•  

ಶ್ರೀರಾಮುಲು BSR Congressಗೆ ಐಷಾರಾಮಿ ಬಸ್ ರೆಡಿ

ಭಾನುವಾರ, ಜನವರಿ 22, 2012, 8:17 [IST]
bellary-sreeramulu-bsr-congress-canvass-bus-ready
ಬೆಂಗಳೂರು, ಜ.22: ತನ್ನ ರಾಜಕೀಯ ಧಣಿ, ಸದ್ಯ 'ಜೈಲು ಹಕ್ಕಿ'ಯಾಗಿರುವ ಜನಾರ್ಧನ ರೆಡ್ಡಿ ಅವರನ್ನೇ ಮೀರಿಸುವಷ್ಟು ಗಣಿ ರೆಡ್ಡಿ ಪಾಳೆಯದ ದಂಡನಾಯಕ ಬಿ. ಶ್ರೀರಾಮುಲು ರಾಜ್ಯ ಪ್ರವಾಸ ಮತ್ತು ಪಕ್ಷದ ಪರ ಪ್ರಚಾರಕ್ಕೆ ಸದ್ದಿಲ್ಲದೆ ಭರದ ಸಿದ್ಧತೆ ನಡೆಸುತ್ತಿದ್ದು, ತಮ್ಮ ಪ್ರವಾಸಕ್ಕೆ ಅನುಕೂಲವಾಗುವಂತೆ ಐಷಾರಾಮಿ ವಾಹನಗಳನ್ನೂ ಸಜ್ಜುಗೊಳಿಸುತ್ತಿದ್ದಾರೆ.

ಬಿಜೆಪಿಯಿಂದ ಹೊರನಡೆದು 'ಸ್ವತಂತ್ರ ಹಕ್ಕಿ'ಯಾಗಿರುವ 'ಹ್ಯಾಟ್ರಿಕ್ ಹೀರೊ' ಶ್ರೀರಾಮುಲು ಕಳೆದ ಚುನಾವಣೆ ಸಂದರ್ಭದಲ್ಲೇ ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿ ಖರೀದಿಸಿದ್ದ ಐದು ಕೋಟಿ ರೂಪಾಯಿ ವೆಚ್ಚದ 'ರುಕ್ಮಿಣಿ' ಹೆಸರಿನ ಐಷಾರಾಮಿ ಬಸ್ಸಿನ ಮರು ವಿನ್ಯಾಸಗೊಳಿಸಿದ್ದಾರೆ. ಮತ್ತು ಶ್ರೀರಾಮುಲು ಅವರಿಗೆ ಸೇರಿದ ದುಬಾರಿ ರೇಂಜ್‌ ರೋವರ್ ಕಾರಿನ ವಿನ್ಯಾಸವನ್ನೂ ಬದಲಾಯಿಸಲಾಗಿದೆ.

ಈಗಾಗಲೇ ಈ ಬಸ್ಸು ಮತ್ತು ಕಾರನ್ನು ಮಹಾರಾಷ್ಟ್ರದ ಪುಣೆಯಲ್ಲಿರುವ ವಿಶ್ವ ವಿಖ್ಯಾತ ವಾಹನಗಳ ವಿನ್ಯಾಸ ಕಂಪನಿಯಾಗಿರುವ ಡೀಸಿ ಡಿಸೈನ್‌ ಪ್ರೈ ಕಂಪನಿಯ ಕಾರ್ಯಾಗಾರಕ್ಕೆ ಕಳುಹಿಸಲಾಗಿದೆ. ಪ್ರಸಿದ್ಧ ವಾಹನ ವಿನ್ಯಾಸಕಾರ ದಿಲೀಪ್‌ ಛಾಬ್ರಿಯಾ ಅವರಿಗೆ ಸೇರಿದ ಈ ಕಂಪನಿಯಲ್ಲೇ ಖ್ಯಾತ ಚಿತ್ರ ನಟರಾದ ಶಾರುಖ್‌ ಖಾನ್‌, ಸಂಜಯ್‌ ದತ್‌, ಚಿರಂಜೀವಿ ಸೇರಿದಂತೆ ಹಲವಾರು ಪ್ರಮುಖ ರಾಜಕಾರಣಿಗಳು ಹಾಗೂ ಗಣ್ಯರು ಬಳಸುವ ವಾಹನಗಳು ವಿನ್ಯಾಸಗೊಂಡಿವೆ.
User Comments
tyagu bellari 23 Jan 2012 02:21 pm
ಬಿ ಎಸ್ ಆರ್ ಅಥವಾ ವ್ಯೆ ಎಸ್ ಆರ್ ಕಾಂಗ್ರೆಸ್ ಸದ್ಯ ಈ ರೆಡ್ಡಿ ಗಳ ಮದ್ವೆಯಲ್ಲಿ ಉಂಡವನೇ ಜಾಣ.
mahantesh 22 Jan 2012 02:00 pm
ಅಲ್ಲರೀ ಇವರೇನು ಇಷ್ಟು ದುಬಾರಿ ಬಸ್ಸುನಲ್ಲಿ ಒದಾದಾತಾರೆ ನಿಜ ಆದರೆ ಸಾಮಾನ್ಯರಿಗೆ ತಮ್ಮ ಕ್ಸೆತ್ರದ್ಲ್ಲಿ ಸರಿಯಾಗಿ ಬಸ್ಸು ಇಲ್ಲಂತೆ
[ ಅಭಿಪ್ರಾಯ ಬರೆಯಿರಿ ]
1st Test , Lord's Cricket Ground, St John's Wood
England won by 5 wickets
Follow Oneindia Kannada on Twitter
Oneindia Kannada Facebook fan page
Write Comments on this Article