•  

ವೋಡಾಫೋನ್ ಸಂಸ್ಥೆಗೆ 11,000 ಕೋಟಿ ತೆರಿಗೆ ಮಾಫಿ

ಶನಿವಾರ, ಜನವರಿ 21, 2012, 12:56 [IST]
Vodafone
ನವದೆಹಲಿ,ಜ.21: ವೊಡಾಫೋನ್ ಇಂಟರ್‌ನ್ಯಾಷನಲ್ ಹೋಲ್ಡಿಂಗ್ಸ್, 2007ರಲ್ಲಿ ಹಚ್ ಎಸ್ಸಾರ್ ಸಂಸ್ಥೆ ಸ್ವಾಧೀನಪಡಿಸಿಕೊಂಡ ವಹಿವಾಟಿಗೆ ಸಂಬಂಧಿಸಿದಂತೆ ರೂ. 11,000 ಕೋಟಿಗಳಷ್ಟು ಆದಾಯ ತೆರಿಗೆ ಮತ್ತು ದಂಡ ಪಾವತಿಸಬೇಕಾದ ಅಗತ್ಯ ಇಲ್ಲ ಎಂದು ಸುಪ್ರೀಂಕೋರ್ಟ್, ದೂರಗಾಮಿ ಪರಿಣಾಮ ಬೀರುವ ಐತಿಹಾಸಿಕ ತೀರ್ಪು ನೀಡಿದೆ.
  Read:  In English 
ಸಾಗರೋತ್ತರ ವಹಿವಾಟಿನ ಮೇಲೆ ತೆರಿಗೆ ವಿಧಿಸುವ ಅಧಿಕಾರವು ದೇಶಿ ತೆರಿಗೆ ಪ್ರಾಧಿಕಾರಗಳಿಗೆ ಇಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಎಸ್. ಎಚ್. ಕಪಾಡಿಯಾ ನೇತೃತ್ವದ ತ್ರಿಸದಸ್ಯ ಪೀಠ ಅಭಿಪ್ರಾಯಪಟ್ಟಿದೆ. ಈ ಮೂಲಕ ಬಾಂಬೆ ಹೈಕೋರ್ಟ್‌ನ ಈ ಮೊದಲಿನ ತೀರ್ಪು ರದ್ದುಪಡಿಸಿದೆ.

ತೀರ್ಪು ಹೀಗಿದೆ: ಮಧ್ಯಂತರ ತೀರ್ಪಿನ ಅನ್ವಯ ವೊಡಾಫೋನ್ ಸಂಸ್ಥೆ ಠೇವಣಿ ಇರಿಸಿದ್ದ 2,500 ಕೋಟಿಗಳನ್ನು ಶೇ 4ರ ಬಡ್ಡಿ ದರದಲ್ಲಿ ಆದಾಯ ತೆರಿಗೆ ಇಲಾಖೆಯು ಎರಡು ತಿಂಗಳಲ್ಲಿ ಮರಳಿಸಬೇಕು.8,500 ಕೋಟಿಗಳ ಬ್ಯಾಂಕ್ ಖಾತರಿ ಮೊತ್ತವನ್ನೂ 4 ವಾರಗಳಲ್ಲಿ ಮರಳಿಸಬೇಕು ಎಂದು ಪೀಠವು ಸುಪ್ರೀಂಕೋರ್ಟ್ ರಿಜಿಸ್ಟ್ರಾರ್‌ಗೆ ಸೂಚಿಸಿದೆ.

2007ರ ಮೇ ತಿಂಗಳಿನಲ್ಲಿ ನಡೆದ ಸ್ವಾಧೀನ ಪ್ರಕ್ರಿಯೆಯಲ್ಲಿ, ಬ್ರಿಟನ್ ಮೂಲದ ವೊಡಾಫೋನ್, ಹಚಿಸನ್ ಎಸ್ಸಾರ್ ಲಿಮಿಟೆಡ್‌ನ (ಎಚ್‌ಇಎಲ್) ಶೇ 67ರಷ್ಟು ಪಾಲನ್ನು ಹಾಂಕಾಂಗ್ ಮೂಲದ ಹಚಿಸನ್ ಗ್ರೂಪ್‌ನಿಂದ ಖರೀದಿಸಿತ್ತು. ಈ ಸ್ವಾಧೀನ ಪ್ರಕ್ರಿಯೆಯು ದಿನಬೆಳಗಾಗುವುದರೊಳಗೆ ನಡೆದಿಲ್ಲ ಎಂದು ನ್ಯಾ. ಕಪಾಡಿಯಾ ಹೇಳಿದ್ದಾರೆ

ವೊಡಾಫೋನ್ ಸಂಸ್ಥೆಯು 1994ರಿಂದಲೇ ದೇಶದಲ್ಲಿ ಅಸ್ತಿತ್ವದಲ್ಲಿ ಇದೆ. ಸ್ವಾಧೀನ ಪ್ರಕ್ರಿಯೆಯು ಆದಾಯ ತೆರಿಗೆಗೆ ಒಳಪಡುವುದಿಲ್ಲ ಎಂದು ವಾದಿಸಿದ್ದ ಜಗತ್ತಿನ ಅತಿದೊಡ್ಡ ಟೆಲಿಕಾಂ ಸಂಸ್ಥೆ ವೊಡಾಫೋನ್ ಗೆ ಈ ಗೆಲುವು ಸಿಕ್ಕಿರುವುದರಿಂದ ಟೆಲಿಕಾಂ ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅವಕಾಶಗಳು ಹೆಚ್ಚುವ ಸೂಚನೆಗಳು ಸಿಕ್ಕಿದೆ.
User Comments
[ ಅಭಿಪ್ರಾಯ ಬರೆಯಿರಿ ]
ಈ ಲೇಖನಕ್ಕೆ ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ.
1st Test , Lord's Cricket Ground, St John's Wood
England won by 5 wickets
Follow Oneindia Kannada on Twitter
Oneindia Kannada Facebook fan page
Write Comments on this Article