ಲಖನೌ, ಅ. 31 : ಕಾರ್ತೀಕ ಶುಕ್ಲ ಪಂಚಮಿಯ ಬೆಳಿಗ್ಗೆ 7.20ಕ್ಕೆ ವಿಶ್ವದ ಜನಸಂಖ್ಯೆ 700 ಕೋಟಿ ತಲುಪಿದೆ. ಈ ವಿಶ್ವ ದಾಖಲೆಯನ್ನು ಬರೆದ ಮಗು 'ನರ್ಗಿಸ್' ಹುಟ್ಟಿದ್ದು ಜನಸಂಖ್ಯೆಯಲ್ಲಿ ವಿಶ್ವದಾಖಲೆ (121 ಕೋಟಿ) ಬರೆಯುತ್ತಿರುವ ಭಾರತದ ಉತ್ತರ ಪ್ರದೇಶದ ಮಲ್ಲಿಯಾಹಾಬಾದ್ ಎಂಬ ಗ್ರಾಮದಲ್ಲಿ. ಎಂಥ ಕಾಕತಾಳೀಯ!
700 ಕೋಟಿಯ ಮಗು ಎಂದು ವಿಶ್ವಸಂಸ್ಥೆಯೇ ಘೋಷಿಸಿದ ಈ ಮಗು ಹುಟ್ಟಿದ್ದು ಅಜಯ್ ಕುಮಾರ್ ಮತ್ತು ವಿನಿತಾ ಎಂಬ ದಂಪತಿಗಳಿಗೆ. ಮಗು ಹುಟ್ಟಿದ ಸಂದರ್ಭದಲ್ಲಿ ಆರೋಗ್ಯ ಇಲಾಖೆ ಮತ್ತು ಮಕ್ಕಳ ಕಲ್ಯಾಣಕ್ಕಾಗಿ ಇರುವ ಸರಕಾರೇತರ ಸಂಸ್ಥೆ ಪ್ಯಾನ್ ಇಂಡಿಯಾ ಸಣ್ಣ ಕಾರ್ಯಕ್ರಮ ಆಯೋಜಿಸಿ ದಂಪತಿ ಮತ್ತು ಮಗುವನ್ನು ಅಭಿನಂದಿಸಿದವು.
ಮಗು ಹುಟ್ಟಿದ್ದು ಮನಿಲಾಸ್ ಜೋಸ್ ಫೇಬಲ್ಲಾ ಮೆಮೋರಿಯಲ್ ಹಾಸ್ಪಿಟಲ್ ನಲ್ಲಿ. ಆ ವೇಳೆಗಾಗಲೆ ಮಾಧ್ಯಮದವರು ಮತ್ತು ನೂರಾರು ಕ್ಯಾಮೆರಾ ಫ್ಲಾಷ್ ಗಳು ಆ ಸಂಭ್ರಮಕ್ಕೆ ಸಜ್ಜಾಗಿದ್ದವು. ಹೆಣ್ಣು ಭ್ರೂಣಗಳ ಹತ್ಯೆ, ಮಹಿಳೆಯರ ಮೇಲೆ ದೌರ್ಜನ್ಯ ಅವ್ಯಾಹತವಾಗಿ ನಡೆಯುತ್ತಿರುವ ಈ ಸಂದರ್ಭದಲ್ಲಿ 700 ಕೋಟಿಯ ಮಗುವಾಗಿ ಹುಟ್ಟಿದ್ದು ಹೆಣ್ಣುಮಗುವಾಗಿದ್ದು ನಿಜಕ್ಕೂ ವಿಸ್ಮಯ.