ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುವ ಪ್ರೇಮಿಗಳ 'ಆಕಾಶಬುಟ್ಟಿಯಲ್ಲಿ ಸೆಕ್ಸ್' ವಿಡಿಯೋ ರಾದ್ಧಾಂತ

By Srinath
|
Google Oneindia Kannada News

skydiving-sex-video-in-california-creates-flutters
ಕ್ಯಾಲಿಫೋರ್ನಿಯಾ, ಅ. 25: ಆಕಾಶದಲ್ಲಿ ಧಿಮ್ಮಿರಂಗ ಅಂತ ದೀಪಾವಳಿ ಆಚರಿಸಿ, ಪ್ರೇಮದಾಟದಲ್ಲಿ ತೇಲಾಡಿದ ಯುವಪ್ರೇಮಿಗಳಿಗೆ ಅಮೆರಿಕ ಸರಕಾರ ಈಗ ಕಾನೂನು ಕೋಳ ತೊಡಿಸುವ ಕಾರ್ಯ ನಡೆಸಿದೆ.

ಏನಾಯಿತೆಂದರೆ skydiverಗಳಾದ ಅಲೆಕ್ಸ್ ಟೊರೆಸ್ ಮತ್ತು ಹೋಪ್ ಹೊವೆಲ್ ಎಂಬ ನವ ತರುಣ, ತರುಣಿ ಆಕಾಶಬುಟ್ಟಿಯಲ್ಲಿ ಸ್ವೇಚ್ಚೆಯಿಂದ ವಿಹರಿಸುತ್ತಾ ರಾಸಲೀಲೆ ನಡೆಸಿದ್ದಾರೆ. ಅಷ್ಟೇ ಆಗಿದ್ದರೆ ಸುಮ್ಮನಾಗಬಹುದಿತ್ತೇನೋ. ಆದರೆ ಈ ಯುವಜೋಡಿ ತಮ್ಮ ಕಾಮಕೇಳಿಯನ್ನು ಚಾಚೂತಪ್ಪದೆ ವಿಡಿಯೋ ಚಿತ್ರೀಕರಣ ಮಾಡಿದ್ದಾರೆ. ಅಷ್ಟೇ ಆಗಿದ್ದರೆ ಸುಮ್ಮನಾಗಬಹುದಿತ್ತೇನೋ. ಆದರೆ ಅವರು ಆ ವಿಡಿಯೋವನ್ನು ತಮ್ಮ blogಗೂ ತುರುಕಿದ್ದಾರೆ.

ಸರಿ ಇಂತಹುದಕ್ಕೇ ಕಾದುಕುಳಿತಿದ್ದ ಶಾಲೆಯೊಂದರ ಪುಂಡರ ತಂಡ ಅದನ್ನು ಹೇಗೋ ಪತ್ತೆ ಹಚ್ಚಿ, ಇಡೀ ವಿಡಿಯೋವನ್ನು ಇಂಟರ್ನೆಟ್‌ಗೆ ಹಾಕಿದೆ. ಅಷ್ಟು ಆಗಿದ್ದೇ ತಡ ಇಡೀ ಜಗತ್ತು ಪಿಳಿಪಿಳಿ ಕಣ್ಣು ಬಿಟ್ಟುಕೊಂಡು ಯುವಜೋಡಿಯ ಕಾಮಕೇಳಿಯನ್ನು ಚಪ್ಪರಿಸಿದೆ. ಅದೇ ಈಗ ಯಡವಟ್ಟಾಗಿರುವುದು.

ಟೊರೆಸ್ ಮತ್ತು ಹೋಪ್ ಹೊವೆಲ್ ಜೋಡಿ ಆಕಾಶದಲ್ಲಿ ಧುಮುಕುವ ಮೊದಲು ಖಾಸಗಿ ವಿಮಾನದಲ್ಲಿ ಸ್ವಚ್ಚಂದ ಪ್ರೇಮದಾಟ ನಡೆಸಿದೆ. ಮೊದಲು ಅದನ್ನು ಚಿತ್ರೀಕರಿಸಿಕೊಂಡಿದೆ. ಅಷ್ಟು ಸಾಲದು ಎಂದು ವಿಮಾನದಿಂದ ಹಾರುತ್ತಾ 'ಆಕಾಶಬುಟ್ಟಿಯಲ್ಲಿ ಸೆಕ್ಸ್' ನಡೆಸಿದೆ.

ಒಂದು ಪ್ರೇಮಘಟ್ಟದಲ್ಲಿ ವಿಮಾನದಲ್ಲಿ ಪೈಲಟ್ ಎದುರೇ ಈ ಜೋಡಿ ಕಾಮಕೇಳಿ ನಡೆಸಿದೆ. ವಿಮಾನ ಎಷ್ಟೇ ಖಾಸಗಿಯದ್ದಾದರೂ ಇಂತಹ ಆಟ ಅಪಾಯಕಾರಿ ಎಂದಿರುವ ವಾಯುಯಾನ ಅಧಿಕಾರಿಗಳು ಈಗ ಜೋಡಿಗೆ ಕೋಳ ತೊಡಿಸುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ.

English summary
Skydiving sex video in California creates flutters: An explicit video of a skydiving sex stunt has sparked an investigation by US aviation authorities. The video shows skydiving instructor Alex Torres and a woman having sex as they freefall over Kern County, California.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X