್ತಿದೆ.

ಇಂತಿಪ್ಪ ವಾಹನಗಳು ಸದ್ಯದಲ್ಲೇ ಬಳ್ಳಾರಿಗೆ ಆಗಮಿಸಲಿವೆ. ಆ ವೇಳೆಗೆ ಶ್ರೀರಾಮುಲು ಅವರ ರಾಜ್ಯ ಪ್ರವಾಸದ ಕಾರ್ಯಕ್ರಮ ಪಟ್ಟಿಯನ್ನೂ ಅಂತಿಮಗೊಳಿಸಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

User Comments
[ ಅಭಿಪ್ರಾಯ ಬರೆಯಿರಿ ]
ಈ ಲೇಖನಕ್ಕೆ ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ.
1st Test , Lord's Cricket Ground, St John's Wood
England won by 5 wickets
Follow Oneindia Kannada on Twitter
Oneindia Kannada Facebook fan page
Write Comments on this Article