ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತುಳು ಭಾಷೆಗೆ ಮಾನ್ಯತೆ : ವೀರೇಂದ್ರ ಹೆಗ್ಗಡೆ ಸಂಕಲ್ಪ

By * ಚಿದಂಬರ ಬೈಕಂಪಾಡಿ, ಮಂಗಳೂರು
|
Google Oneindia Kannada News

All India Tulu sammelana in Savanur
ಸವಣೂರು, ಅ.8 : ತುಳು ಭಾಷೆಯನ್ನು ಸಂವಿಧಾನ ಎಂಟನೇ ಪರಿಚ್ಛೇದದಲ್ಲಿ ಸೇರ್ಪಡೆ ಮಾಡುವತನಕ ವಿರಮಿಸುವುದಿಲ್ಲ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ. ಅವರು ಸವಣೂರಲ್ಲಿ ಶುಕ್ರವಾರ ಅಖಿಲ ಭಾರತ ತುಳು ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು.

ಸವಣೂರು ವಿದ್ಯಾರಶ್ಮಿ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಕೆದಂಬಾಡಿ ಜತ್ತಪ್ಪ ರೈ ಸಭಾಂಗಣದಲ್ಲಿ ಸಕಲ ಸಂಭ್ರಮದೊಂದಿಗೆ ಸಮ್ಮೇಳನವನ್ನು ಡಾ. ಹೆಗ್ಗಡೆ ಉದ್ಘಾಟಿಸಿ ತುಳು ಭಾಷೆಗೆ ಮಾನ್ಯತೆ ಸಿಗುವಂತೆ ಮಾಡಲು ಎಲ್ಲರೂ ನೆರವಾಗಬೇಕೆಂದರು.

ಇಂಟರ್ನೆಟ್ ತುಳುವಿನ ಬಳಕೆಗೆ ಪೂರಕವಾಗಿದೆ. ಕಳೆದ ವಿಶ್ವ ಸಮ್ಮೇಳನದ ಬಳಿಕ ಆ ಬಳಕೆ ದೊಡ್ಡ ಪ್ರಮಾಣದಲ್ಲಿ ಹೆಚ್ಚಿದೆ ಎಂದು ಜರ್ಮನಿ ವಿವಿಯ ಸಂದರ್ಶಕ ಉಪಾಧ್ಯಾಯ ಡಾ.ವಿವೇಕ ರೈ ಅವರು ಹೇಳಿದರು.

ಇಂಧನ ಸಚಿವೆ ಶೋಭಾ ಕರಂದ್ಲಾಜೆ ಅವರು ಮುಖ್ಯ ಅತಿಥಿಗಳಾಗಿದ್ದು ಹೊಸಪುಸ್ತಕಗಳನ್ನು ಬಿಡುಗಡೆಗೊಳಿಸಿದರು. ನಮ್ಮ ತುಳು ನಾಡಿನ ಭೂತಾರಾಧನೆ ಸೇರಿದಂತೆ ನಂಬಿಕೆಯ ವಿಷಯಗಳನ್ನು ವೇಷಗಳನ್ನು ಮೆರವಣಿಗೆ ತರುವುದನ್ನು ನಿಲ್ಲಿಸಬೇಕು ಎಂದು ಅವರು ಹೇಳಿದರು.

ಸಂಸದ ನಳಿನಕುಮಾರ್ ಕಟೀಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ತುಳು ಅಕಾಡೆಮಿ ಅಧ್ಯಕ್ಷ ಡಾ.ಪಾಲ್ತಾಡಿ ರಾಮಕೃಷ್ಣ ಆಚಾರ್ ಅವರು ತುಳು ಅಕಾಡೆಮಿ ಸಿದ್ಧಿ ಸಾಧನೆಗಳನ್ನು ತಿಳಿಸುತ್ತಾ ತುಳುವಿನ ಕೆಲಸಗಳು ನಿರಂತರ ನಡೆಯಲಿ ಎಂದರು.

ಸವಣೂರು ಪದ್ಮಾವತಿ ಅಮ್ಮನವರ ಬಸದಿಯಿಂದ ಕೊಂಬು ಕಹಳೆ, ಗೊಂಬೆ ಕುಣಿತ, ಹುಲಿ ಕುಣಿತ, ಕೋಲು ಕುಣಿತ, ಬಣ್ಣದ ಚತ್ರಿ ಹಿಡಿದ ವಿದ್ಯಾರ್ಥಿಗಳು ಕೀಲು ಕುದುರೆ, ವಿದ್ಯಾರಶ್ಮಿ ಸಂಸ್ಥೆಯ ಕುದುರೆ ಎಲ್ಲದಕ್ಕೂ ಕಿರೀಟ ಎಂಬಂತೆ ವಿಶ್ವ ತುಳು ಸಮ್ಮೇಳನದ ಲಾಂಛನ ಪ್ರತಿನಿಧಿಸುವ ಸಾಲಂಕೃತ ವಾಹನದೊಂದಿಗೆ ಮೆರವಣಿಗೆಗೆ ಮೆರಗು ನೀಡಿತು.

English summary
Dr Veerendra Heggade, dharmadhikari of Dharmasthala, has said that he will not rest until Tulu language is recognized and included in the 8th schedule of Constitution of India. He was participating in All India Tulu seminar held in Savanur, Haveri district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X